Assembly Session; ಅಗಲಿದ ದ್ವಾರಕೀಶ್ ಮತ್ತು ಅಪರ್ಣಗೆ ಶ್ರದ್ಧಾಂಜಲಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

Assembly Session; ಅಗಲಿದ ದ್ವಾರಕೀಶ್ ಮತ್ತು ಅಪರ್ಣಗೆ ಶ್ರದ್ಧಾಂಜಲಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 15, 2024 | 2:08 PM

Assembly Session; ದ್ವಾರಕೀಶ್ ಅವರ ಬಗ್ಗೆ ಮಾತಾಡಿದ ಸಿದ್ದರಾಮಯ್ಯ, ಮೆಕ್ಯಾನಿಕಲ್ ಎಂಜಿನೀಯರ್ ಆಗಿದ್ದರೂ ಸಿನಿಮಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಮೈಸೂರಿನ ದ್ವಾರಕೀಶ್, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದರು, ಸ್ನೇಹಜೀವಿಯಾಗಿದ್ದರು ಮತ್ತು ಒಮ್ಮೆ ಅಸೆಂಬ್ಲಿ ಚುನಾವಣೆಗೆ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಿದ್ದರು ಎಂದು ಹೇಳಿದರು.

ಬೆಂಗಳೂರು: ವಿಧಾನಸಭೆಯ ಮುಂಗಾರು ಅಧಿವೇಶನ ಇಂದಿನಿಂದ ಶುರುವಾಗಿದೆ. ಅಸೆಂಬ್ಲಿ ಸ್ಪೀಕರ್ ಯುಟಿ ಖಾದರ್ ಅವರು ಸದನದಲ್ಲಿ ಸದಸ್ಯರಿಗೆ ಸಂವಿಧಾನದ ಪ್ರಸ್ತಾವನೆ ಬೋಧಿಸಿದ ನಂತರ ಅಗಲಿದ ಗಣ್ಯರಿಗೆ ಸಂತಾಪ ಸಲ್ಲಿಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖ್ಯಾತ ನಿರ್ಮಾಪಕನಿರ್ದೇಶಕ, ನಟ ದ್ವಾರಕೀಶ್ ಮತ್ತು ಕಳೆದ ಗುರುವಾರ ಲಂಗ್ ಕ್ಯಾನ್ಸರ್ ಗೆ ಬಲಿಯಾದ ನಟಿನಿರೂಪಕಿ ಅಪರ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಚಿಕ್ಕಮಗಳೂರಿನಲ್ಲಿ ಜನಿಸಿದ ಅಪರ್ಣ ಅಪಾರ ಮತ್ತು ಬಹುಮುಖ ಪ್ರತಿಭೆಯ ಕಲಾವಿದೆಯಾಗಿದ್ದರು. ಪುಟ್ಣಣ್ಣ ಕಣಗಾಲ್ ನಿರ್ದೇಶನದ ‘ಮಸಣದ ಹೂ’ ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದ ಅವರು ಒಬ್ಬ ನಿರೂಪಕಿಯಾಗಿ ಮಾಡಿದ ಸಾಧನೆ ದೊಡ್ಡದು. ಶುದ್ಧ ಕನ್ನಡವನ್ನು ಅರಳು ಹುರಿದಂತೆ ಮಾತಾಡುತ್ತಿದ್ದ ಅಪರ್ಣ ಅವರಂಥ ನಿರೂಪಕಿ ಮತ್ತೊಬ್ಬರು ಸಿಗಲಾರರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    CM Siddaramaiah TV9 Exclusive Interview Live: ಟಿವಿ9 ವಿಶೇಷ ಸಂದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ