CM Siddaramaiah TV9 Exclusive Interview Live: ಟಿವಿ9 ವಿಶೇಷ ಸಂದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ

CM Siddaramaiah TV9 Exclusive Interview Live: ಟಿವಿ9 ವಿಶೇಷ ಸಂದರ್ಶನದಲ್ಲಿ ಸಿಎಂ ಸಿದ್ದರಾಮಯ್ಯ

ಗಂಗಾಧರ​ ಬ. ಸಾಬೋಜಿ
|

Updated on:Jul 13, 2024 | 8:30 PM

ಮುಡಾ ಸೈಟ್ ಹಂಚಿಕೆ ವಿವಾದ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಕರ್ನಾಟಕದಲ್ಲಿ ಸಂಚಲನ ಸೃಷ್ಟಿಸಿವೆ. ಇದೇ ವಿಚಾರಕ್ಕೆ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ನಿಗಿನಿಗಿ ಕೆಂಡಕಾರುತ್ತಿದೆ. ಇಷ್ಟೇ ಅಲ್ಲದೇ, ವಿಧಾನ ಮಂಡಲ ಅಧಿವೇಶನದಲ್ಲೂ ಕಾಂಗ್ರೆಸ್​ನ್ನು ಕಟ್ಟಿಹಾಕೋದಕ್ಕೆ ವಿಪಕ್ಷಗಳು ರಣತಂತ್ರ ಹೆಣೆಯುತ್ತಿವೆ. ಎಲ್ಲಾ ಆರೋಪಗಳಿಗೆ ಸಿಎಂ ಸಿದ್ದರಾಮಯ್ಯ ಟಿವಿ9 ಎಕ್ಸ್​ಕ್ಲ್ಯೂಸಿವ್ ಸಂದರ್ಶನದಲ್ಲಿ ತಿರುಗೇಟು ನೀಡಿದ್ದಾರೆ.

ಬೆಂಗಳೂರು, ಜುಲೈ 13: ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಸದ್ಯ ಹಗರಣಗಳದ್ದೇ ಚರ್ಚೆ ಜೋರಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ರೂ. ಹಗರಣ ಆರೋಪ ಒಂದು ಕಡೆ ಆದರೆ, ಸಿಎಂ (Siddaramaiah) ಇಡೀ ಕುಟುಂಬ ಭಾಗಿಯಾಗಿದೆ ಎನ್ನಲಾಗುತ್ತಿರುವ ಮುಡಾ (Muda) ಸೈಟ್​ ಹಂಚಿಕೆ ಪ್ರಕರಣ ಮತ್ತೊಂದು ಕಡೆ. ಸದ್ಯ ಈ ಪ್ರಕರಣಗಳು ಕಾಂಗ್ರೆಸ್​ ಸರ್ಕಾರಕ್ಕೆ ತಲೆನೋವಾಗಿವೆ. ಅಲ್ಲದೇ ವಿಪಕ್ಷಗಳಿಗೆ ಇವೇ ಪ್ರಕರಣಗಳು ದೊಡ್ಡ ಅಸ್ತ್ರವಾಗಿವೆ. ಅದು ಎಷ್ಟರ ಮಟ್ಟಿಗೆ ಅಂದರೆ ಸೋಮವಾರದಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನದಲ್ಲಿ ಪ್ರಸ್ತಾಪಿಸಲು ಬಿಜೆಪಿ ಮತ್ತು ಜೆಡಿಎಸ್ ಜಂಟಿ ಹೋರಾಟಕ್ಕೆ ಸಜ್ಜಾಗಿವೆ. ಇನ್ನು ಇದೇ ವಿಚಾರವಾಗಿ ನಿನ್ನೆ ಮೈಸೂರಿನಲ್ಲಿ ಬಿಜೆಪಿ ಪ್ರತಿಭಟನೆ ಕೂಡ ಮಾಡಿತ್ತು. ಸಿಎಂ ಸಿದ್ದರಾಮಯ್ಯ ಪ್ರತಿಪಕ್ಷಗಳ ಎಲ್ಲಾ ಆರೋಪಗಳಿಗೆ ಪ್ರತ್ಯುತ್ತರ ಕೊಟ್ಟಿದ್ದಾರೆ. ಟಿವಿ9 ಸೂಪರ್ ಎಕ್ಸ್​ಕ್ಲ್ಯೂಸಿವ್ ಸಂದರ್ಶನದಲ್ಲಿ ಕಡ್ಡಿ ಮುರಿದಂತೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಲೈವ್ ಸಂದರ್ಶನ ಇಲ್ಲಿದೆ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Jul 13, 2024 06:30 PM