Assembly Session: ಶಿವಕುಮಾರ್ ಅಗಲಿದವರಿಗೆ ಸಂತಾಪ ಸಲ್ಲಿಸಿದ ಬಳಿಕ ಸಿದ್ದರಾಮಯ್ಯ ಸಭಾಧ್ಯಕ್ಷರ ಕಾರ್ಯ ಮೆಚ್ಚಿದರು

Assembly Session: ಶಿವಕುಮಾರ್ ಅಗಲಿದವರಿಗೆ ಸಂತಾಪ ಸಲ್ಲಿಸಿದ ಬಳಿಕ ಸಿದ್ದರಾಮಯ್ಯ ಸಭಾಧ್ಯಕ್ಷರ ಕಾರ್ಯ ಮೆಚ್ಚಿದರು

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 15, 2024 | 3:00 PM

Assembly Session: ಶಿವಕುಮಾರ್ ನಂತರ ಮಾತಾಡಿದ ಸಿಎಂ ಸಿದ್ದರಾಮಯ್ಯ, ಸದನದ ಆಸನಗಳಿಗೆ ಪೇಂಟ್ ಹೊಡಿಸಿ ಸದನದ ಒಳಾಂಗಣದಲ್ಲಿ ಕೆಲ ಬದಲಾವಣೆಗಳನ್ನು ಮಾಡಿಸಿ ಅದರ ಸೊಬಗು ಹೆಚ್ಚಿಸಿರುವ ವಿಧಾನಸಭಾಧ್ಯಕ್ಷ ಯುಟಿ ಖಾದರ್ ಅವರಿಗೆ ಕಾಂಗ್ರೆಸ್ ಶಾಸಕರು ಮತ್ತು ಸದನದ ಎಲ್ಲ ಸದಸ್ಯರ ಪರವಾಗಿ ಧನ್ಯವಾದ ಮತ್ತು ಕೃತಜ್ಞತೆಯನ್ನು ಸಲ್ಲಿಸಿದರು.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯರ ಹಾಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಹ ಸದನದಲ್ಲಿಂದು ಇತ್ತೀಚಿಗೆ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ವಾಸು ಅವರ ಬಗ್ಗೆ ಮಾತಾಡಿದ ಅವರು ಮೈಸೂರಿನ ಮೇಯರ್ ಆಗಿದ್ದ ಅವರು 2013 ರಲ್ಲಿ ವಿಧಾನಸಭೆಗೂ ಆಯ್ಕೆಯಾಗಿದ್ದರು ಎಂದು ಹೇಳಿದರು. ದ್ವಾರಕೀಶ್ ಅವರ ಬಗ್ಗೆ ಅಪ್ತತೆಯಿಂದ ಮಾತಾಡಿದ ಶಿವಕುಮಾರ್ ತನ್ನೊಂದಿಗೆ ಬಹಳ ಆತ್ಮೀಯರಾಗಿದ್ದ ಅವರ ಸಿನಿಮಾಗಳನ್ನು ಬಹಳ ಇಷ್ಟಪಟ್ಟು ನೋಡುತ್ತಿದ್ದೆ, ಅವರು ಮತ್ತು ದಿವಂಗತ ವಿಷ್ಣುವರ್ಧನ್ ಅಭಿನಯದ ‘ಸಿಂಗಾಪೂರ್ ನಲ್ಲಿ ರಾಜಾಕುಳ್ಳ‘ ಚಿತ್ರವನ್ನು ನವರಂಗ್ ಥೇಟರ್ ನಲ್ಲಿ ನೋಡಿದ್ದಾಗಿ ಹೇಳಿದರು. ಸಾಹಿತ್ಯ ಲೋಕದಲ್ಲಿ ಜನಪ್ರಿಯ ಲೇಖಕಿ ಎನಿಸಿಕೊಂಡಿದ್ದ ಕಮಲಾ ಹಂಪನಾ ಅವರೊಂದಿಗೆ 50 ವರ್ಷಗಳ ಒಡನಾಟ ಅಂತ ಹೇಳಿದ ಕನಕಪುರ ಶಾಸಕ, ಖ್ಯಾತ ಆರ್ಕಿಟೆಕ್ಟ್ ಅಗಿರುವ ಅವರ ಮತ್ತು ತಾನು ಒಂದೇ ಶಾಲೆಯಲ್ಲಿ ಓದಿದ್ದು ಅಂತ ಹೇಳಿದರು. ಗುರುವಾರ ನಿಧನರಾದ ನಟಿ ಮತ್ತು ನಿರೂಪಕಿ ಅಪರ್ಣ ಕನ್ನಡ ಭಾಷೆಗೆ ಘನತೆ ತಂದುಕೊಟ್ಟ ನಿರೂಪಕಿಯಾಗಿದ್ದರು ಮತ್ತು ಸರಕಾರದ ಅನೇಕ ಕಾರ್ಯಕ್ರಮಗಳನ್ನು ನಿರೂಪಿಸಿದ್ದರು ಅಂತ ಹೇಳಿ ಇವರೆಲ್ಲರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಬೆಂಗಳೂರು: ವೈಟ್ ಟಾಪಿಂಗ್ ಕಾಮಗಾರಿ ಚಾಲನೆ ವೇಳೆ ಡಿಕೆ ಶಿವಕುಮಾರ್​​ ಶೂ ಕಳವು!