ದಮ್ಮನಕಟ್ಟೆ ಸಫಾರಿಯಲ್ಲಿ ವಾಹನದ ಎದುರು ಹುಲಿ ಕಂಡ ಪ್ರವಾಸಿಗರಿಗೆ ಅತಂಕಮಿಶ್ರಿತ ರೋಮಾಂಚನ! ವನ್ಯಮೃಗದ ಗೊಂದಲ ಕೆಮೆರಾದಲ್ಲಿ ಸೆರೆ!
ತನ್ನ ಹಿಂಡು ವಾಸಮಾಡುವ ಏರಿಯಾವನ್ನು ಲೀಡರ್ ಮೂತ್ರ ವಿಸರ್ಜಿಸಿ ಇಲ್ಲವೇ ಮರಗಳಿಗೆ ಮೈ ಉಜ್ಜಿ ಬೌಂಡರಿಯನ್ನು ನಿರ್ಮಿಸುತ್ತದೆ. ತನ್ನದೇ ಪ್ರಜಾತಿಯ ಬೇರೆ ಗುಂಪಿನ ಪ್ರಾಣಿಯನ್ನು ತನ್ನ ಅದು ಏರಿಯಾದೊಳಗೆ ಸೇರಿಸಿಕೊಳ್ಳುವುದಿಲ್ಲ.
ಮೈಸೂರು: ವನ್ಯಮೃಗಗಳು (wild animals) ತಮ್ಮ ಮೀಸಲು ಪ್ರದೇಶದಲ್ಲಿ ಆಗಂತುಕರ ಪ್ರವೇಶ ಸಹಿಸಲಾರವು. ನಿಮಗೆ ಗೊತ್ತಿದೆ, ಹಿಂಸ್ರಪಶುಗಳ (carnivorous) ಗುಂಪುಗಳಿಗೆ ದಂಡನಾಯಕನ ಹಾಗೆ ಒಂದು ಗಂಡುಪ್ರಾಣಿಯಿರುತ್ತದೆ. ಅಂದರೆ ಕ್ಯಾಪ್ಟನ್! ಅದೇ ಹಿಂಡನ್ನು (flock) ಲೀಡ್ ಮಾಡುತ್ತದೆ. ತನ್ನ ಹಿಂಡು ವಾಸಮಾಡುವ ಏರಿಯಾವನ್ನು ಅದು ಮೂತ್ರ ವಿಸರ್ಜಿಸಿ ಇಲ್ಲವೇ ಮರಗಳಿಗೆ ಮೈ ಉಜ್ಜಿ ಬೌಂಡರಿಯನ್ನು ನಿರ್ಮಿಸುತ್ತದೆ. ತನ್ನದೇ ಪ್ರಜಾತಿಯ ಬೇರೆ ಗುಂಪಿನ ಪ್ರಾಣಿಯನ್ನು ತನ್ನ ಅದು ಏರಿಯಾದೊಳಗೆ ಸೇರಿಸಿಕೊಳ್ಳುವುದಿಲ್ಲ. ಮೈಸೂರಿನ ದಮ್ಮನಕಟ್ಟೆ ಸಫಾರಿ ಕೇಂದ್ರದಲ್ಲಿ ಈ ಹುಲಿಯ ಎದುರು ಸಫಾರಿಗೆ ಆಗಮಿಸಿದ್ದ ವಾಹನ ಎದುರಾದಾಗ ಅದಕ್ಕೆ ಅಂಥ ಫೀಲಿಂಗ್ ಬಂದಿರಬಹುದು. ನನ್ನ ಕ್ಷೇತ್ರದಲ್ಲಿ ಅಪರಚಿತ ವಸ್ತು! ಹುಲಿಗಳು ವಾಹನಗಳನ್ನು ಏನಂತ ಟ್ರೀಟ್ ಮಾಡುತ್ತವೆ ಅಂತ ಗೊತ್ತಿಲ್ಲ ಮಾರಾಯ್ರೇ. ಈ ಹುಲಿ ಸಫಾರಿ ವಾಹನವನ್ನು ಕಂಡು ಗಾಬರಿಗೊಂಡಿರುವ ಸಾಧ್ಯತೆಯೂ ಇದೆ. ಪ್ರವಾಸಕ್ಕೆ ಬಂದವರು ಹುಲಿಯನ್ನು ತಮ್ಮ ಕೆಮೆರಾಗಳಲ್ಲಿ ಸೆರೆಹಿಡಿದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ