ಯೂಟ್ಯೂಬ್ನಲ್ಲಿರೋ ಟಾಕ್ಸಿಕ್’ ಟೀಸರ್ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
‘ಟಾಕ್ಸಿಕ್’ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ಆಗಿದ್ದು, ಸಿನಿಮಾದ ದೃಶ್ಯ. ಈ ಮಧ್ಯೆ ಟಾಕ್ಸಿಕ್ ಚಿತ್ರದ ಆ ದೃಶ್ಯಕ್ಕೆ ಕತ್ತರಿ ಬೀಳುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಆಗಿದ್ದು, ಹಸಿಬಿಸಿ ದೃಶ್ಯ. ಈ ಸಂಬಂಧ ದೂರು ಕೂಡ ದಾಖಲಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.
ಯೂಟ್ಯೂಬ್ನಲ್ಲಿ ರಿಲೀಸ್ ಆದ‘ಟಾಕ್ಸಿಕ್’ ಸಿನಿಮಾದ ಟೀಸರ್ ಸಾಕಷ್ಟು ಸದ್ದು ಮಾಡಿತ್ತು. ಈ ಟೀಸರ್ನ ಅಲ್ಲಿ ಹಸಿಬಿಸಿ ದೃಶ್ಯಗಳು ಇದ್ದವು. ಈ ಸಂಬಂಧ ಮಹಿಳಾ ಆಯೋಗಕ್ಕೆ ದೂರು ಸಲ್ಲಿಕೆ ಆಗಿದೆ. ‘ನಾನು ಹಸಿಬಿಸಿ ದೃಶ್ಯ ಮಾಡೋದಿಲ್ಲ ಎಂದು ಯಶ್ ಈ ಮೊದಲು ಹೇಳಿದ್ದರು. ಆದರೆ, ಈಗ ರಿಲೀಸ್ ಆಗಿರುವ ಟಾಕ್ಸಿಕ್ ಅದಕ್ಕೆ ವಿರುದ್ಧವಾಗಿದೆ. ಕುಟುಂಬದವರು ಕುಳಿತು ಟೀಸರ್ನ ನೋಡೋಕೆ ಆಗುತ್ತಾ? ಅದನ್ನು ತೆಗೆದು ಹಾಕಿ’ ಎಂದು ಆಮ್ ಆದ್ಮಿ ಪಕ್ಷದ ಮಹಿಳಾ ಘಟಕ ಒತ್ತಾಯಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
