ಚಾಲಕನ ಹುಚ್ಚು ಸಾಹಸ: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಸಿಲುಕಿದ ಜನರಿದ್ದ ಟ್ರ್ಯಾಕ್ಟರ್

Updated By: ವಿವೇಕ ಬಿರಾದಾರ

Updated on: Jun 12, 2025 | 4:25 PM

ಭಾರೀ ಮಳೆಯಿಂದ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಚಿಕ್ಕ ಉದ್ಬಾಳ ಗ್ರಾಮದ ಹಳ್ಳ ತುಂಬಿ ಹರಿಯುತ್ತಿದೆ. ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಜಾತ್ರೆಗೆ ಹೋಗುತ್ತಿದ್ದ ಜನರನ್ನು ಹೊತ್ತ ಟ್ರ್ಯಾಕ್ಟರ್ ಸಿಲುಕಿದೆ. ಅದೃಷ್ಟವಶಾತ್ ಯಾರೂ ಸಾವನ್ನಪ್ಪಲಿಲ್ಲ ಆದರೆ, ಒಬ್ಬ ಬಾಲಕನ ಕೈ ಬೆರಳು ಮುರಿದಿದೆ.

ರಾಯಚೂರು, ಜೂನ್​ 12: ಟ್ರ್ಯಾಕ್ಟರ್​ ಚಾಲಕ ತನ್ನ ಹುಚ್ಚು ಸಾಹಸಕ್ಕೆ ಅಮಾಯಕರ ಜೀವ ಬಲಿ ಕೊಡುತ್ತಿದ್ದನು. ಆದರೆ, ಅದೃಷ್ಟವಶಾತ್ ಯಾವುದೇ ದುರ್ಘಟನೆ ಸಂಭವಿಸಿಲ್ಲ. ಭಾರಿ ಮಳೆಗೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಚಿಕ್ಕ ಉದ್ಬಾಳ ಗ್ರಾಮದಲ್ಲಿನ ಹಳ್ಳ ತುಂಬಿ ಹರಿಯುತ್ತಿತ್ತು. ತುಂಬಿ ಹರಿಯುತ್ತಿದ್ದ ಹಳ್ಳದಲ್ಲೇ ಚಾಲಕ ಟ್ಯ್ರಾಕ್ಟರ್​ ಚಲಾಯಿಸಿದ್ದಾನೆ. ಆದರೆ, ಟ್ರ್ಯಾಕ್ಟರ್​ ಹಳ್ಳದ ಮಧ್ಯದಲ್ಲಿ ಸಿಲುಕಿಕೊಂಡಿದೆ. ಟ್ರ್ಯಾಕ್ಟರ್​ನಲ್ಲಿ ಜನರಿದ್ದು, ಎಲ್ಲರೂ ಜಾತ್ರೆಗೆ ಹೊರಟಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಬಳಗಾನೂರು ಗ್ರಾಮದ ಜನರು ಟ್ರ್ಯಾಕ್ಟರ್​ನಲ್ಲಿ ಚಿಕ್ಕ ಉದ್ಬಾಳ ಗ್ರಾಮದ ಜಾತ್ರೆಗೆ ಹೊರಟಿದ್ದರು ಎಂದು ತಿಳಿದುಬಂದಿದೆ. ಟ್ರ್ಯಾಕ್ಟರ್​ ಮೇಲಿಂದ ಇಳಿಯೋ ಬರದಲ್ಲಿ ಬಾಲಕನ ಕೈ ಬೆರಳು ಮುರಿದಿದೆ.

Published on: Jun 12, 2025 04:23 PM