ವಿರಾಜಪೇಟೆ: ಅಮ್ಮತ್ತಿ ಕೊಡವ ಸಮಾಜದಲ್ಲಿ ವಾಲಗತ್ತಾಟ್ ​ನೃತ್ಯ ಸ್ಫರ್ಧೆಯ ಸಂಭ್ರಮ… ವಿಡಿಯೋ ಝಲಕ್ ನೋಡಿ

ವಿರಾಜಪೇಟೆ: ಅಮ್ಮತ್ತಿ ಕೊಡವ ಸಮಾಜದಲ್ಲಿ ವಾಲಗತ್ತಾಟ್ ​ನೃತ್ಯ ಸ್ಫರ್ಧೆಯ ಸಂಭ್ರಮ... ವಿಡಿಯೋ ಝಲಕ್ ನೋಡಿ
| Updated By: ಸಾಧು ಶ್ರೀನಾಥ್​

Updated on: Dec 13, 2023 | 12:19 PM

ಸಾಂಪ್ರದಾಯಿಕ ವಾಲಗತ್ತಾಟ್​ ನೃತ್ಯ ಸ್ಫರ್ಧೆಯಲ್ಲಿ ಸುಮಾರು 250ಕ್ಕೂ ಅಧಿಕ ಮಂದಿ ಭಾಗವಹಿಸಿ ಖುಷಿ ಪಟ್ಟರು. ಹಿರಿಯ ಮಹಿಳೆಯರು ಮತ್ತು ಪುರುಷರು ತಾವು ದಶಕಗಳ ಹಿಂದೆ ಕಲಿತಿದ್ದ ಸಾಂಪ್ರದಾಯಿಕ ಶೈಲಿಯ ನೃತ್ಯ ಪ್ರದರ್ಶಿಸಿದ್ರೆ, ಯುವ ಜನತೆ ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಯ ಹೆಜ್ಜೆಗಳನ್ನ ಹಾಕಿ ಸಂಭ್ರಮಿಸಿದ್ರು.

ಕೊಡಗು ಅಂದ್ರೆ ಸಾಕು ಇಲ್ಲಿನ ಆಚಾರ ವಿಚಾರ ಪದ್ಧತಿ ಸಂಪ್ರದಾಯಗಳೇ ವಿಭಿನ್ನ. ಅದ್ರಲ್ಲೂ ಇವರ ಸಾಂಪ್ರದಾಯಿಕ ವಾಲಗ ಮತ್ತು ಅದಕ್ಕೆ ಹಾಕುವ ಹೆಜ್ಜೆ ಅಂತೂ ತುಂಬಾ ವಿಭಿನ್ನ. ಇಂತಹ ವಾಲಗಕ್ಕೆ ಡಾನ್ಸ್​ ಮಾಡುವ ವಿಶಿಷ್ಟ ಸ್ಪರ್ಧೆಯೊಂದು ಎಲ್ಲರ ಗಮನ ಸೆಳೆಯಿತು. ಒಂದೆಡೆ ಲಯಬದ್ಧವಾಗಿ ಮೂಡಿ ಬರ್ತಾ ಇರೋ ವಾಲಗ.. ಈ ವಾಲಗ ಕೇಳ್ತಾ ಇದ್ರೆ ಕುಳಿತವರಿಗೆ ಕುಂತಲ್ಲೆ ಕಾಲು ಕುಣಿಸುವಷ್ಟು ಹುರುಪು. ಇನ್ನು ಇದೇ ವಾಲಗಕ್ಕೆ ಹೆಜ್ಜ ಹಾಕ್ತೀನಿ ಅಂತ ಸ್ಪರ್ಧೆ ಮಾಡಲು ಹೊರಟವರು ಹೇಗಿರಬಹುದು ಯೋಚಿಸಿ… ಹೌದು ಇದು ಕೊಡಗು ಜಿಲ್ಲೆಯ ಸಾಂಪ್ರದಾಯಿಕ ವಾಲಗತ್ತಾಟ್​ ಸ್ಫರ್ಧೆಯ ಸಂಭ್ರಮ… ವಿರಾಜಪೇಟೆ (Virajpet) ತಾಲ್ಲೂಕಿನ ಅಮ್ಮತ್ತಿ ಕೊಡವ ಸಮಾಜದಲ್ಲಿ (Ammathi kodava Traditional Valaga Dance) ಇಂತಹ ಒಂದು ವಿಶಿಷ್ಟ ಸ್ಪರ್ಧೆಯನ್ನ ಆಯೋಜಿಸಲಾಗಿತ್ತು. ಕೊಡಗಿನ ವಾಲಗಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಈ ವಾಲಗಕ್ಕೆ ಅದರದ್ದೇ ಆದ ವಿಶಿಷ್ಟ ಬಗೆಯ ನೃತ್ಯವೂ ಇದೆ. ಒಟ್ಟು 13 ಬಗೆಯ ನೃತ್ಯಗಳನ್ನ ವಾಲಗಕ್ಕೆ ಮಾಡಲಾಗುತ್ತದೆ. ಆದ್ರೆ ಇತ್ತೀಚೆಗೆ ಸಾಂಪ್ರದಾಯಿಕ ನೃತ್ಯ ಮರೆಯಾಗಿ ಆಧುನಿಕ ನೃತ್ಯ ಶೈಲಿ ಯನ್ನ ಯುವ ಜನತೆ ಹೆಚ್ಚಾಗಿ ಆಡಲಾರಂಭಿಸಿದ್ದಾರೆ. ಹಾಗಾಗಿ ನಶಿಸಿ ಹೋಗ್ತಾ ಇರೋ ಹಳೆಯ ನೃತ್ಯ ಮತ್ತು ವಾಲಗವನ್ನು ಉಳಿಸಿ ಬೆಳೆಸಲು ತೂಕ್ ಬೊಳಕ್​ ಸಾಂಸ್ಕೃತಿಕ ಅಕಾಡೆಮಿ ವಾಲಗತ್ತಾಟ್​ ನೃತ್ಯ ಸ್ಫರ್ದೆ ಆಯೋಜಿಸಿತ್ತು. ಪುಟಾಣಿಗಳಿಂದ ಹಿಡಿದು 70 ವರ್ಷ ಹಿರಿಯರವರೆಗೂ ಎಲ್ಲರೂ ನೃತ್ಯ ಸ್ಫರ್ಧೆಯಲ್ಲಿ ಭಾಗವಹಿಸಿ ಖುಷಿಪಟ್ಟರು.

ಸಾಂಪ್ರದಾಯಿಕ ವಾಲಗತ್ತಾಟ್​ ನೃತ್ಯ ಸ್ಫರ್ಧೆಯಲ್ಲಿ ಸುಮಾರು 250ಕ್ಕೂ ಅಧಿಕ ಮಂದಿ ಭಾಗವಹಿಸಿ ಖುಷಿ ಪಟ್ಟರು. ಹಿರಿಯ ಮಹಿಳೆಯರು ಮತ್ತು ಪುರುಷರು ತಾವು ದಶಕಗಳ ಹಿಂದೆ ಕಲಿತಿದ್ದ ಸಾಂಪ್ರದಾಯಿಕ ಶೈಲಿಯ ನೃತ್ಯ ಪ್ರದರ್ಶಿಸಿದ್ರೆ, ಯುವ ಜನತೆ ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಯ ಹೆಜ್ಜೆಗಳನ್ನ ಹಾಕಿ ಸಂಭ್ರಮಿಸಿದ್ರು. ಒಟ್ಟಾರೆ, ಯುವ ಪೀಳಿಗೆಗೆ ಹಳೆಯ ಸಂಸ್ಕೃತಿ ಮತ್ತು ನೃತ್ಯ ಪರಂಪರೆಯನ್ನ ಕಲಿಸಿಕೊಡುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ನೃತ್ಯ ಸ್ಪರ್ಧೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

Follow us