ಚಾಲಕನ ಅಜಾಗರೂಕತೆ: ಬಿಎಂಟಿಸಿ ಬಸ್ಗೆ ಡಿಕ್ಕಿ ಹೊಡೆದ ರೈಲು
ಬಿಎಂಟಿಸಿ ಬಸ್ಗೆ (BMTC Bus)ರೈಲು ನಡುವೆ ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರಿನ (Bengaluru) ಸಾದರಮಂಗಲ ಬಳಿ ನಡೆದಿದೆ. ರೈಲ್ವೆ ಪ್ಯಾರ್ಲಲ್ ರೋಡ್ನಲ್ಲಿ ರಿವರ್ಸ್ ತೆಗೆದುಕೊಳ್ಳುವಾಗ ಈ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಬಸ್ನಲ್ಲಿ ಪ್ರಯಾಣಿಕರು ಇರಲಿಲ್ಲ. ಇದರಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಇಂದು (ಜನವರಿ 26) ಬೆಳಗ್ಗೆ ಸಾದರಮಂಗಲ ಡಿಪೋ 51ರ KA57 F6000 ನಂಬರ್ನ ಬಸ್ ಕಾಡುಗೋಡಿ ಬಸ್ ಸ್ಟ್ಯಾಂಡ್ ಹೋಗಬೇಕೆಂದು ಚಾಲಕ ರಿವರ್ಸ್ ತೆಗೆದುಕೊಳ್ಳಲು ರೈಲ್ವೆ ಪ್ಯಾರ್ಲಲ್ ರೋಡ್ ನುಗ್ಗಿಸಿದ್ದಾನೆ. ಪರಿಣಾಮ ಏಕಾಏಕಿ ರೈಲು ಬಂದು ಗುದ್ದಿದ್ದು, ಬಸ್ ಹಿಂಭಾಗ ಜಖಂ ಆಗಿದೆ.
ಬೆಂಗಳೂರು, (ಜನವರಿ 26): ಬಿಎಂಟಿಸಿ ಬಸ್ಗೆ (BMTC Bus)ರೈಲು ನಡುವೆ ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರಿನ (Bengaluru) ಸಾದರಮಂಗಲ ಬಳಿ ನಡೆದಿದೆ. ರೈಲ್ವೆ ಪ್ಯಾರ್ಲಲ್ ರೋಡ್ನಲ್ಲಿ ರಿವರ್ಸ್ ತೆಗೆದುಕೊಳ್ಳುವಾಗ ಈ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಬಸ್ನಲ್ಲಿ ಪ್ರಯಾಣಿಕರು ಇರಲಿಲ್ಲ. ಇದರಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಇಂದು (ಜನವರಿ 26) ಬೆಳಗ್ಗೆ ಸಾದರಮಂಗಲ ಡಿಪೋ 51ರ KA57 F6000 ನಂಬರ್ನ ಬಸ್ ಕಾಡುಗೋಡಿ ಬಸ್ ಸ್ಟ್ಯಾಂಡ್ ಹೋಗಬೇಕೆಂದು ಚಾಲಕ ರಿವರ್ಸ್ ತೆಗೆದುಕೊಳ್ಳಲು ರೈಲ್ವೆ ಪ್ಯಾರ್ಲಲ್ ರೋಡ್ ನುಗ್ಗಿಸಿದ್ದಾನೆ. ಪರಿಣಾಮ ಏಕಾಏಕಿ ರೈಲು ಬಂದು ಗುದ್ದಿದ್ದು, ಬಸ್ ಹಿಂಭಾಗ ಜಖಂ ಆಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jan 26, 2026 03:11 PM
