Private plyer’s’ mafia: ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಕೇವಲ ಅದೃಷ್ಟವಂತರು ಮಾತ್ರ ಸುರಕ್ಷಿತವಾಗಿ ತಲುಪಬಲ್ಲರು!
ಮಹದೇಶ್ವರ ಬೆಟ್ಟದಿಂದ 20 ಕಿಮೀ ದೂರದಲ್ಲಿರುವ ನಾಗಮಲೆಗೆ ಹೋಗಲು ಒಬ್ಬೊಬ್ಬ ಭಕ್ತನಿಂದ ಜೀಪ್ ಡ್ರೈವರ್ ಗಳು ರೂ. 350 ಪೀಕುತ್ತಾರೆ.
ಚಾಮರಾಜನಗರ: ದುರ್ಗಮವೆನಿಸುವ ಹಾದಿಯಲ್ಲಿ ಪರಿಣಿತನಲ್ಲದ ಮತ್ತು ಡ್ರೈವಿಂಗ್ ಲೈಸನ್ಸ್ (driving license) ಹೊಂದಲು ಅರ್ಹತೆಯೂ ಇಲ್ಲದ ಚಾಲಕ ಓಡಿಸುವ ಜೀಪೊಂದರಲ್ಲಿ ಮಹದೇಶ್ವರ ಬೆಟ್ಟದಿಂದ (Mahadeshwara Betta) ನಾಗಮಲೆಗೆ 20 ಕಿಮೀ ಪ್ರಯಾಣಿಸುವುದು ಅಕ್ಷರಶಃ ನರಕದ ಬಾಗಿಲು ತಟ್ಟಿದಂತೆ! ಅಷ್ಟು ಮಾತ್ರವಲ್ಲ ಈ ಪ್ರಯಾಣಕ್ಕೆ ಜನ ವಿಮಾನದ ಟಿಕೆಟ್ ನಷ್ಟು ದುಬಾರಿ ಹಣ ತೆರಬೇಕು. ದಾರಿಯುದ್ದಕ್ಕೂ ಕಲ್ಲು ಮುಳ್ಳು ಮತ್ತು ಜೀಪಿನ ಟಾಪ್ ಮೇಲೂ ಜನ (top service)! ಜಿಲ್ಲೆಯ ಮಲೆ ಮಹದೇಶ್ವರನ ದರ್ಶನಕ್ಕೆ ಬರುವ ಭಕ್ತರು ಇಲ್ಲಿಗೆ ಸುರಕ್ಷಿತವಾಗಿ ಬಂದು ವಾಪಸ್ಸು ಹೋಗುವುದು ಪವಾಡವಲ್ಲದೆ ಮತ್ತೇನೂ ಅಲ್ಲ. ಮಹದೇಶ್ವರ ಬೆಟ್ಟದಿಂದ 20 ಕಿಮೀ ದೂರದಲ್ಲಿರುವ ನಾಗಮಲೆಗೆ ಹೋಗಲು ಒಬ್ಬೊಬ್ಬ ಭಕ್ತನಿಂದ ಜೀಪ್ ಡ್ರೈವರ್ ಗಳು ರೂ. 350 ಪೀಕುತ್ತಾರೆ. ತಕರಾರು ಮಾಡಿದರೆ ಜಗಳಕ್ಕೆ ಬರುತ್ತಾರೆ. ಈ ವಿಡಿಯೋ ವೀಕ್ಷಿಸಿ ಎಲ್ಲ ಅರ್ಥವಾಗುತ್ತದೆ. ಸಾರಿಗೆ ಮತ್ತು ಪೊಲೀಸ್ ಇಲಾಖೆ ಇವರನ್ನು ಪ್ರಶ್ನಿಸದು ಅಂತ ಬೇರೆ ಹೇಳಬೇಕಿಲ್ಲ ತಾನೇ?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ