Lucky Escape: ಮರ ಕಾರಿನ ಮೇಲೆ ಉರುಳಿಬಿದ್ದರೂ ಅದರಲ್ಲಿ ಪ್ರಯಾಣಿಸುತ್ತಿದ್ದವರು ಉಳಿದಿದ್ದು ಯಾಕೆ ಗೊತ್ತಾ?

Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 23, 2023 | 6:10 PM

ಭಾರಿ ಮಳೆ ಹಾಗೂ ಮರಗಳ ಉರುಳಿವಿಕೆಯಿಂದಾಗಿ ಚಿಕ್ಕಮಗಳೂರು-ಶೃಂಗೇರಿ ನಡುವಿನ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.

ಚಿಕ್ಕಮಗಳೂರು: ಮಳೆಗೆ ಸಂಬಂಧಿಸಿದ ಅನಾಹುತ (mishaps) ಆರಂಭವಾಗಿವೆ ಮಾರಾಯ್ರೇ. ಜಿಲ್ಲೆಯ ಶೃಂಗೇರಿ (Sringeri) ತಾಲ್ಲೂಕಿನ ಕುಂಚೆಬೈಲು ಎಂಬಲ್ಲಿ ಮರವೊಂದು ಪಾರ್ಕ್ ಮಾಡಿದ್ದ ವ್ಯಾನ್ ಒಂದರ ಮೇಲೆ ಉರುಳಿ ಬಿದ್ದಿದೆ. ಕಾರಲ್ಲಿದ್ದವರು ನಿಜಕ್ಕೂ ಅದೃಷ್ಟವಂತರು (fortunate). ಅವರು ವಾಹನವನ್ನು ಪಾರ್ಕ್ ಮಾಡಿ ಊಟಕ್ಕೆ ಹೋದಾಗ ಮರ ವ್ಯಾನ್ ಮೇಲೆ ಉರುಳಿದೆ. ವಾಹನ ಭಾರೀ ಪ್ರಮಾಣದಲ್ಲಿ ಜಖಂಗೊಂಡಿದೆ. ಭಾರಿ ಮಳೆ ಹಾಗೂ ಮರಗಳ ಉರುಳಿವಿಕೆಯಿಂದಾಗಿ ಚಿಕ್ಕಮಗಳೂರು-ಶೃಂಗೇರಿ ನಡುವಿನ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ