ಕಲಬುರಗಿಯ ಕೆಲವು ಹಳ್ಳಿಗಳಲ್ಲಿ ಬುಧವಾರ ರಾತ್ರಿ ಭೂಕಂಪನದ ಅನುಭವ, ಮನೆಬಿಟ್ಟು ಹೊರಬಂದ ಗ್ರಾಮಸ್ಥರು
ರಾತ್ರಿ ಭಾರಿ ಸದ್ದಿನೊಂದಿಗೆ ಭೂಕಂಪಿಸಿದ ಬಳಿಕ ಜನ ತಮ್ಮ ತಮ್ಮ ಮನೆಗಳಿಂದ ಹೊರಬಂದು ಕುಳಿತುಬಿಟ್ಟಿದ್ದಾರೆ. ಅನೇಕರು ರಾತ್ರಿಯಿಡೀ ಜಾಗರಣೆ ಮಾಡಿರುವುದಾಗಿ ಹೇಳಿದ್ದಾರೆ.
ಕಲಬುರಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನಲ್ಲಿರುವ ಗಡಿಕೇಶ್ವರ ಸುತ್ತಮುತ್ತ ಇರುವ ಹಳ್ಳಿಗಳಲ್ಲಿ ಬುಧವಾರ ರಾತ್ರಿ ಭೂಕಂಪವಾಗಿದೆ ಅಂತ ಗ್ರಾಮಗಳ ನಿವಾಸಿಗಳು ಹೇಳುತ್ತಿದ್ದಾರೆ. ವಿಡಿಯೋ ನೀವು ಗಮನಿಸಬಹುದು. ರಾತ್ರಿ ಭಾರಿ ಸದ್ದಿನೊಂದಿಗೆ ಭೂಕಂಪಿಸಿದ ಬಳಿಕ ಜನ ತಮ್ಮ ತಮ್ಮ ಮನೆಗಳಿಂದ ಹೊರಬಂದು ಕುಳಿತುಬಿಟ್ಟಿದ್ದಾರೆ. ಅನೇಕರು ರಾತ್ರಿಯಿಡೀ ಜಾಗರಣೆ ಮಾಡಿರುವುದಾಗಿ ಹೇಳಿದ್ದಾರೆ.