AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಚಕ ಗೆಲುವಿನೊಂದಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ನೈಟ್ ರೈಡರ್ಸ್

ರೋಚಕ ಗೆಲುವಿನೊಂದಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ನೈಟ್ ರೈಡರ್ಸ್

ಝಾಹಿರ್ ಯೂಸುಫ್
|

Updated on: Sep 22, 2025 | 10:53 AM

Share

CPL 2025: ಈ ಪಂದ್ಯದಲ್ಲಿ ಟಾಸ್ ಗೆದ್ದ ಗಯಾನಾ ಅಮೆಝಾನ್ ವಾರಿಯರ್ಸ್ ತಂಡದ ನಾಯಕ ಇಮ್ರಾನ್ ತಾಹಿರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗಯಾನಾ ಪಡೆ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಪರಿಣಾಮ ಗಯಾನಾ ಅಮೆಝಾನ್ ವಾರಿಯರ್ಸ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 130 ರನ್​ ಕಲೆಹಾಕಲಷ್ಟೇ ಶಕ್ತರಾದರು.

ಕೆರಿಬಿಯನ್ ಪ್ರೀಮಿಯರ್ ಲೀಗ್​ನ 13ನೇ ಸೀಸನ್​ನಲ್ಲಿ ಟ್ರಿನ್​ಬಾಗೊ ನೈಟ್ ರೈಡರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟ್ರಿನ್​ಬಾಗೊ ನೈಟ್ ರೈಡರ್ಸ್ ಹಾಗೂ ಗಯಾನಾ ಅಮೆಝಾನ್ ವಾರಿಯರ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಗಯಾನಾ ಅಮೆಝಾನ್ ವಾರಿಯರ್ಸ್ ತಂಡದ ನಾಯಕ ಇಮ್ರಾನ್ ತಾಹಿರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗಯಾನಾ ಪಡೆ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಪರಿಣಾಮ ಗಯಾನಾ ಅಮೆಝಾನ್ ವಾರಿಯರ್ಸ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು 130 ರನ್​ ಕಲೆಹಾಕಲಷ್ಟೇ ಶಕ್ತರಾದರು.

ಈ ಸುಲಭ ಗುರಿಯನ್ನು ಬೆನ್ನತ್ತಿದ ಟ್ರಿನ್​ಬಾಗೊ ನೈಟ್ ರೈಡರ್ಸ್ ತಂಡವು 116 ರನ್​ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಅಕೆಲ್ ಹೊಸೈನ್ 7 ಎಸೆತಗಳಲ್ಲಿ 16 ರನ್ ಬಾರಿಸಿ 18 ಓವರ್​ಗಳಲ್ಲಿ ತಂಡವನ್ನು ಗುರಿ ತಲುಪಿಸಿದರು. ಈ ಮೂಲಕ ಟ್ರಿನ್​ಬಾಗೊ ನೈಟ್ ರೈಡರ್ಸ್ ತಂಡವು 3 ವಿಕೆಟ್​ಗಳ ರೋಚಕ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಉಭಯ ತಂಡಗಳ ಪ್ಲೇಯಿಂಗ್ 11:

 ಗಯಾನಾ ಅಮೆಝಾನ್ ವಾರಿಯರ್ಸ್​ ಪ್ಲೇಯಿಂಗ್ 11: ಬೆನ್ ಮೆಕ್‌ಡರ್ಮಾಟ್ , ಕ್ವೆಂಟಿನ್ ಸ್ಯಾಂಪ್ಸನ್ , ಶಾಯ್ ಹೋಪ್ (ವಿಕೆಟ್ ಕೀಪರ್) , ಶಿಮ್ರಾನ್ ಹೆಟ್ಮೆಯರ್ , ಮೊಯಿನ್ ಅಲಿ , ಇಫ್ತಿಕರ್ ಅಹ್ಮದ್ , ಡ್ವೈನ್ ಪ್ರಿಟೋರಿಯಸ್ , ರೊಮಾರಿಯೋ ಶೆಫರ್ಡ್ , ಶಮರ್ ಜೋಸೆಫ್ , ಗುಡಕೇಶ್ ಮೋಟಿ , ಇಮ್ರಾನ್ ತಾಹಿರ್ (ನಾಯಕ).

ಟ್ರಿನ್​ಬಾಗೊ ನೈಟ್ ರೈಡರ್ಸ್ ಪ್ಲೇಯಿಂಗ್ 11: ಕಾಲಿನ್ ಮನ್ರೋ , ಅಲೆಕ್ಸ್ ಹೇಲ್ಸ್ , ನಿಕೋಲಸ್ ಪೂರನ್ (ನಾಯಕ) , ಡ್ಯಾರೆನ್ ಬ್ರಾವೋ , ಕೀಸಿ ಕಾರ್ಟಿ , ಕೀರನ್ ಪೊಲಾರ್ಡ್ , ಆ್ಯಂಡ್ರೆ ರಸೆಲ್ , ಸುನಿಲ್ ನರೈನ್ , ಅಕೇಲ್ ಹೋಸೇನ್ , ಉಸ್ಮಾನ್ ತಾರಿಕ್ , ಸೌರಭ್ ನೇತ್ರವಲ್ಕರ್.