AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ ಎಣಿಕೆ ದಿನ ತಿರುಪತಿಯಲ್ಲಿ ತ್ರಿಷಾ; ವಿಜಯ್​​ಗೋಸ್ಕರ ವಿಶೇಷ ಪೂಜೆ?

ಮತ ಎಣಿಕೆ ದಿನ ತಿರುಪತಿಯಲ್ಲಿ ತ್ರಿಷಾ; ವಿಜಯ್​​ಗೋಸ್ಕರ ವಿಶೇಷ ಪೂಜೆ?

ರಾಜೇಶ್ ದುಗ್ಗುಮನೆ
|

Updated on:May 04, 2026 | 10:18 AM

Share

ತ್ರಿಷಾ ಹಾಗೂ ವಿಜಯ್ ಮಧ್ಯೆ ಏನೋ ಇದೆ ಎಂಬ ಸುದ್ದಿ ಹರಿದಾಡುತ್ತಿರುವುದು ಇಂದು ನಿನ್ನೆಯಿಂದ ಅಲ್ಲ. ಈಗ ವಿಜಯ್ ಹಾಗೂ ಸಂಗೀತಾ ವಿಚ್ಛೇದನ ಪಡೆಯುತ್ತಿರುವ ವಿಷಯ ಮತ್ತಷ್ಟು ಚರ್ಚೆಗೆ ಕಾರಣ ಆಗಿದೆ. ಹೀಗಿರುವಾಗಲೇ ಚುನಾವಣಾ ಫಲಿತಾಂಶದ ದಿನ ತ್ರಿಷಾ ಅವರು ವಿಶೇಷ ಪೂಜೆ ಮಾಡಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಆ ಬಗ್ಗೆ ಇಲ್ಲಿದೆ ವಿವರ.

ದಳಪತಿ ವಿಜಯ್​​ಗೆ ಇಂದು (ಮೇ 4) ಪ್ರಮುಖ ದಿನ. ಏಕೆಂದರೆ, ಇಂದು ತಮಿಳುನಾಡು ಚುನಾವಣೆಯ ಫಲಿತಾಂಶ ಹೊರಬೀಳುತ್ತಿದೆ. ವಿಜಯ್ ಅವರು ಟಿವಿಕೆ ಪಕ್ಷದ ಮೂಲಕ ಚುನಾವಣೆ ಸ್ಪರ್ಧಿಸಿದ್ದಾರೆ. ಮತ ಎಣಿಕೆ ಆರಂಭಕ್ಕೂ ಮೊದಲು ತ್ರಿಷಾ ಅವರು ತಿರುಪತಿಗೆ ತೆರಳಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಈ ವಿಶೇಷ ಪೂಜೆ ದಳಪತಿ ವಿಜಯ್​​ಗೋಸ್ಕರವೇ ಎನ್ನುವ ಪ್ರಶ್ನೆ ಮೂಡಿದೆ. ಈ ವಿಷಯ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಇಂದು ತ್ರಿಷಾ ಜನ್ಮದಿನ. ಈ ಕಾರಣಕ್ಕೂ ಅವರು ತಿರುಪತಿಗೆ ತೆರಳಿದ್ದಾರೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: May 04, 2026 08:19 AM
Follow Us