ಎಳನೀರು ಹೊತ್ತು ತುಮಕೂರು ಕಡೆ ಹೊರಟ್ಟಿದ್ದ ಲಾರಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದು ಹೊತ್ತಿ ಉರಿಯಿತು!
ಲಭ್ಯವಾಗಿರುವ ಮಾಹಿತಿ ಪ್ರಕಾರ ಎಳನೀರು ಹೊತ್ತ ಟ್ರಕ್ಕು ತುಮಕೂರಿನತ್ತ ಬರುತ್ತಿತ್ತು. ಅದೃಷ್ಟವಶಾತ್ ಲಾರಿ ಚಾಲಕ ಅಪಾಯದಿಂದ ಪಾರಾಗಿದ್ದಾನೆ.
ತುಮಕೂರು: ಎಳನೀರು ಲೋಡ್ (tender Coconut) ಆಗಿದ್ದ ಲಾರಿಯೊಂದು ತುಮಕೂರಿನ ಗೋಳೂರು ಬಳಿ ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪೂರ್ತಿ ಲಾರಿಯೇ ಹೊತ್ತಿಯುರಿದು ಇದ್ದಲಿಯಾದ ಘಟನೆ ಕಳೆದ ರಾತ್ರಿ ಸಂಭವಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಆಗಮಿಸಿ ಬೆಂಕಿ ನಂದಿಸಿದರಾದರೂ ಅಷ್ಟರಲ್ಲಾಗಲೇ ಲಾರಿ ಸುಟ್ಟು ಕರಕಲಾಗಿತ್ತು. ಲಭ್ಯವಾಗಿರುವ ಮಾಹಿತಿ ಪ್ರಕಾರ ಎಳನೀರು ಹೊತ್ತ ಟ್ರಕ್ಕು ತುಮಕೂರಿನತ್ತ ಬರುತ್ತಿತ್ತು. ಅದೃಷ್ಟವಶಾತ್ ಲಾರಿ ಚಾಲಕ ಅಪಾಯದಿಂದ ಪಾರಾಗಿದ್ದಾನೆ.
Published on: Jul 26, 2022 12:48 PM