ಬೈಕ್-ಕಾರು-ಟ್ರಕ್ ನಡುವಿನ ಸರಣಿ ಅಪಘಾತದಲ್ಲಿ ಹೊತ್ತಿ ಉರಿದಿದ್ದು ಮಾತ್ರ ಟ್ರಕ್, ಹಿರಿಯೂರು ರಾಹೆಯಲ್ಲಿ ಘಟನೆ
ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಆಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ಆರಿಸಿದ್ದಾರೆ. ಈ ವಿಡಿಯೋನಲ್ಲಿ ನಮಗೆ ಫೈರ್ ಎಂಜಿನ್ ಸೈರನ್ ಕೇಳಿಸುತ್ತದೆಯೇ ಹೊರತು ಎಂಜಿನ್ ಮಾತ್ರ ಕಾಣೋದಿಲ್ಲ.
ನಿಮಗೊಂದು ಸರಳ ಪ್ರಶ್ನೆ ಮಾರಾಯ್ರೇ. ಒಂದು ಲಾರಿ, ಕಾರು ಮತ್ತು ಬೈಕೊಂದು ಸರಣಿ ಅಪಘಾತದಲ್ಲಿ ಭಾಗಿಯಾಗಿದ್ದರೆ ಯಾರಿಗೆ ಹೆಚ್ಚು ಗಾಯ ಇಲ್ಲವೇ ಹಾನಿ ಆಗುತ್ತದೆ. ನಾವು ನೀವೆಲ್ಲ ಹೇಳೋದು ಬೈಕ್ ನವನಿಗೆ ಅಂತಲೇ, ಹೌದು ತಾನೆ? ಆದರೆ ಈ ಪ್ರಕರಣದಲ್ಲಿ ಅದು ಉಲ್ಟಾ ಆಗಿದೆ. ಸರಣಿ ಅಪಘಾತದ (seial accident) ಬಳಿಕ ಲಾರಿಯೇ ಹೊತ್ತಿ ಉರಿಯುತ್ತಿದೆ. ಬೈಕ್ ಸವಾರನಿಗೆ (biker) ಗಾಯಗಳಾಗಿವೆ ಮತ್ತು ಅವರನ್ನು ಸ್ಥಳೀಯ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದೆ. ಅಂದಹಾಗೆ ಈ ಅಪಘಾತ ನಡೆದಿದ್ದು ಚಿತ್ರದುರ್ಗ ಜಿಲ್ಲೆ ಹಿರಿಯೂರು (Hiriyur) ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ. ಸಾಕಷ್ಟು ಜನ ಹೊತ್ತಿ ಉರಿಯುತ್ತಿರುವ ಲಾರಿಯಿಂದ ಬಹಳ ದೂರ ನಿಂತುಕೊಂಡು ನೋಡುತ್ತಿದ್ದಾರೆಯೇ ಹೊರತು ಹತ್ತಿರಕ್ಕೆ ಯಾರೂ ಹೋಗುತ್ತಿಲ್ಲ.
ಅವರು ಮಾಡುತ್ತಿರುವುದು ಅತ್ಯಂತ ಸರಿ ಮಾರಾಯ್ರೇ. ಲಾರಿಯಲ್ಲಿ ಸ್ಫೋಟಗೊಳ್ಳುವಂಥ ವಸ್ತವೇನಾದರು ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.
ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಆಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ಆರಿಸಿದ್ದಾರೆ. ಈ ವಿಡಿಯೋನಲ್ಲಿ ನಮಗೆ ಫೈರ್ ಎಂಜಿನ್ ಸೈರನ್ ಕೇಳಿಸುತ್ತದೆಯೇ ಹೊರತು ಎಂಜಿನ್ ಮಾತ್ರ ಕಾಣೋದಿಲ್ಲ.
ಕಾರಿನ ಚಾಲಕನಿಗೆ ಗಾಯವಾಗಿಲ್ಲ ಅಂತ ಗೊತ್ತಾಗಿದೆ. ಹಾಗೆಯೇ ಲಾರಿ ಚಾಲಕ ಮತ್ತು ಕ್ಲೀನರ್ ವಾಹನಕ್ಕೆ ಬೆಂಕಿ ಹೊತ್ತಿಕೊಂಡ ಕೂಡಲೇ ಕೆಳಗಿಳಿದು ದೂರಕ್ಕೆ ಹೋಗಿ ನಿಂತಿದ್ದಾರೆ. ಪ್ರಕರಣವನ್ನು ಹಿರಿಯೂರು ನಗರ ಪೊಲೀಸ ಠಾಣೆಯಲ್ಲಿ ದಾಖಲಿಸಲಾಗಿದೆ.
ಇದನ್ನೂ ಓದಿ: MS Dhoni: ಇದು ಹಳೆಯ ಧೋನಿ ಇನ್ನಿಂಗ್ಸ್! ಕೊನೆಯ 4 ಎಸೆತಗಳಲ್ಲಿ 16 ರನ್ ಚಚ್ಚಿ ತಂಡ ಗೆಲ್ಲಿಸಿದ MSD- ವಿಡಿಯೋ ಇಲ್ಲಿದೆ