ನಾನಿನ್ನೂ ಸತ್ತಿಲ್ಲ, ಪಾಕಿಸ್ತಾನ ಸುಳ್ಳು ಹೇಳುತ್ತಿದೆ; ವಿಡಿಯೋ ಮಾಡಿ ಶಾಕ್ ಕೊಟ್ಟ ಟಿಟಿಪಿ ಮುಖ್ಯಸ್ಥ

Updated on: Oct 16, 2025 | 10:39 PM

ಪಾಕಿಸ್ತಾನದ ಮಿಲಿಟರಿ ಜಗತ್ತಿಗೆ ಹೇಳಿರುವ ಸುಳ್ಳು ಸುದ್ದಿಯನ್ನು ಬಯಲು ಮಾಡಿದ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಮುಖ್ಯಸ್ಥ ನೂರ್ ವಾಲಿ ಮೆಹ್ಸೂದ್ ನಾನಿನ್ನೂ ಬದುಕೇ ಇದ್ದೇನೆ. ನಾನು ಸತ್ತಿದ್ದೇನೆಂದು ಇಸ್ಲಾಮಾಬಾದ್‌ನ ಸುಳ್ಳು ಹೇಳಿಕೆ ನೀಡಿದೆ ಎಂದು ವಿಡಿಯೋ ಸಂದೇಶ ರವಾನಿಸಿದ್ದಾರೆ. ಪಾಕಿಸ್ತಾನದೊಳಗಿನಿಂದಲೇ ಹೊರಹೊಮ್ಮುತ್ತಿರುವ ಕುಖ್ಯಾತ ಭಯೋತ್ಪಾದಕ, ತನ್ನ ನಾಗರಿಕರು ಮತ್ತು ಜಾಗತಿಕ ಸಮುದಾಯವನ್ನು ಮೋಸಗೊಳಿಸಲು ಸೇನೆಯು ಲೆಕ್ಕಾಚಾರದ ತಪ್ಪು ಮಾಹಿತಿ ಅಭಿಯಾನವನ್ನು ಆಯೋಜಿಸುತ್ತಿದೆ ಎಂದು ಆರೋಪಿಸಿದೆ.

ಇಸ್ಲಮಾಬಾದ್, ಅಕ್ಟೋಬರ್ 16: ಪಾಕಿಸ್ತಾನದ ಮಿಲಿಟರಿಯ ಸುಳ್ಳು, ಕಪಟ ಜಗತ್ತಿನ ಮುಂದೆ ಮತ್ತೊಮ್ಮೆ ಬಹಿರಂಗಗೊಂಡಿದೆ. ಅಕ್ಟೋಬರ್ 9ರಂದು ಕಾಬೂಲ್ ಸ್ಫೋಟದಲ್ಲಿ ನಾವು ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಮುಖ್ಯಸ್ಥನನ್ನು ಹತ್ಯೆ ಮಾಡಿದ್ದೇವೆ ಎಂದು ಪಾಕಿಸ್ತಾನ (Pakistan) ಹೇಳಿಕೊಂಡಿತ್ತು. ಆದರೆ, ಇಸ್ಲಾಮಾಬಾದ್ ಕೊಂದಿದ್ದೇವೆ ಎಂದು ಹೇಳಿಕೊಂಡಿರುವ ಅದೇ ಟಿಟಿಪಿ ಮುಖ್ಯಸ್ಥ ನೂರ್ ವಾಲಿ ಮೆಹ್ಸೂದ್ ಇದೀಗ ಜಗತ್ತಿನ ಮುಂದೆ ಕಾಣಿಸಿಕೊಂಡಿದ್ದಾರೆ! ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿರುವ ನೂರ್ ವಾಲಿ, ಪಾಕಿಸ್ತಾನ ಮಿಲಿಟರಿ ನನ್ನನ್ನು ಕೊಂದಿದ್ದೇನೆಂದು ಸುಳ್ಳು ಹೇಳಿಕೆ ನೀಡಿದೆ. ನಾನಿನ್ನೂ ಸತ್ತಿಲ್ಲ ಎಂದು ಹೇಳುವ ಮೂಲಕ ಪಾಕಿಸ್ತಾನಕ್ಕೆ ದೊಡ್ಡ ಶಾಕ್ ನೀಡಿದ್ದಾರೆ.

ಪಾಕಿಸ್ತಾನದೊಳಗಿನ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿರುವ ಟಿಟಿಪಿ ಮುಖ್ಯಸ್ಥ, ಪಾಕಿಸ್ತಾನದ ನಾಗರಿಕರು ಮತ್ತು ಅಂತರರಾಷ್ಟ್ರೀಯ ಸಮುದಾಯವನ್ನು ಮೋಸಗೊಳಿಸಲು ನನ್ನ ಸಾವಿನ ಬಗ್ಗೆ ಪಾಕಿಸ್ತಾನದ ಸೇನೆಯು ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿಯನ್ನು ಹರಡುತ್ತಿದೆ ಎಂದು ಆರೋಪಿಸಿದ್ದಾರೆ. ಇದರಿಂದ ಪಾಕಿಸ್ತಾನ ಜಗತ್ತಿನ ಮುಂದೆ ಮತ್ತೊಮ್ಮೆ ತಲೆತಗ್ಗಿಸುವಂತಾಗಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published on: Oct 16, 2025 10:31 PM