ರಾಜ ರಾಜ ವರ್ಮ ಎಂದ ತುಕಾಲಿ ; ದೇವರಾಜ್ ಸ್ಟೈಲ್​ ಮಿಮಿಕ್ರಿ ಮಾಡಿದ ಸಂತೋಷ್

Updated on: Aug 15, 2026 | 11:53 AM

Tukali Santosh: 'ಕ್ವಾಟ್ಲೆ ಕಿಚನ್ ಸೀಸನ್ 2' ಗ್ರ್ಯಾಂಡ್ ಫಿನಾಲೆಯಲ್ಲಿ ತುಕಾಲಿ ಸಂತೋಷ್ 'ಡೈನಾಮಿಕ್ ಸ್ಟಾರ್' ದೇವರಾಜ್ ಅವರ ಐಕಾನಿಕ್ 'ವರ್ಮ' ಪಾತ್ರವನ್ನು ಮಿಮಿಕ್ರಿ ಮಾಡಿ ರಂಜಿಸಿದ್ದಾರೆ. ತಮ್ಮ ವಿಶಿಷ್ಟ ಕಾಮಿಡಿ ಶೈಲಿಯ ಸಂಭಾಷಣೆಗಳ ಮೂಲಕ ವೇದಿಕೆಯಲ್ಲಿದ್ದ ಪ್ರೇಕ್ಷಕರು ಹಾಗೂ ತೀರ್ಪುಗಾರರನ್ನು ನಗೆಗಡಲಿನಲ್ಲಿ ತೇಲಿಸಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ‘ಕ್ವಾಟ್ಲೆ ಕಿಚನ್ ಸೀಸನ್ 2’ ಗ್ರ್ಯಾಂಡ್ ಫಿನಾಲೆ ಹಂತಕ್ಕೆ ಬಂದು ತಲುಪಿದೆ. ಈ ಗ್ರಾಂಡ್ ಫಿನಾಲೆ ಸಂಚಿಕೆಯಲ್ಲಿ ಕಾಮಿಡಿ ಕಿಂಗ್ ತುಕಾಲಿ ಸಂತೋಷ್ ತಮ್ಮ ಅದ್ಭುತ ಮಿಮಿಕ್ರಿ ಹಾಗೂ ಕಾಮಿಡಿ ಟೈಮಿಂಗ್ ಮೂಲಕ ಇಡೀ ವೇದಿಕೆಯನ್ನು ನಗೆಗಡಲಿನಲ್ಲಿ ತೇಲಿಸಿದ್ದಾರೆ.

ದಿಗ್ಗಜ ನಟ ‘ಡೈನಾಮಿಕ್ ಸ್ಟಾರ್’ ದೇವರಾಜ್ ಅವರ ಐಕಾನಿಕ್ ‘ವರ್ಮ ರಾಜ ರಾಜ ವರ್ಮ’ ಮಿಮಿಕ್ರಿ ಮಾಡಿದ ತುಕಾಲಿ ಸಂತೋಷ್, ವೇದಿಕೆಯಲ್ಲಿದ್ದ ಸ್ಪರ್ಧಿಗಳು ಮತ್ತು ಜಡ್ಜಸ್‌ಗೆ ಸಖತ್ ಕಾಮಿಡಿ ಕೌಂಟರ್‌ಗಳನ್ನು ನೀಡಿದರು. ಕೈಯಲ್ಲಿ ಗುಲಾಬಿ ಹೂವು ಹಿಡಿದು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಸಂಭಾಷಣೆ ಹೇಳುತ್ತಾ, ಕಾರ್ಯಕ್ರಮದಲ್ಲಿದ್ದ ಸೂರಜ್, ರಕ್ಷಿತಾ ಹಾಗೂ ವರ್ಮ ಅವರಿಗೆ ತಮಾಷೆಯಾಗಿ ರೇಗಿಸಿ ಎಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಗುವಂತೆ ಮಾಡಿದ್ದಾರೆ. ಈ ತಮಾಷೆಯ ಸನ್ನಿವೇಶಕ್ಕೆ ಜಡ್ಜ್ ಸ್ಥಾನದಲ್ಲಿದ್ದ ಸೆಟ್‌ನಲ್ಲಿದ್ದ ಎಲ್ಲರೂ ಫುಲ್ ಫಿದಾ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More