ಈ ವರ್ಷದ ಬಿಗ್ ಬಾಸ್ ಟಿಆರ್ಪಿ ಬಗ್ಗೆ ನನಗೆ ಭಯ ಶುರು ಆಗಿದೆ: ತುಕಾಲಿ ಸಂತು
‘ಬಿಗ್ ಬಾಸ್ ಕನ್ನಡ 13’ ಆರಂಭಕ್ಕೆ ತಯಾರಿ ನಡೆದಿದೆ. ಮಾಜಿ ಸ್ಪರ್ಧಿ ತುಕಾಲಿ ಸಂತು ಈ ಬಗ್ಗೆ ಮಾತನಾಡಿದ್ದಾರೆ. ‘ಜನರೆಲ್ಲ ಕುತೂಹಲದಿಂದ ಕಾಯುತ್ತಿದ್ದಾರೆ. ಕಳೆದ ಸಲ 18ರ ತನಕ ಟಿಆರ್ಪಿ ಬಂದಿತ್ತು. ಈ ಬಾರಿ 30 ಮುಟ್ಟುತ್ತಾ ಅಂತ ನನಗೆ ಭಯ ಆಗುತ್ತಿದೆ’ ಎಂದು ಸಂತು ಹೇಳಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada Season 13) ಆರಂಭಕ್ಕೆ ತಯಾರಿ ನಡೆದಿದೆ. ಮಾಜಿ ಸ್ಪರ್ಧಿ ತುಕಾಲಿ ಸಂತು ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಬಿಗ್ ಬಾಸ್ ಶುರುವಾಗಲು ಇನ್ನೂ 2 ತಿಂಗಳು ಬಾಕಿ ಇದೆ. ನನಗೆ ಎಗ್ಸೈಟ್ಮೆಂಟ್ ತಡೆಯಲು ಆಗುತ್ತಿಲ್ಲ. ವಿಡಿಯೋ ಮಾಡಿ ಕಳಿಸಿ ಅಂತ ತಲೆಗೆ ಹುಳ ಬಿಟ್ಟಿದ್ದಾರೆ. ಜನರೆಲ್ಲ ಕುತೂಹಲದಿಂದ ಕಾಯುತ್ತಿದ್ದಾರೆ. ಕಳೆದ ಬಾರಿ 18ರ ತನಕ ಟಿಆರ್ಪಿ ಬಂದಿತ್ತು. ಈ ಸಲ 30 ಮುಟ್ಟುತ್ತಾ ಅಂತ ನನಗೆ ಭಯ ಆಗುತ್ತಿದೆ. ಈ ಬಾರಿ ಖಂಡಿತವಾಗಿ ದೊಡ್ಡ ಮಟ್ಟಕ್ಕೆ ರೀಚ್ ಆಗುತ್ತದೆ. ಜನರಲ್ಲಿ ಒಂದು ಅಲೆ ಶುರುವಾಗಿದೆ. ಹಾಗಾಗಿ ಮುಂದಿನ ಹಂತಕ್ಕೆ ಇದು ಹೋಗುತ್ತದೆ. ಈ ಸಲ ವಿದೇಶದಿಂದ ಸ್ಪರ್ಧಿಗಳು ಬಂದರೂ ಅಚ್ಚರಿ ಇಲ್ಲ. ಹಿಂದಿ ಬಿಗ್ ಬಾಸ್ ಕಾರ್ಯಕ್ರಮವನ್ನೂ ಕನ್ನಡದ ಬಿಗ್ ಬಾಸ್ ಮೀರಿಸಿದೆ’ ಎಂದು ತುಕಾಲಿ ಸಂತೋಷ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
