ಪತ್ನಿ ಮಾನಸಾ ಬಗ್ಗೆ ನೆಗೆಟಿವ್ ಟ್ರೋಲ್; ನೇರವಾಗಿ ಪ್ರತಿಕ್ರಿಯೆ ನೀಡಿದ ತುಕಾಲಿ ಸಂತೋಷ್

Edited By:

Updated on: Nov 05, 2024 | 9:08 PM

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋನಿಂದ ಹೊರಬಂದಿರುವ ಮಾನಸಾ ಅವರು ಸಂದರ್ಶನ ನೀಡಿದ್ದಾರೆ. ಅವರ ಜೊತೆ ಪತಿ ತುಕಾಲಿ ಸಂತೋಷ್ ಕೂಡ ಭಾಗಿ ಆಗಿದ್ದಾರೆ. ದೊಡ್ಮನೆಯಲ್ಲಿ ಇದ್ದಾಗ ಮಾನಸಾ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿತ್ತು. ಅಂತಹ ನೆಗೆಟಿವ್ ಟ್ರೋಲ್​ಗಳ ಬಗ್ಗೆ ತುಕಾಲಿ ಸಂತೋಷ್​ ಪ್ರತಿಕ್ರಿಯೆ ನೀಡಿದ್ದಾರೆ.

‘ಮಾನಸಾ ಬಗ್ಗೆ ಜನರು ಮಾಡಿದ ಟ್ರೋಲ್​ಗಳನ್ನು ನಾನು ಎಂಜಾಯ್ ಮಾಡಿದ್ದೇನೆ. ನಮ್ಮ ಕಾಲು ಎಳೆದು ಇನ್ನೊಬ್ಬರು ಕಾಮಿಡಿ ಮಾಡುತ್ತಾರೆ ಎಂದಾಗ ಅದನ್ನು ಸ್ವೀಕರಿಸುವ ಮನೋಭಾವ ನಮ್ಮಲ್ಲಿ ಇರಬೇಕು. ನನ್ನ ಹೆಂಡತಿ ಹಂದಿ ಆದರೆ, ನಾನು ಅವಳಿಗೆ ಹೆಗ್ಗಣ. ಹಂದಿ ಮತ್ತು ಮಾನಸಾ ಫೋಟೋವನ್ನು ನಮ್ಮ ಮನೆಯಲ್ಲಿ ಫ್ರೇಮ್ ಹಾಕಿಸುತ್ತೇನೆ. ಹಂದಿ ಎಂದರೆ ವಿಷ್ಣು ಸ್ವರೂಪ’ ಎಂದು ತುಕಾಲಿ ಸಂತೋಷ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮಾಲತೇಶ ಜಗ್ಗೀನ್

ಮಾಲತೇಶ ಜಗ್ಗೀನ್. Tv9 ಕನ್ನಡ ವಾಹಿನಿ ಫಿಲಂ ಬ್ಯೂರೋ ಮುಖ್ಯಸ್ಥನಾಗಿ ಕೆಲಸ ಮಾಡ್ತಿದ್ದಾರೆ. ಮಾಲತೇಶ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹೊಳಲು ಗ್ರಾಮದವರು. ಕಳೆದ 15 ವರ್ಷಗಳಲ್ಲಿ ಮಾಧ್ಯಮ ಲೋಕದ ವಿವಿಧ ವಿಭಾಗಗಳಲ್ಲಿ ವರದಿಗಾರಿಕೆ ಮಾಡಿದ ಅನುಭವ ಇದೆ. ಸಿನಿಮಾ ವಿಭಾಗದ ಜೊತೆ ರಾಜಕೀಯ, ಮೆಟ್ರೋ, ಕ್ರೈಂ ವಿಭಾಗದಲ್ಲೂ ಕೆಲವು ಸನ್ನಿವೇಶಗಳಲ್ಲಿ ವರದಿಗಾರಿಕೆ ಮಾಡಿದ್ದಾರೆ. ಹಾವೇರಿಯ ಕೆಎಫ್ ಚಾನಲ್ , ನಂತರ ಬೆಂಗಳೂರಿನ ಸಮಯ ನ್ಯೂಸ್, ಜನಶ್ರಿ ನ್ಯೂಸ್, ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. Tv9kannada ನ್ಯೂಸ್ ಚಾನಲ್ ನಲ್ಲಿ ಕಳೆದ 10 ವರ್ಷಗಳಿಂದ ಇದ್ದಾರೆ. ಕಲೆ, ಸಾಹಿತ್ಯ, ಸಿನಿಮಾ, ಕ್ರಿಡೆ ಆಸಕ್ತಿ ವಿಷಯಗಳು.

Read More