ತುಕಾಲಿಯ ಡ್ಯಾನ್ಸ್ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
Tukali Santhu: ಬಿಗ್ಬಾಸ್ ಮನೆಯ ಕಮಿಡಿಯನ್ ತುಕಾಲಿ ಸಂತು, ಭಾನುವಾರದ ಎಪಿಸೋಡ್ನಲ್ಲಿ ಸುದೀಪ್ ಮುಂದೆ ಡ್ಯಾನ್ಸ್ ಮಾಡಿದ್ದಾರೆ. ಆದರೆ ಅವರ ಡ್ಯಾನ್ಸ್ ನೋಡಿ ಮನೆ ಮಂದಿ ಬೆಚ್ಚಿ ಬಿದ್ದಿದ್ದಾರೆ.
ತುಕಾಲಿ ಸಂತೋಷ್ (Tukali Santhosh) ಬಿಗ್ಬಾಸ್ (BiggBoss) ಮನೆಯ ಕಮಿಡಿಯನ್, ಆರಂಭದಲ್ಲಿ ಅವರ ಕಾಮಿಡಿ ತಪ್ಪು ಹಾದಿ ಹಿಡಿದಿತ್ತು, ಸುದೀಪ್ ಅವರು ಎಚ್ಚರಿಕೆ ಕೊಟ್ಟ ಬಳಿಕ ಅವರ ವರಸೆ ತುಸು ಬದಲಾಯಿಸಿಕೊಂಡಿದ್ದರು. ಹಾಗಿದ್ದರೂ ಸಹ ಪ್ರತಿ ವಾರ ವೀಕೆಂಡ್ ಪಂಚಾಯ್ತಿಯಲ್ಲಿ ಸುದೀಪ್ ಬಂದಾಗಲು ತುಕಾಲಿ ಅವರು ಏನೋ ಮಾಡಲು ಹೋಗಿ ಏನೋ ಮಾಡಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಒಮ್ಮೊಮ್ಮೆಯಂತೂ ಅತಿಯಾಗಿ ಬುದ್ಧಿ ಪ್ರದರ್ಶಿಸಿಯೂ ಸುದೀಪ್ ಕೈಯಲ್ಲಿ ಬೈಸಿಕೊಳ್ಳುತ್ತಾರೆ. ಈ ಶನಿವಾರವೂ ಹಾಗೆಯೇ ಆಗಿತ್ತು. ಆದರೆ ಭಾನುವಾರದ ಎಪಿಸೋಡ್ನಲ್ಲಿ ಒಳ್ಳೆಯ ಮೂಡ್ನಲ್ಲಿದ್ದ ಸುದೀಪ್, ತುಕಾಲಿಯಿಂದ ಡ್ಯಾನ್ಸ್ ಮಾಡಿಸಿದರು. ಆ ಡ್ಯಾನ್ಸ್ ನೋಡಿ ಮನೆ ಮಂದಿಯೆಲ್ಲ ಬೆಚ್ಚಿಬಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos