ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ

ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ

ಮಂಜುನಾಥ ಸಿ.
|

Updated on: Dec 10, 2023 | 9:10 PM

Pooja Gandhi: ಕನ್ನಡತಿಯೇ ಆಗಿಬಿಟ್ಟಿರುವ ಪೂಜಾ ಗಾಂಧಿ ಇತ್ತೀಚೆಗೆ ಮಂತ್ರಮಾಂಗಲ್ಯ ಮಾದರಿಯಲ್ಲಿ ವಿವಾಹವಾದರು. ಇದೀಗ ಬಸವಣ್ಣನ ವಚನ ಹೇಳಿ ಮತ್ತೆ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ.

ನಟಿ ಪೂಜಾ ಗಾಂಧಿ (Pooja Gandhi) ಇತ್ತೀಚೆಗಷ್ಟೆ ವಿವಾಹವಾದರು. ತಮ್ಮ ಆಮಂತ್ರಣ ಪತ್ರಿಕೆಯನ್ನು ತಾವೇ ಸ್ವತಃ ಕನ್ನಡದಲ್ಲಿ ಬರೆದು ತಮ್ಮ ಕನ್ನಡ ಪ್ರೇಮ ಮೆರೆದಿದ್ದರು. ಅದಾದ ಬಳಿಕ ಮದುವೆಯನ್ನು ಸಹ ಕುವೆಂಪು ಅವರ ಆದರ್ಶವಾದ ಮಂತ್ರಮಾಂಗಲ್ಯ ಮಾದರಿಯಲ್ಲಿ ಆದರು. ಪೂಜಾ ಗಾಂಧಿ ಅವರ ಈ ಕಾರ್ಯ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನಟಿ ಪೂಜಾ ಗಾಂಧಿ, ಬಸವಣ್ಣನ ವಚನ ಹೇಳಿ ನೆರೆದವರು ಆಶ್ಚರ್ಯಚಕಿತಗೊಳ್ಳುವಂತೆ ಮಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ