BBK 10: ‘ವರ್ತೂರು ಸಂತೋಷ್ ಮಾತನಾಡಿದರೂ ಅತ್ತಂಗೆ ಕಾಣುತ್ತೆ’: ನೊಂದವರ ಬಗ್ಗೆ ತುಕಾಲಿ ಮಾತು
ಸುದೀಪ್ ಕೇಳಿದ ಕೆಲವು ಪ್ರಶ್ನೆಗಳಿಗೆ ತುಕಾಲಿ ಸಂತೋಷ್ ಉತ್ತರ ನೀಡಿದ್ದಾರೆ. ನೊಂದವರ ಸಂಘದಲ್ಲಿ ಇರುವವರ ಪೈಕಿ ಯಾರಿಗೆ ಯಾವ ಸ್ಥಾನ ಎಂದು ಕೇಳಿದ್ದಕ್ಕೆ ತುಕಾಲಿ ಸಂತೋಷ್ ಈ ರೀತಿ ಉತ್ತರ ನೀಡಿದ್ದಾರೆ. ಅವರ ತಮಾಷೆಯ ಮಾತುಗಳನ್ನು ಕೇಳಿ ಸುದೀಪ್ ಅವರು ಜೋರಾಗಿ ನಕ್ಕಿದ್ದಾರೆ. ಆ ಸಂದರ್ಭದ ವಿಡಿಯೋ ಇಲ್ಲಿದೆ..
ಹಾಸ್ಯ ನಟ ತುಕಾಲಿ ಸಂತೋಷ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada) ರಿಯಾಲಿಟಿ ಶೋನಲ್ಲಿ ನಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರತಿ ವೀಕೆಂಡ್ನಲ್ಲೂ ಅವರು ಮನರಂಜನೆ ನೀಡುತ್ತಾರೆ. ಈ ಭಾನುವಾರ (ನವೆಂಬರ್ 26) ಕಿಚ್ಚ ಸುದೀಪ್ (Kichcha Sudeep) ಕೇಳಿದ ಕೆಲವು ಪ್ರಶ್ನೆಗಳಿಗೆ ತುಕಾಲಿ ಸಂತೋಷ್ ಉತ್ತರ ನೀಡಿದ್ದಾರೆ. ನೊಂದವರ ಸಂಘದಲ್ಲಿ ಇರುವವರ ಪೈಕಿ ಯಾರಿಗೆ ಯಾವ ಸ್ಥಾನ ಎಂದು ಕೇಳಿದ್ದಕ್ಕೆ ತುಕಾಲಿ ಸಂತೋಷ್ (Tukali Santhosh) ಈ ರೀತಿ ಉತ್ತರ ನೀಡಿದ್ದಾರೆ. ‘ನೊಂದವರ ಸಂಘಕ್ಕೆ ಕಾರ್ತಿಕ್ ಅಧ್ಯಕ್ಷ. ಯಾಕೆಂದರೆ, ನಮ್ಮ ಗುಂಪಲ್ಲಿ ಜಾಸ್ತಿ ನೊಂದಿರುವವನು ಅವನೇ. ವರ್ತೂರು ಸಂತೋಷ್ ಉಪಾಧ್ಯಕ್ಷರು. ಅವರು ಮಾತನಾಡಿದರೂ ಅತ್ತಂತೆ ಕಾಣುತ್ತಾ ಇರುತ್ತೆ. ಪ್ರತಾಪ್ ಅವರು ಕಾರ್ಯದರ್ಶಿ. ತಾವು ಯಾವ ಗುಂಪಿಗೂ ಸೇರಲ್ಲ ಅಂತ ಹೋಗಿದ್ದರು. ಆ ಕಡೆ ಹೋದಮೇಲೆ ಅಪಾರವಾದ ನೋವು ಅನುಭವಿಸಿಕೊಂಡು ಬಂದಿದ್ದಾರೆ’ ಎಂದು ತುಕಾಲಿ ಸಂತೋಷ್ ಹೇಳಿದ್ದು ಕೇಳಿ ಸುದೀಪ್ ನಕ್ಕಿದ್ದಾರೆ. ನವೆಂಬರ್ 26ರ ರಾತ್ರಿ 9.30ಕ್ಕೆ ಕಲರ್ಸ್ ಕನ್ನಡದಲ್ಲಿ ಈ ಸಂಚಿಕೆ ಪ್ರಸಾರ ಆಗಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆಯೂ ಉಚಿತವಾಗಿ ಲೈವ್ ವೀಕ್ಷಿಸಬಹುದು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.