ಹಾಸನ: ಕಾಡಾನೆಯ ನಿಶ್ಚಿತ ದಾಳಿಯಿಂದ ಬೈಕ್ ಸವಾರನೊಬ್ಬ ತಪ್ಪಿಸಿಕೊಂಡಿದ್ದು ಪವಾಡವೇ!
ರಾತ್ರಿ ಸುಮಾರು ಹನ್ನೊಂದೂವರೆ ಗಂಟೆಗೆ ಊರ ಜನರೆಲ್ಲ ಆತಂಕದಲ್ಲೇ ನಿದ್ರೆಗೆ ಶರಣಾದಾಗ ಸಲಗವು ಊರಿನ ಕಾವಲುಗಾರನ ಹಾಗೆ ಗಸ್ತು ತಿರುಗಲಾರಂಭಿಸಿದೆ. ಆನೆಯ ಎದುರುಗಡೆಯಿಂದ ಬೈಕ್ ಸವಾರ ವೇಗದಿಂದ ಊರೊಳಗೆ ಬರುವುದು ಕೆಮೆರಾದಲ್ಲಿ ಸೆರೆಯಾಗಿದೆ. ಆನೆಯನ್ನು ಕಂಡಾಕ್ಷಣ ಅವನು ಬೈಕನ್ನು ಪಕ್ಕದ ರಸ್ತೆ ಕಡೆ ತಿರುಗಿಸಿ ಮಾಯವಾಗುತ್ತಾನೆ.
ಹಾಸನ: ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಜಮ್ಮನಹಳ್ಳಿ ಗ್ರಾಮದಲ್ಲಿ ಕಾಡಾನೆಯೊಂದು (wild elephant) ಎರಡು ದಿನಗಳಿಂದ ಬೀಡು ಬಿಟ್ಟಿದ್ದು ಗ್ರಾಮಸ್ಥರೆಲ್ಲ ಭಯ, ಭೀತಿ ಮತ್ತು ಅತಂಕದಲ್ಲಿದ್ದಾರೆ. ನಿನ್ನೆ ರಾತ್ರಿ ನಡೆದ ಘಟನೆಯನ್ನು ಗಮನಿಸಿ. ಬೈಕ್ ಸವಾರನೊಬ್ಬ (biker) ತನ್ನ ಸಮಯಪ್ರಜ್ಞೆಯಿಂದ (presence of mind) ನಿಶ್ಚಿತ ಅಪಾಯದಿಂದ ಪಾರಾದ ದೃಶ್ಯ ಗ್ರಾಮದಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾತ್ರಿ ಸುಮಾರು ಹನ್ನೊಂದೂವರೆ ಗಂಟೆಗೆ ಊರ ಜನರೆಲ್ಲ ಆತಂಕದಲ್ಲೇ ನಿದ್ರೆಗೆ ಶರಣಾದಾಗ ಸಲಗವು ಊರಿನ ಕಾವಲುಗಾರನ ಹಾಗೆ ಗಸ್ತು ತಿರುಗಲಾರಂಭಿಸಿದೆ. ಆನೆಯ ಎದುರುಗಡೆಯಿಂದ ಬೈಕ್ ಸವಾರ ವೇಗದಿಂದ ಊರೊಳಗೆ ಬರುವುದು ಕೆಮೆರಾದಲ್ಲಿ ಸೆರೆಯಾಗಿದೆ. ಆನೆಯನ್ನು ಕಂಡಾಕ್ಷಣ ಅವನು ಬೈಕನ್ನು ಪಕ್ಕದ ರಸ್ತೆ ಕಡೆ ತಿರುಗಿಸಿ ಮಾಯವಾಗುತ್ತಾನೆ. ಅವನು ಹೋದ ದಿಕ್ಕಿನೆಡೆ ಸ್ವಲ್ಪ ಹೊತ್ತು ನೋಡುವ ಆನೆ ತನ್ನ ರಾತ್ರಿ ವಾಯು ವಿಹಾರವನ್ನು ಮುಂದುವರೆಸುತ್ತದೆ. ಎರಡು ದಿನಗಳಿಂದ ಆನೆ ಊರಲ್ಲಿದ್ದರೂ ಅರಣ್ಯ ಇಲಾಖೆಯ ಸಿಬ್ಬಂದಿ ಏನನ್ನೂ ಮಾಡದಿರುವುದು ಆಶ್ಚರ್ಯ ಹುಟ್ಟಿಸುತ್ತದೆ. ಖಂಡ್ರೆ ಸಾಹೇಬರೇ (Eshwar Khandre), ಹಾಸನದಿಂದ ಬೀದರ ಬಹಳ ದೂರ ಅಂತ ಸಮ್ಮನಿದ್ದೀರಾ?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ