ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!

Updated By: Ganapathi Sharma

Updated on: Dec 05, 2025 | 11:28 AM

ಕರ್ನಾಟಕದಲ್ಲಿ ಎಟಿಎಂ ಕಳವು ಪ್ರಕರಣಗಳು ಹೆಚ್ಚುತ್ತಿರುವ ಆತಂಕಕಾರಿ ಸನ್ನಿವೇಶದಲ್ಲಿ ತುಮಕೂರು ಜಿಲ್ಲೆಯ ಮಧುಗಿರಿಯ ಪುರವಾರ ಗ್ರಾಮದಲ್ಲಿ ಖದೀಮರ ಗ್ಯಾಂಗೊಂದು ಎಟಿಎಂ ಮಷಿನ್ ಹೊತ್ತೊಯ್ಯಲು ಯತ್ನಿಸಿದೆ. ಆದರೆ, ಸಾಧ್ಯವಾಗದೆ ಕಸದ ಬುಟ್ಟಿ ಬಳಿ ಬಿಟ್ಟುಹೋಗಿದೆ. ಎಟಿಎಂ ಮಷಿನ್ ಅನಾಥವಾಗಿ ಇರುವ ವಿಡಿಯೋ ಇಲ್ಲಿದೆ ನೋಡಿ.

ತುಮಕೂರು, ಡಿಸೆಂಬರ್ 5: ತುಮಕೂರು ಜಿಲ್ಲೆಯ ಮಧುಗಿರಿಯ ಪುರವಾರ ಗ್ರಾಮದಲ್ಲಿ ಕಳ್ಳರ ಗ್ಯಾಂಗ್ ಎಟಿಎಂ ಮಷಿನ್ ಕದಿಯಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ತಡರಾತ್ರಿ ಪ್ಲ್ಯಾನ್ ಮಾಡಿಕೊಂಡು ಎಟಿಎಂ ಸೆಂಟರ್‌ಗೆ ನುಗ್ಗಿದ ಕಳ್ಳರು, ಗ್ರೌಂಡಿಂಗ್ ಇಲ್ಲದಿರುವುದು ಗಮನಿಸಿ ಕಳುವಿಗೆ ಮುಂದಾಗಿದ್ದರು. ಆದರೆ ಎಟಿಎಂ ಮಷಿನ್ ತುಂಬಾ ಭಾರವಾಗಿರುವುದರಿಂದ ಹೊತ್ತುಕೊಂಡು ಹೋಗಲು ಸಾಧ್ಯವಾಗದೆ, ಮಧ್ಯದಲ್ಲೇ ಕಸದ ಬುಟ್ಟಿ ಬಳಿ ಬಿಟ್ಟು ಪರಾರಿಯಾದರು. ಈ ಬಗ್ಗೆ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ನಂತರ ಪೊಲೀಸರು ಎಟಿಎಂ ಸೆಂಟರನ್ನು ಪರಿಶೀಲಿಸಿದ ವೇಳೆ, ಆರ್‌ಬಿಐ ಭದ್ರತಾ ನಿಯಮಗಳು ಪಾಲನೆಯಾಗದೇ ಇದ್ದುದು ಬಹಿರಂಗವಾಗಿದೆ. ಎಟಿಎಂ ನಿರ್ವಹಣೆಯಲ್ಲಿ ಕೈಗೊಳ್ಳಬೇಕಾದ ಅನೇಕ ಭದ್ರತಾ ಕ್ರಮಗಳಲ್ಲಿ ಲೋಪ ಕಂಡುಬಂದಿದ್ದು, ತಕ್ಷಣವೇ ಎಟಿಎಂ ಕಾರ್ಯಚಟುವಟಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಆರ್‌ಬಿಐ ಭದ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿದ ನಂತರವೇ ಮರು ಕಾರ್ಯಾಚರಣೆ ಆರಂಭಿಸುವಂತೆ ಪೊಲೀಸರು ಎಟಿಎಂ ನಿರ್ವಹಣೆ ಸಂಸ್ಥೆಗೆ ಸೂಚಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Dec 05, 2025 11:18 AM