ಬಿಜೆಪಿ ಶಾಸಕ ರಾಜೇಶ್ ಗೌಡಗೆ ಗ್ರಾಮಸ್ಥರಿಂದ ಘೇರಾವ್; ಹಂದಿಕುಂಟೆ ಗ್ರಾಮಸ್ಥರಿಂದಲೇ ಬಾಗಿನ ಅರ್ಪಣೆ
ಕೆರೆಗೆ ಬಾಗಿನ ಅರ್ಪಿಸಲು ಬಂದಿದ್ದ ಬಿಜೆಪಿ ಶಾಸಕ ಡಾ.ರಾಜೇಶ್ ಗೌಡ ಗ್ರಾಮಸ್ಥರ ಪ್ರತಿಭಟನೆಯನ್ನ ಎದುರಿಸಿದರು. ಶಿರಾ ತಾಲೂಕಿನ ಹಂದಿಕುಂಟೆ ಗ್ರಾಮದಲ್ಲಿ ಕರೆಯಲ್ಲಿ ನೀರು ತುಂಬಿದ ಹಿನ್ನೆಲೆ ಬಾಗಿನ ಅರ್ಪಿಸಲು ಶಾಸಕರು ಆಗಮಿಸಿದ ವೇಳೆ ಈ ಘಟನೆ ನಡೆದಿದೆ.
ತುಮಕೂರು: ಕೆರೆಗೆ ಬಾಗಿನ ಅರ್ಪಿಸಲು ಬಂದಿದ್ದ ಬಿಜೆಪಿ ಶಾಸಕ ಡಾ.ರಾಜೇಶ್ ಗೌಡ ಗ್ರಾಮಸ್ಥರ ಪ್ರತಿಭಟನೆಯನ್ನ ಎದುರಿಸಿದರು. ಶಿರಾ ತಾಲೂಕಿನ ಹಂದಿಕುಂಟೆ ಗ್ರಾಮದಲ್ಲಿ ಕರೆಯಲ್ಲಿ ನೀರು ತುಂಬಿದ ಹಿನ್ನೆಲೆ ಬಾಗಿನ ಅರ್ಪಿಸಲು ಶಾಸಕರು ಆಗಮಿಸಿದರು. ಈ ವೇಳೆ ಶಾಸಕನ್ನು ಪಡೆದ ಗ್ರಾಮಸ್ಥರು, ನಮ್ಮೂರನ್ನು ನಯಾಪೈಸೆ ಅಭಿವೃದ್ಧಿ ಮಾಡಿಲ್ಲ, ಈಗ ಮಳೆಯಿಂದ ತುಂಬಿದ ಕೆರೆಗೆ ಬಾಗಿನ ಅರ್ಪಿಸಲು ಬಂದಿದ್ದೀರಾ ಎಂದು ಕಿಡಿ ಕಾರಿದ್ದಾರೆ. ಅಷ್ಟಕ್ಕೂ ಸುಮ್ಮನಾಗದ ಹಂದಿಕುಂಟೆ ಗ್ರಾಮಸ್ಥರು ಶಾಸಕರನ್ನು ಬಾಗಿನ ಅರ್ಪಿಸಲು ಬಿಡದೆ ತಾವೇ ಕೆರೆಗೆ ಬಾಗಿನ ಅರ್ಪಿಸಿದ್ದಾರೆ. ಸದ್ಯ ಗ್ರಾಮಸ್ಥರು ಶಾಸಕರಿಗೆ ಘೇರಾವ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Published on: Aug 09, 2022 08:58 AM