ಗಂಡ ಹೆಂಡತಿ ನಡುವೆ ಜಗಳವಾದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ನೋಡಿಕೊಳ್ಳವುದು ಅವರ ಕೈಯಲ್ಲೇ ಇದೆ: ಡಾ ಸೌಜನ್ಯ ವಶಿಷ್ಠ

| Updated By: shivaprasad.hs

Updated on: Dec 16, 2021 | 7:21 AM

ಮೂರನೇಯವರ ಹತ್ತಿರ ಮಸ್ಯೆಯನ್ನು ಹೇಳಿಕೊಂಡರೆ, ಪರಿಹಾರ ಸಿಗಬಹುದು, ಸಿಗಲಾರದು ಇಲ್ಲ ಅಂತೇನಿಲ್ಲ. ಆದರೆ, ಪರಿಹಾರ ಹೇಳುವವರು ನಮ್ಮ ಸಮಸ್ಯೆಯ ತೀವ್ರತೆ, ಆಳವನ್ನು ಅರ್ಥಮಾಡಿಕೊಳ್ಳಲಾರರು.

ಗಂಡ ಹೆಂಡತಿ ನಡುವೆ ಬರುವ ಜಗಳ, ಮನಸ್ತಾಪ, ಇರುಸು-ಮುರುಸು ಮತ್ತು ಕಲಹಗಳಾದಾಗ ಅದನ್ನು ಮೂರನೇಯವರ ಹತ್ತಿರ ಹೇಳಿಕೊಳ್ಳವುದು, ಅವರು ಒಳ್ಳೆ ಸುಪ್ರೀಮ್ ಕೋರ್ಟಿನ ನ್ಯಾಯಾಧೀಶರ ಹಾಗೆ ನಿರ್ಣಯ ತಿಳಿಸುವುದು ಮತ್ತು ಗಂಡನಾಗಲೀ ಅಥವಾ ಹೆಂಡತಿ ಅದನ್ನು ಗಂಭೀರವಾಗಿ ಪರಿಗಣಿಸಿ ಹುಚ್ಚು ನಿರ್ಧಾರಗಳನ್ನು ತೆಗೆದುಕೊಳ್ಳುವುದು ನಮ್ಮ ಸುತ್ತಮುತ್ತ ಕಂಡುಬರುವ ಸಾಮಾನ್ಯ ಸಂಗತಿಗಳು. ಎಲ್ಲರ ಮನೆಯಲ್ಲೂ ಜಗಳಗಳಾಗುತ್ತವೆ ಆದರೆ ಜಗಳ ಮತ್ತು ಅದರ ನಂತರದ ಸ್ಥಿತಿಯನ್ನು ನಿಭಾಯಿಸುವುದರಲ್ಲಿ ನಮ್ಮ ಬುದ್ಧಿವಂತಿಕೆ ಅಡಗಿದೆ ಎಂದು ಡಾ ಸೌಜನ್ಯ ವಶಿಷ್ಠ ಹೇಳುತ್ತಾರೆ.

ದಂಪತಿಗಳ ಜಗಳ ಡಿವೋರ್ಸ್​ನಲ್ಲಿ ಪರ್ಯಾವಸನಗೊಳ್ಳುವ ಹಲವಾರು ಸಂದರ್ಭಗಳನ್ನು ನಾವು ನೋಡಿದ್ದೇವೆ. ಆದರೆ ಗಂಡ-ಹೆಂಡತಿ ಮೂರನೇಯವರ ಜೊತೆ ಚರ್ಚಿಸಿ ಡಿವೋರ್ಸ್​ನಂಥ ನಿರ್ಣಯಕ್ಕೆ ಬರುವ ಬದಲು ತಾವಿಬ್ಬರೇ ಕೂತು ಮುಕ್ತವಾಗಿ ಚರ್ಚಿಸಿದರೆ, ಆ ಸ್ಥಿತಿಯನ್ನು ದೂರತಳ್ಳಬಹುದು ಎಂದು ಸೌಜನ್ಯ ಹೇಳುತ್ತಾರೆ.

ಮೂರನೇಯವರ ಹತ್ತಿರ ಮಸ್ಯೆಯನ್ನು ಹೇಳಿಕೊಂಡರೆ, ಪರಿಹಾರ ಸಿಗಬಹುದು, ಸಿಗಲಾರದು ಇಲ್ಲ ಅಂತೇನಿಲ್ಲ. ಆದರೆ, ಪರಿಹಾರ ಹೇಳುವವರು ನಮ್ಮ ಸಮಸ್ಯೆಯ ತೀವ್ರತೆ, ಆಳವನ್ನು ಅರ್ಥಮಾಡಿಕೊಳ್ಳಲಾರರು. ಕೆಲವರು ಕಾಟಾಚಾರಕ್ಕೆ ಸಲಹೆ ನೀಡುತ್ತಾರೆ, ಮತ್ತೂ ಕೆಲವರು ವಿಘ್ನ ಸಂತೋಷಿಗಳು, ಬೇರೆಯವರ ಸಂಕಟದಲ್ಲಿ, ದುಃಖದಲ್ಲಿ ಸಂತೋಷ ಹುಡುಕಿಕೊಳ್ಳುತ್ತಾರೆ. ಅಂಥವರಿಂದ ಒಳ್ಳೆ ಸಲಹೆ ನಿರೀಕ್ಷಿಸುವುದು ಹೇಗೆ ಸಾಧ್ಯ? ಎಂದು ಸೌಜನ್ಯ ಕೇಳುತ್ತಾರೆ.

ಕಷ್ಟ-ಸುಖ ಬೇರೆಯವರೊಂದಿಗೆ ಹಂಚಿಕೊಳ್ಳುವುದು ತಪ್ಲಲ್ಲ. ಅದರೆ ಅವರು ನೀಡುವ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸುವ ಗೋಜಿಗೆ ಹೋಗಬಾರದು. ಹಾಗಾಗಿ, ಸಮಸ್ಯೆ ಎದುರಾದಾಗ, ಸಂಬಂಧದಲ್ಲಿ ಏರುಪೇರಾದಾಗ ತಪ್ಪಾಗಿರೋದು ಎಲ್ಲಿ ಅನ್ನುವುದನ್ನು ಶಾಂತ ಮನಸ್ಸಿನಿಂದ ವಿಶ್ಲೇಷಣೆ ಮಾಡಿದರೆ, ನಾವೇ ಅದಕ್ಕೆ ಉತ್ತರ ಕಂಡುಕೊಳ್ಳಬಹುದು ಎಂದು ಡಾ ಸೌಜನ್ಯ ವಶಿಷ್ಠ ಹೇಳುತ್ತಾರೆ.

ಇದನ್ನೂ ಓದಿ:   ಶಿವರಾಜ್ ಕೆ.ಆರ್ ಪೇಟೆ ಮೊದಲ ಸಂಬಳ ಎಷ್ಟು?; ಗೂಗಲ್​ನಲ್ಲಿ ಜನರು ಹುಡುಕಾಡಿದ ಪ್ರಶ್ನೆಗಳಿಗೆ ಸ್ವತಃ ಅವರೇ ಉತ್ತರಿಸಿದ್ದಾರೆ! ವಿಡಿಯೋ ನೋಡಿ