TV9 Education Summit 2025: CET ಪರೀಕ್ಷೆ ಬಗ್ಗೆ ಭಯ ಬೇಡ; ಟಿವಿ9 ಎಜುಕೇಷನ್ EXPOದಲ್ಲಿ ತಜ್ಞರು ನೀಡಿದ ಸಲಹೆ ಇಲ್ಲಿದೆ

Updated on: Apr 05, 2025 | 4:12 PM

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) 2025ರ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಏಪ್ರಿಲ್ 15-17ರಂದು ನಡೆಯಲಿದೆ. ಪರೀಕ್ಷಾ ಭಯವನ್ನು ನಿವಾರಿಸಿಕೊಳ್ಳಲು ಮತ್ತು ಪರೀಕ್ಷೆಯಲ್ಲಿ ಉತ್ತಮವಾಗಿ ಯಶಸ್ವಿಯಾಗಲು ಕೆಲವು ಸಲಹೆಗಳನ್ನು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ನೀಡಿದ್ದಾರೆ. ಟಿವಿ9 ಎಜುಕೇಷನ್ ಎಕ್ಸ್‌ಪೋದಲ್ಲಿ ಉನ್ನತ ಶಿಕ್ಷಣದ ಆಯ್ಕೆಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ. ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆ ಎದುರಿಸಿ ತಮ್ಮ ವೃತ್ತಿಜೀವನವನ್ನು ಆಯ್ಕೆ ಮಾಡಿಕೊಳ್ಳಬೇಕು.

ಬೆಂಗಳೂರಿನ ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಟಿವಿ9 ಎಜುಕೇಷನ್ EXPOದಲ್ಲಿ ಭಾಗವಹಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಾರದ ಪ್ರಸನ್ನ ಅವರು ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ಯಾವಾಗಲು ಈ ಪರೀಕ್ಷಾ ಭಯ ಇದ್ದೇ ಇರುತ್ತೆ. ಒತ್ತಡ, ಭಯ, ಆತಂಕ ಇದ್ದಾಗ ಮನಸ್ಸಿನಲ್ಲಿ ಯಾವುದೇ ವಿಚಾರಗಳು ಉಳಿಯುವುದಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) 2025ರ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಏಪ್ರಿಲ್ 15ರಿಂದ 17ವರೆಗೆ  ನಡೆಯಲಿದೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ಭಯ ಬಿಟ್ಟು ಧೈರ್ಯದಿಂದ ಪರೀಕ್ಷೆಯನ್ನು ಎದುರಿಸಿ ನಿಮ್ಮ ಕನಸಿನ ವೃತ್ತಿಪರ ಕೋರ್ಸ್ ಆಯ್ಕೆ ಮಾಡಿಕೊಳ್ಳುವುದು ಅಗತ್ಯ ಎಂದು ಪ್ರಸನ್ನ ಅವರು ಸಲಹೆ ನೀಡಿದ್ದಾರೆ.

3 ದಿನ ನಡೆಯಲಿರುವ ಟಿವಿ9 ಎಜುಕೇಷನ್ ಎಕ್ಸ್​​ಪೋ.. ಇಂಜಿನಿಯರಿಂಗ್, ಮೆಡಿಸಿನ್, ಫಾರ್ಮಾ, ಕಲೆ ಮತ್ತು ವಿಜ್ಞಾನ, ಫೈನಾನ್ಸ್, ಫೈರ್ ಸೇಫ್ಟಿ, ಹೋಟೆಲ್ ಮ್ಯಾನೇಜ್ಮೆಂಟ್, ಅನಿಮೇಶನ್, ಕಾಮರ್ಸ್.. ವಿವಿಧ ವಿಭಾಗಗಳಲ್ಲಿ ಲಭ್ಯವಿರುವ ಕೋರ್ಸ್​​ಗಳ ಬಗೆಗಿನ ಮಾಹಿತಿ. ಹಾಗೂ ಉನ್ನತ ಶಿಕ್ಷಣದ ಬಗ್ಗೆಯೂ ಒಂದೇ ಸೂರಿನಡಿ ಇಂಚಿಂಚೂ ಮಾಹಿತಿ ನೀಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Apr 05, 2025 03:51 PM