ಅಸೆಂಬ್ಲಿ ಚುನಾವಣೆ ಹೊಸ್ತಿಲಲ್ಲಿ ಸಿಎಂ ಬೊಮ್ಮಾಯಿ ಸಂಪುಟ ಪ್ರಸವ ನಿಜವಾ, ಸುಳ್ಳಾ!? -ಟಿವಿ 9 ಡಿಜಿಟಲ್ ಲೈವ್ನಲ್ಲಿ ಚರ್ಚೆ
TV9 Kannada Digital Live: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಧ್ಯದಲ್ಲೇ ದೆಹಲಿಗೆ ಭೇಟಿ ಕೊಟ್ಟು, ತಮ್ಮ ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಅಂತಿಮವಾಗಿ ಕೇಂದ್ರ ಬಿಜೆಪಿ ನಾಯಕರ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಈ ಎಲ್ಲ ಬೆಳವಣಿಗೆಗಳ ಕುರಿತು ಇಂದು ಟಿವಿ9 ಡಿಜಿಟಲ್ ಲೈವ್ನಲ್ಲಿ ಚರ್ಚಿಸೋಣ. ಆ್ಯಂಕರ್ ಹರಿಪ್ರಸಾದ್ ಈ ಚರ್ಚೆ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 3.30 ಕ್ಕೆ ನಡೆಯುವ ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ
ಅಸೆಂಬ್ಲಿ ಚುನಾವಣೆ ಹೊಸ್ತಿಲಲ್ಲಿರುವ ಕರ್ನಾಟಕದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರದಲ್ಲಿ ಇನ್ನೂ ಸಂಪುಟ ಪುನಾರಚನೆ ಕೈಗೂಡಿಲ್ಲ. ನಾಲ್ಕೈದು ಮಿನಿಸ್ಟರ್ ಪೋಸ್ಟ್ಗಳು ಖಾಲಿ ಇವೆ. ಈ ಹಂತದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸಚಿವ ಸಂಪುಟ ವಿಸ್ತರಿಸಿ, ತಮ್ಮ ಕೈ ಬಲ ಪಡಿಸಿಕೊಳ್ಳುವ ಹವಣಿಕೆಯಲ್ಲಿದ್ದಾರೆ. ಜೊತೆಗೆ, ಸಚಿವ ಸ್ಥಾನದ ಅಕಾಂಕ್ಷಿಗಳು ಸಹ ಬೊಮ್ಮಾಯಿ ಸಂಪುಟ ಸೇರುವ ತವಕದಲ್ಲಿದ್ದಾರೆ. ಇನ್ನು ಕೆಲವರು ಚುನಾವಣಾ ಸಂದರ್ಭದಲ್ಲಿ ತಮಗೆ ಮಂತ್ರಿಗಿರಿ ಬೇಡವೇ ಬೇಡಾ ಎಂದು ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ ವಿಜಯನಗರಕ್ಕೆ ಆಗಮಿಸಿದ್ದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಜೊತೆ ಸಿ ಎಂ ಬೊಮ್ಮಾಯಿ (Basavaraj Bommai) ನೇರವಾಗಿ ಒನ್ ಟು ಒನ್ ಮಾತುಕತೆ ನಡೆಸಿ, ಸುಮಾರು ಅರ್ಧ ಗಂಟೆ ಕಾಲ ಸಂಪುಟ ಪುನರಚನೆ (Bommai Ministry) ಬಗ್ಗೆ ಮಾತಾಡಿದ್ದಾರೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಧ್ಯದಲ್ಲೇ ದೆಹಲಿಗೆ ಭೇಟಿ ಕೊಟ್ಟು, ಈ ವಿಚಾರಕ್ಕೆ ಸಂಬಂಧಿಸಿದಂತೆ ಅಂತಿಮವಾಗಿ ಕೇಂದ್ರ ನಾಯಕರ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಈ ಎಲ್ಲ ಬೆಳವಣಿಗೆಗಳ ಕುರಿತು ಇಂದು ಟಿವಿ9 ಡಿಜಿಟಲ್ ಲೈವ್ನಲ್ಲಿ ಚರ್ಚಿಸೋಣ. ಆ್ಯಂಕರ್ ಹರಿಪ್ರಸಾದ್ ಈ ಚರ್ಚೆ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 3.30 ಕ್ಕೆ ನಡೆಯುವ ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ TV9 Kannada Digital Live ನಲ್ಲಿ ಚರ್ಚೆ…
ಇದನ್ನೂ ವೀಕ್ಷಿಸಿ:
KGF 2 Collection: ಸೋಮವಾರದ ಪರೀಕ್ಷೆಯಲ್ಲಿ ‘ಕೆಜಿಎಫ್ 2’ ಪಾಸ್; ಹಿಂದಿ ಮಾರುಕಟ್ಟೆಯಲ್ಲಿ 5 ದಿನಕ್ಕೆ 219.56 ಕೋಟಿ ರೂ. ಕಲೆಕ್ಷನ್
ಇದನ್ನೂ ವೀಕ್ಷಿಸಿ:
Puja to God: ದೇವರಿಗೆ ಪೂಜೆ, ಪ್ರಾರ್ಥನೆ ಯಾಕೆ ಮಾಡಬೇಕು?