AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Puja to God: ದೇವರಿಗೆ ಪೂಜೆ, ಪ್ರಾರ್ಥನೆ ಯಾಕೆ ಮಾಡಬೇಕು?

ಪೂಜೆ ಯಾಕೆ ಮಾಡಬೇಕು ? ಪ್ರಾರ್ಥನೆ ಯಾಕೆ ಮಾಡಬೇಕು ? ಬಹಳ ಜನರನ್ನು ಕಾಡುವ ಪ್ರಶ್ನೆ ಇದು. ಕಾಣದ ದೇವರಿಗೆ ಪೂಜೆ ಯಾಕೆ ಮಾಡಬೇಕು ? ದೇವರ ಪೂಜೆಯಿಂದ ನಿಜವಾಗಿಯೂ ಲಾಭವಿದೆಯೇ ? ನಾವು ದೇವರ ಪೂಜೆ ಮಾಡದಿದ್ದರೆ, ಏನಾಗುತ್ತದೆ ? "ಪೂಜೆ" ಎನ್ನುವುದು ಒಂದು ಯೋಗ ಶಾಸ್ತ್ರದ ಪದ್ಧತಿ

Puja to God: ದೇವರಿಗೆ ಪೂಜೆ, ಪ್ರಾರ್ಥನೆ ಯಾಕೆ ಮಾಡಬೇಕು?
ದೇವರಿಗೆ ಪೂಜೆ, ಪ್ರಾರ್ಥನೆ ಯಾಕೆ ಮಾಡಬೇಕು ?
TV9 Web
| Edited By: ಸಾಧು ಶ್ರೀನಾಥ್​|

Updated on: Apr 19, 2022 | 6:06 AM

Share

ಪೂಜೆ ಯಾಕೆ ಮಾಡಬೇಕು ? ಪ್ರಾರ್ಥನೆ ಯಾಕೆ ಮಾಡಬೇಕು ? ಬಹಳ ಜನರನ್ನು ಕಾಡುವ ಪ್ರಶ್ನೆ ಇದು. ಕಾಣದ ದೇವರಿಗೆ ಪೂಜೆ ಯಾಕೆ ಮಾಡಬೇಕು ? ದೇವರ ಪೂಜೆಯಿಂದ ನಿಜವಾಗಿಯೂ ಲಾಭವಿದೆಯೇ ? ನಾವು ದೇವರ ಪೂಜೆ ಮಾಡದಿದ್ದರೆ, ಏನಾಗುತ್ತದೆ ? “ಪೂಜೆ” ಎನ್ನುವುದು ಒಂದು ಯೋಗ ಶಾಸ್ತ್ರದ ಪದ್ಧತಿ (puja prayer). ಸಾಧನೆಗೆ ಅನು ಸಂಧಾನವಾದ ಪ್ರಕ್ರಿಯೆ ಎಂಬ ಪರಮಾರ್ಥ ಸೃಷ್ಟಿ, ಸ್ಥಿತಿ, ಲಯಗಳೆಂಬ ಜೀವನ ವ್ಯವಸ್ಥೆಗೆ ಕಾರಣವಾದ ದೇವಾನು ದೇವನಿಗೆ ಸರ್ವೋತ್ತಮನಿಗೆ ಕೃತಜ್ಞತೆ ಸಲ್ಲಿಸುವ ಧಾರ್ಮಿಕ ವಿಧಾನವೇ ಪೂಜೆ. ಪೂಜೆ ಮಾಡದೇ ಇದ್ದರೇ ಏನಾಗುತ್ತದೆಯೋ ಗೊತ್ತಿಲ್ಲ. ಆದರೆ, ಪ್ರತಿನಿತ್ಯವೂ ಪೂಜೆ ಮಾಡಿದರೆ, ಮಾತ್ರ ನಮ್ಮ ಜೀವನಕ್ಕೇನು ಬೇಕೋ ಎಲ್ಲವೂ ಸಿಗುತ್ತವೆ. ಶಾಂತಿ, ನೆಮ್ಮದಿ, ನಂಬಿಕೆ, ಸಂತೋಷ, ಸಹೃದಯತೆ, ಯೋಜನೆ ಮುನ್ನಡೆ, ಧೈರ್ಯ, ಕಾರ್ಯದಕ್ಷತೆ, ದೀಕ್ಷೆ, ಆಶಾವಾದ, ಶ್ರದ್ಧೆ, ಕಲಿಯುವಿಕೆ, ಆರಾಧನೆ, ಐಕ್ಯತೆ, ಮುಂತಾದ ಶಕ್ತಿ ಕ್ರಿಯೆಗಳು ಲಭಿಸುತ್ತವೆ‌. ಪೂಜೆಯಿಂದ ಮನೋಶಕ್ತಿ ವೃದ್ಧಿಯಾಗುತ್ತದೆ (spiritual).

ಅವಶ್ಯ ಮನುಭೋಕ್ತವ್ಯಂ ಗತಂ ಜನ್ಮ ಶುಭಾಶುಭಂ| ಗತ ಜನ್ಮದಲ್ಲಿ ಮಾಡಿರುವ ಪಾಪ ಪುಣ್ಯಗಳನ್ನೇ ನಾವು ಈ ಜನ್ಮದಲ್ಲಿ ಅನುಭವಿಸುತ್ತಿದ್ದೇವೆ. ಅಂದಮೇಲೆ ಗತ ಜನ್ಮದ ಕಾರಣದಿಂದ ಬಂದ ಕಷ್ಟಗಳನ್ನು ಈಗ ಅನುಭವಿಸಬೇಕಾಗಿ ಬಂದಿದೆ. ಈಗ ಮಾಡುವ ಪೂಜೆಗೂ ಕಷ್ಟಗಳಿಗೂ ಸಂಬಂಧವಿಲ್ಲ. ನಾವೀಗ ಮಾಡುವ ಪೂಜಾಫಲದಿಂದ ಕಷ್ಟ ನಿವಾರಣೆಯಾಗದಿದ್ದರೂ ಉಪಶಮನ ಸಿಗುತ್ತದೆ. ಸಹನಾ ಶಕ್ತಿ ಸಿಗುತ್ತದೆ. ಗತ ಜನ್ಮದ ರೋಗಕ್ಕೆ ಈ ಜನ್ಮದ ಔಷಧಿಯೇ ಪೂಜೆ.

ಪ್ರಾರ್ಥನೆ ಪೂಜೆ ನಂಬಿದವರಿಗೆ ದೇವರಿದ್ದಾನೆ, ಪಾಲಿಸುತಾನೆ, ರಕ್ಷಿಸುತ್ತಾನೆ, ಸಹಕರಿಸುತ್ತಾನೆ ಎಂಬುದಕ್ಕೆ ಸಾಕ್ಷಿಯಾಗುವ ಸ್ವಾರಸ್ಯಕರ ಪ್ರಸಂಗವೊಂದು ಇಲ್ಲಿದೆ. ಒಂದು ನಗರದಲ್ಲಿ ಔಷಧ ಅಂಗಡಿ ಹೊಂದಿದ್ದ ವ್ಯಕ್ತಿಯೊಬ್ಬ ದೇವರನ್ನು ನಂಬದ ಪರಮ ನಾಸ್ತಿಕನಾಗಿದ್ದ. ಆದರೆ ಜನಸೇವೆಯೆಂಬ ಕಾಯಕದಿಂದ ಆಸುಪಾಸಿನವರಿಗೆಲ್ಲ ಅಚ್ಚುಮೆಚ್ಚಿನವನಾಗಿದ್ದ. ಆತನ ಮನೆಯವರೆಲ್ಲ ಆಸ್ತಿಕರಾಗಿದ್ದರು. ದೇವಸ್ಥಾನ, ದೇವರು, ಪ್ರಾರ್ಥನೆ ಇಂತಹ ವಿಚಾರದಲ್ಲಿ ನಂಬಿಕೆ ಇದ್ದ ಮನೆಮಂದಿಯೆಲ್ಲ ಈತನನ್ನು ಪ್ರಾರ್ಥಿಸುವಂತೆ ಒತ್ತಾಯಿಸುತ್ತಿದ್ದರೂ ನಾಸ್ತಿಕನಾಗಿಯೇ ಉಳಿದಿದ್ದ.

ಒಂದು ದಿನ ರಾತ್ರಿ ಜೋರಾಗಿ ಮಳೆ ಸುರಿಯಲಾರಂಭಿಸಿದಾಗ ವಿದ್ಯುತ್ ಕಡಿತವಾಯಿತು. ಆ ವೇಳೆಯಲ್ಲಿ ಮಳೆಯಲ್ಲಿ ತೋಯ್ದು ಹೋಗಿದ್ದ ಬಾಲಕನೊಬ್ಬ ಓಡೋಡಿ ಬಂದು ಅನಾರೋಗ್ಯ ಪೀಡಿತಳಾಗಿರುವ ತನ್ನ ತಾಯಿಗೆ ತುರ್ತಾಗಿ ಔಷಧ ಕೊಡುವಂತೆ ಕೋರಿ ಔಷಧ ಚೀಟಿಯನ್ನು ಕೊಟ್ಟ. ಅಂಗಡಿ ಮಾಲೀಕ ಒಲ್ಲದ ಮನಸ್ಸಿನಿಂದಲೇ ಟಾರ್ಚ್ ಬೆಳಕಿನಲ್ಲಿ ತಡಕಾಡಿ ಔಷಧ ಕೊಟ್ಟು ಕಳಿಸಿದ.

ಕೊಂಚ ಹೊತ್ತಲ್ಲಿ ಮಳೆ ನಿಂತು, ವಿದ್ಯುತ್ ದೀಪಗಳು ಬೆಳಗಿದವು. ಅಷ್ಟರಲ್ಲಿ ಅಂಗಡಿ ಮಾಲೀಕ, ತಾನು ಕತ್ತಲಲ್ಲಿ ಬಾಲಕನಿಗೆ ಕೊಟ್ಟ ಔಷಧಗಳತ್ತ ಗಮನ ಹರಿಸಿ ಹೌಹಾರಿದ. ಅದು ಮನುಷ್ಯರು ಸೇವಿಸುವ ಔಷಧವಾಗಿರದೆ ಕ್ರಿಮಿನಾಶಕದ ಬಾಟಲಿಯಾಗಿತ್ತು. ತನ್ನಿಂದ ಅಮಾಯಕ ಜೀವವೊಂದು ಬಲಿಯಾಗುತ್ತದಲ್ಲ ಎಂಬ ಪಾಪಪ್ರಜ್ಞೆಯ ಜೊತೆಗೆ ಆ ಬಾಲಕ ಅನಾಥನಾಗುತ್ತಾನಲ್ಲ ಎಂಬ ಅಪರಾಧ ಪ್ರಜ್ಞೆಯೂ ಕಾಡಿತು. ಮುಂದೇನು ಮಾಡಬೇಕು ಎಂಬುದನ್ನು ಅರಿಯದೆ ಈ ದುರಂತವನ್ನು ಹೇಗೆ ತಪ್ಪಿಸಲಿ ಎಂದು ಯೋಚಿಸುತ್ತಾನೆ.

ಆಗ ಆತನಿಗೆ ಗೋಡೆಯಲ್ಲಿ ತೂಗು ಹಾಕಿದ್ದ ದೇವರ ಚಿತ್ರಪಟವೊಂದು ಕಣ್ಣಿಗೆ ಬಿತ್ತು. ಒಲ್ಲದ ಮನಸಿನಿಂದಲೇ, ಒತ್ತಾಯದಿಂದ ಆತನ ತಂದೆ ಅದನ್ನು ಅಲ್ಲಿ ತೂಗು ಹಾಕಿದ್ದರು. ಯಾವುದೇ ಸಂದರ್ಭದಲ್ಲಿ ಪರಿಸ್ಥಿತಿ ನಿನ್ನ ಕೈಮೀರಿ ಹೋದಾಗ, ಅಸಹಾಯಕ ಸ್ಥಿತಿಯಲ್ಲಿದ್ದಾಗಲಾದರೂ ಈ ಚಿತ್ರ ಪಟಕ್ಕೆ ಕೈಮುಗಿದು ಮನಃಪೂರ್ವಕವಾಗಿ ಪ್ರಾರ್ಥಿಸು, ದಾರಿಯೊಂದು ಗೋಚರವಾಗುತ್ತದೆ ಎಂದು ಅಪ್ಪ ಹೇಳಿದ್ದ ಮಾತು ಆ ಕ್ಷಣಕ್ಕೆ ನೆನಪಿಗೆ ಬಂತು. ಎಂದೂ ದೇವರಿಗೆ ಕೈಮುಗಿಯದಿದ್ದ ಆತ ಮೊದಲ ಬಾರಿಗೆ ಕೈಮುಗಿದು ಪ್ರಾರ್ಥನೆ ಸಲ್ಲಿಸಿದ.

ಕೆಲವೇ ಕ್ಷಣಗಳಲ್ಲಿ ಪವಾಡವೋ ಎಂಬಂತೆ ಔಷಧ ತೆಗೆದುಕೊಂಡು ಹೋಗಿದ್ದ ಬಾಲಕ ಏದುಸಿರು ಬಿಡುತ್ತ ಓಡೋಡಿ ಅಂಗಡಿಗೆ ಬಂದು ಅಂಕಲ್ ಜೋರು ಮಳೆಯಲ್ಲಿ ನಾನು ಓಡೋಡಿ ಹೋಗುತ್ತಿದ್ದಾಗ ನೀವು ಕೊಟ್ಟಿದ್ದ ಔಷಧ ಬಾಟಲಿ ಕೈಜಾರಿ ಕೆಳಗೆ ಬಿದ್ದು ಒಡೆದು ಹೋಯಿತು, ನನಗೆ ಇನ್ನೊಂದು ಔಷಧ ಬಾಟಲಿ ಕೊಡಿ, ಆದರೆ ನನ್ನಲ್ಲೀಗ ಕೊಡಲು ಹಣವಿಲ್ಲ’ ಎಂದು ಗಾಬರಿಯಿಂದ ಒಂದೇ ಉಸಿರಿಗೆ ಹೇಳಿ ಕಣ್ಣೀರು ಹಾಕಿದ.

ಆಗ ಅಂಗಡಿಯವನು ಆ ಬಾಲಕನನ್ನು ತಬ್ಬಿಕೊಂಡು, ಆತನಿಗೆ ಬೇಕಾದ ಔಷಧದ ಜತೆಗೆ ಕೊಂಚ ಹಣವನ್ನೂ ಕೊಟ್ಟು ಕಳಿಸಿದ. ನಾಸ್ತಿಕನಾಗಿದ್ದರೂ ಪರಿಶುದ್ಧ ಮನಸ್ಸಿನಿಂದ ಆತ ಮೊದಲ ಬಾರಿಗೆ ದೇವರಲ್ಲಿ ಮೊರೆಇಟ್ಟು ಮಾಡಿದ ಪ್ರಾರ್ಥನೆ ಕೈಗೂಡಿತ್ತು. ಮನುಜ ಶುದ್ಧಭಕ್ತಿಯ ಮೂಲಕ ಮೋಕ್ಷವನ್ನು ಪಡೆಯಬಹುದು. ಸರ್ವಶಕ್ತನಾದ ಭಗವಂತನಲ್ಲಿ ಅನುದಿನ, ಅನುಕ್ಷಣ ಪ್ರಾರ್ಥನೆ ಸಲ್ಲಿಸುತ್ತಿರಬೇಕು. ನಿಷ್ಕಲ್ಮಶ ಮನದಿಂದ ಪ್ರಾರ್ಥನೆ ಸಲ್ಲಿಸಿದಾಗ ಅಸಾಧ್ಯವೂ ಸಾಧ್ಯವಾಗುತ್ತದೆ. (ಬರಹ: ಆಶಾ ನಾಗಭೂಷಣ)

Follow Us
TV9 Web
TV9 Web

TV9 Kannada

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ