Tv9 Kannada Digital live: ಮಳೆಯಿಂದ  ಜನರ ಗೋಳು ಕೇಳುವವರು ಯಾರು? ಸರ್ಕಾರದ ಕ್ರಮಗಳು ಏನು?

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 11, 2022 | 3:41 PM

ಮಳೆಯಿಂದ  ಜನರ ಗೋಳು ಕೇಳುವವರು ಯಾರು? ಜನಪ್ರತಿನಿಧಿಗಳು ಯಾವೆಲ್ಲ ರೀತಿಯಲ್ಲಿ ಜನರಿಗೆ ಸ್ಪಂಧಿಸುತ್ತಿದ್ದಾರೆ. ಸರ್ಕಾರದ ಕ್ರಮಗಳು ಏನು ಎಂಬುದರ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಲೈವ್ ನಲ್ಲಿ ಚರ್ಚೆ ನೆಡಸಲಾಗುತ್ತಿದೆ. ಈ ಚರ್ಚೆಯಲ್ಲಿ  ನೀವು ಭಾಗವಹಿಸಿ. 

ಮಳೆ ಮಳೆ ಎಲ್ಲ  ಕಡೆ ಮಳೆ, ಈ ಮಳೆಯಿಂದ ಒಂದಲ್ಲ ಒಂದು ಅವಾಂತರಗಳು ಶುರುವಾಗಿದೆ. ಹಲವು ಕಡೆ ಮಳೆಯಿಂದ ಸಾವು-ನೋವುಗಳು ಸಂಭವಿಸಿದೆ.  ಈಗಾಗಲ್ಲೇ ಕರ್ನಾಟಕದ ಅನೇಕ ಕಡೆ ರೆಡ್ ಅಲರ್ಟ್, ಇನ್ನೂ ಕೆಲವು ಕಡೆ ಆರೆಂಜ್ ಅಲರ್ಟ್ ಗಳನ್ನು ಘೋಷಣೆ ಮಾಡಿದ್ದಾರೆ.  ಕರ್ನಾಟಕದ ದಕ್ಷಿಣ ಭಾಗದಲ್ಲಿ ಮಳೆಯಿಂದ ಸುಮಾರು ತೊಂದರೆಗಳು ಉಂಟಾಗಿದೆ. ಕೆಲವು ಜಿಲ್ಲೆಗಳ ಶಾಲಾ – ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ.  ಆದರೆ ಈ ಹಿಂದೆ ನಡೆದ ಮಳೆ ಹಾನಿಗೆ ಸರ್ಕಾರ ಕೈಗೊಂಡ ಕ್ರಮಗಳು ಏನು ಮತ್ತು ಮಳೆ ಹಾನಿಯಿಂದ ಮನೆ-ಮಠ ಕಳೆದುಕೊಂಡ ಜನರಿಗೆ ಪರಿಹಾರ ಸಕಾಲದಲ್ಲಿ ದೊರಕಿದ್ದೀಯಾ ಇದರ ಜೊತೆಗೆ ಈಗಿನ ಮಳೆಯಿಂದ  ಜನರ ಗೋಳು ಕೇಳುವವರು ಯಾರು? ಜನಪ್ರತಿನಿಧಿಗಳು ಯಾವೆಲ್ಲ ರೀತಿಯಲ್ಲಿ ಜನರಿಗೆ ಸ್ಪಂಧಿಸುತ್ತಿದ್ದಾರೆ. ಸರ್ಕಾರದ ಕ್ರಮಗಳು ಏನು ಎಂಬುದರ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಲೈವ್ ನಲ್ಲಿ ಚರ್ಚೆ ನೆಡಸಲಾಗುತ್ತಿದೆ. ಈ ಚರ್ಚೆಯಲ್ಲಿ  ನೀವು ಭಾಗವಹಿಸಿ.

Published on: Jul 11, 2022 03:40 PM