ಪುತ್ತೂರು ಬಳಿ ರಸ್ತೆ ಡಿವೈಡರ್ ಗೆ ಢಿಕ್ಕಿ ಹೊಡೆದು ಹರಿವ ಹೊಳೆಗೆ ಬಿದ್ದ ಕಾರು ಮತ್ತು ಅದರಲ್ಲಿದ್ದ ಇಬ್ಬರು ಪತ್ತೆಯಾಗುತ್ತಿಲ್ಲ!
ಕಾರು ಮತ್ತು ಅದರಲ್ಲಿದ್ದ ಇಬ್ಬರು ಪ್ರಯಾಣಿಕರನ್ನು ಹುಡುಕುವ ಕಾರ್ಯಾಚರಣೆಯನ್ನು ಎಸ್ ಡಿ ಆರ್ ಎಫ್ (SDRF), ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬಹಳ ಸಮಯದಿಂದ ನಡೆಸುತ್ತಿರುವುರಾದರೂ ಕಾರು ಮತ್ತು ಅದರಲ್ಲಿದ್ದವರು ಪತ್ತೆಯಾಗಿಲ್ಲ.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಕಾಣಿಯೂರು ಬಳಿ ರಸ್ತೆ ತಡೆಗೋಡೆಗೆ (divider) ಢಿಕ್ಕಿ ಹೊಡೆದ ಕಾರು ಪಕ್ಕದಲ್ಲಿ ಹರಿಯುತ್ತಿದ್ದ ಹೊಳೆಗೆ (stream) ಬಿದ್ದು ಕೊಚ್ಚಿಕೊಂಡು ಹೋಗಿದೆ. ಕಾರು ಮತ್ತು ಅದರಲ್ಲಿದ್ದ ಇಬ್ಬರು ಪ್ರಯಾಣಿಕರನ್ನು ಹುಡುಕುವ ಕಾರ್ಯಾಚರಣೆಯನ್ನು ಎಸ್ ಡಿ ಆರ್ ಎಫ್ (SDRF), ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬಹಳ ಸಮಯದಿಂದ ನಡೆಸುತ್ತಿರುವುರಾದರೂ ಕಾರು ಮತ್ತು ಅದರಲ್ಲಿದ್ದವರು ಪತ್ತೆಯಾಗಿಲ್ಲ. ಈ ಹೊಳೆ ನೀರು ಹರಿದುಕೊಂಡು ಹೋಗಿ ಕುಮಾರಧಾರ ನದಿಗೆ ಸೇರುತ್ತದೆ. ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಇದನ್ನೂ ಓದಿ: Viral Video: ಮದುವೆ ದಿನ ವಿಭಿನ್ನ ಒಪ್ಪಂದಕ್ಕೆ ಸಹಿ ಹಾಕಿದ ನವಜೋಡಿ, ವಿಧಿಸಲಾದ ಷರತ್ತುಗಳು ಏನೇನು ಗೊತ್ತಾ?
Latest Videos