Daily Devotional: ಮನೆಯಲ್ಲಿನ ಜೇಡರ ಬಲೆ ಏನು ಸೂಚಿಸುತ್ತದೆ, ಎಷ್ಟು ಶುಭ, ಅಶುಭ? ಇಲ್ಲಿದೆ ಉತ್ತರ
ಮನೆಯಲ್ಲಿರುವ ಜೇಡರ ಬಲೆಗಳನ್ನು ಅಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮನೆಯನ್ನು ಹೇಗೆ ಶುದ್ಧವಾಗಿಟ್ಟುಕೊಳ್ಳಬೇಕು? ತಲಬಾಗಿಲು ಹೇಗಿಟ್ಟುಕೊಳ್ಳಬೇಕು? ಜೇಡರ ಬಲೆ ಏನು ಅರ್ಥ ಸೂಚಿಸುತ್ತದೆ? ಎಷ್ಟು ಶುಭ, ಅಶುಭ ? ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ...
ಪ್ರತಿಯೊಬ್ಬರೂ ಕೂಡ ತಮ್ಮ ಮನೆ ಸುಂದರವಾಗಿರಬೇಕು, ಸ್ವಚ್ಛವಾಗಿರಬೇಕು ಎಂದು ಬಯಸುತ್ತಾರೆ. ಅದರಲ್ಲೂ ಕೂಡ ಕೀಟಗಳಿಂದ ಆಗುವ ತೊಂದರೆಯಿಂದ ದೂರವಿರುವುದಕ್ಕೆ ಬಯಸುತ್ತಾರೆ. ಕೆಲವು ಕೀಟಗಳು ಬೇಡಬೇಡವೆಂದರೂ ಮನೆಯೊಳಗೆ ಸೇರಿಕೊಂಡು ಬಿಡುತ್ತವೆ. ಅವುಗಳ ಜೊತೆಗೆ ಬದುಕುವುದು ನಿಮಗೆ ಇಷ್ಟವಿಲ್ಲದೆ ಇದ್ದರೂ ಕೂಡ ಅನಿವಾರ್ಯವಾಗಿ ಅವುಗಳ ತೊಂದರೆಗೆ ನೀವು ಒಳಗಾಗಬೇಕಾಗುತ್ತದೆ. ಅದರಲ್ಲೊಂದು ಜೇಡ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮನೆಯಲ್ಲಿರುವ ಜೇಡರ ಬಲೆಗಳನ್ನು ಅಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿರುವ ಜೇಡರ ಬಲೆ ಮನೆಯಲ್ಲಿ ವಾಸ್ತು ದೋಷಗಳನ್ನು ಉಂಟುಮಾಡುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜೇಡರ ಬಲೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ರೋಗಗಳಿಗೆ ಆಹ್ವಾನ ನೀಡುತ್ತದೆ. ಹಾಗಿದ್ದರೆ ಮನೆಯನ್ನು ಹೇಗೆ ಶುದ್ಧವಾಗಿಟ್ಟುಕೊಳ್ಳಬೇಕು? ತಲಬಾಗಿಲು ಹೇಗಿಟ್ಟುಕೊಳ್ಳಬೇಕು? ಜೇಡರ ಬಲೆ ಏನು ಅರ್ಥ ಸೂಚಿಸುತ್ತದೆ? ಎಷ್ಟು ಶುಭ, ಅಶುಭ ? ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ…