Sign In

By signing in or creating an account, you agree with Associated Broadcasting Company's Terms & Conditions and Privacy Policy.

TV9 Karnataka Summit 2023; ಕೆಎಸ್​ಆರ್​ಟಿಸಿ ನೌಕರರಿಗೆ ಪಿಂಚಣಿ ನೀಡುವ ವ್ಯವಸ್ಥೆ ಜಾರಿಗೆ ತರುತ್ತೇವೆ: ರಾಮಲಿಂಗಾರೆಡ್ಡಿ

TV9 Karnataka Summit 2023; ಕೆಎಸ್​ಆರ್​ಟಿಸಿ ನೌಕರರಿಗೆ ಪಿಂಚಣಿ ನೀಡುವ ವ್ಯವಸ್ಥೆ ಜಾರಿಗೆ ತರುತ್ತೇವೆ: ರಾಮಲಿಂಗಾರೆಡ್ಡಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 15, 2023 | 7:46 PM

TV9 Karnataka Summit 2023; ಅರವತ್ತನೇ ವಯಸ್ಸಲ್ಲಿ ನಿವೃತ್ತನಾಗುವ ವ್ಯಕ್ತಿಗೆ ಬೇರೆ ಕಡೆ ಹೋಗಿ ಕೆಲಸ ಮಾಡುವಷ್ಟು ತ್ರಾಣವಾದರೂ ಎಲ್ಲಿರುತ್ತೆ? ಗಮನಿಸಬೇಕಿರುವ ಮತ್ತೊಂದು ಸಂಗತಿಯೆಂದರೆ, ಸಾರಿಗೆ ನೌಕರರ ವೇತನ ಪರಿಷ್ಕರಣೆ ಪ್ರತಿ 4 ವರ್ಷಕ್ಕೊಮ್ಮೆ ನಡೆಯುತ್ತದೆ. ಮಂಡಳಿ/ ನಿಗಮಗಳು ಸರ್ಕಾರದ ಅಧೀನದಲ್ಲಿ ಬರುತ್ತವಾದರೂ ಸರ್ಕಾರೀ ನೌಕರರಿಗೆ ಪ್ರತಿವರ್ಷ ವೇತನ ಪರಿಷ್ಕರಣೆ ಆದಂತೆ ಸಾರಿಗೆ ಸಂಸ್ಥೆ ನೌಕರರ ವೇತನ ಅಗಲ್ಲ.

ಬೆಂಗಳೂರು: ಕನಸಿನ ಕರುನಾಡು ಕರ್ನಾಟಕ ಸಮ್ಮಿಟ್-2023 (TV9 Karnataka Summit 2023) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಮುಂಬರುವ ದಿನಗಳಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ನೌಕರರ ಬದುಕನ್ನು ಉತ್ತಮಗೊಳಿಸುವ ಭರವಸೆ ನೀಡಿದರು. ನಮಗೆಲ್ಲ ಗೊತ್ತಿರುವ ಹಾಗೆ ಕೆಎಸ್ ಆರ್ ಟಿ ಸಿ ನೌಕರರಿಗೆ (KSRTC employees) ಪಿಂಚಣಿ ಸೌಲಭ್ಯ (pension) ಇಲ್ಲದಿರುವುದರಿಂದ ನಿವೃತ್ತಿ ನಂತರ ಬದುಕು ನಿರ್ಭರವಾಗುತ್ತದೆ. ಅದರೆ ಈ ಕೊರಗನ್ನು ದೂರ ಮಾಡಲಿ ಸರ್ಕಾರದ ಕಡೆಯಿಂದ ಪ್ರಯತ್ನಗಳು ನಡೆಯುತ್ತಿವೆ ಎಂದು ಸಚಿವ ಹೇಳಿದರು. ಅವರು ಹೇಳುವ ಪ್ರಕಾರ ಸಾರಿಗೆ ನೌಕರರಿಗೂ ಪಿಂಚಣು ನೀಡುವ ವ್ಯವಸ್ಥೆಯನ್ನು ಆದಷ್ಟು ಬೇಗ ಜಾರಿಗೊಳಿಸಲಾಗುವುದು. ಇದು ನಿಜಕ್ಕೂ ಶುಭ ಸಮಾಚಾರವೇ. ಅರವತ್ತನೇ ವಯಸ್ಸಲ್ಲಿ ನಿವೃತ್ತನಾಗುವ ವ್ಯಕ್ತಿಗೆ ಬೇರೆ ಕಡೆ ಹೋಗಿ ಕೆಲಸ ಮಾಡುವಷ್ಟು ತ್ರಾಣವಾದರೂ ಎಲ್ಲಿರುತ್ತೆ? ಗಮನಿಸಬೇಕಿರುವ ಮತ್ತೊಂದು ಸಂಗತಿಯೆಂದರೆ, ಸಾರಿಗೆ ನೌಕರರ ವೇತನ ಪರಿಷ್ಕರಣೆ ಪ್ರತಿ 4 ವರ್ಷಕ್ಕೊಮ್ಮೆ ನಡೆಯುತ್ತದೆ. ಮಂಡಳಿ/ ನಿಗಮಗಳು ಸರ್ಕಾರದ ಅಧೀನದಲ್ಲಿ ಬರುತ್ತವಾದರೂ ಸರ್ಕಾರೀ ನೌಕರರಿಗೆ ಪ್ರತಿವರ್ಷ ವೇತನ ಪರಿಷ್ಕರಣೆ ಆದಂತೆ ಸಾರಿಗೆ ಸಂಸ್ಥೆ ನೌಕರರ ವೇತನ ಅಗಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ