ಟಿವಿ9 ‘ನಕ್ಷತ್ರ ಸಮ್ಮಾನ್’ ಪ್ರಶಸ್ತಿ ಪಡೆದ ರವೀನಾ ಟಂಡನ್​ರ ಸಿನಿ ಪಯಣ ಹೇಗಿತ್ತು?

ಟಿವಿ9 ‘ನಕ್ಷತ್ರ ಸಮ್ಮಾನ್’ ಪ್ರಶಸ್ತಿ ಪಡೆದ ರವೀನಾ ಟಂಡನ್​ರ ಸಿನಿ ಪಯಣ ಹೇಗಿತ್ತು?

ಮಂಜುನಾಥ ಸಿ.
|

Updated on:Feb 25, 2024 | 11:24 PM

Raveena Tandon: ತಾವು ಸೇವೆ ಸಲ್ಲಿಸಿದ ಕ್ಷೇತ್ರದಲ್ಲಿ ಬದಲಾವಣೆ ತಂದ, ಹೊಸ ಯೋಚನೆ ಪ್ರವಹಿಸುವಂತೆ ಮಾಡಿದ ಸಾಧಕರನ್ನು ಗುರುತಿಸಿ ಅವರಿಗೆ ಟಿವಿ9 ‘ನಕ್ಷತ್ರ ಸಮ್ಮಾನ್’ ಪ್ರಶಸ್ತಿ ನೀಡಿದೆ. ಪ್ರಶಸ್ತಿಗೆ ಭಾಜನರಾದ ನಟಿ ರವೀನಾ ಟಂಡನ್, ತಮ್ಮ ಸಿನಿ ಪಯಣದ ಬಗ್ಗೆ ಹೇಳಿದ್ದು ಹೀಗೆ...

ಟಿವಿ9 ನೆಟ್​ವರ್ಕ್ (Tv9 Network)​ ವಿವಿಧ ಕ್ಷೇತ್ರದ ಸಾಧಕರು, ಆಯಾ ಕ್ಷೇತ್ರದಲ್ಲಿ ಭಿನ್ನ ಹಾದಿ ತುಳಿದು ಹೆಸರು ಮಾಡಿದವರು, ಕ್ಷೇತ್ರದ ದಿಕ್ಕು ಬದಲಾಯಿಸಿದವರನ್ನು ಹುಡುಕಿ ಅವರಿಗೆ ಗೌರವಪೂರ್ವಕಾಗಿ ‘ನಕ್ಷತ್ರ ಸಮ್ಮಾನ್’ ಪ್ರಶಸ್ತಿ ನೀಡಿ ಗೌರವಿಸಿದೆ. ಮನೊರಂಜನಾ ಕ್ಷೇತ್ರದಲ್ಲಿ ಕೆಲವರಿಗೆ ಪ್ರಶಸ್ತಿ ಧಕ್ಕಿದ್ದು ಅದರಲ್ಲಿ ನಟಿ ರವೀನಾ ಟಂಡನ್ (Raveena Tandon) ಸಹ ಒಬ್ಬರು. ಚಿತ್ರರಂಗದಲ್ಲಿ ನಾಯಕಿಯಾಗಿ ಬೇಡಿಕೆಯಲ್ಲಿರುವಾಗಲೇ ಕಮರ್ಶಿಯಲ್ ಸಿನಿಮಾಗಳನ್ನು ಬಿಟ್ಟು ಕಲಾತ್ಮಕ, ಬ್ರಿಜ್ ಸಿನಿಮಾಗಳ ಕಡೆಗೆ ಹೊರಳಿದ್ದಲ್ಲದೆ, ಮುಖ್ಯ ವಾಹಿನಿ ನಟ-ನಟಿಯರು ಕಲಾತ್ಮಕ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವಂತೆ ವಿಶೇಷವಾಗಿ ಕಮರ್ಶಿಯಲ್ ಯಶಸ್ಸು ಕಂಡ ನಟಿಯರು ತಮ್ಮ ತಾವು ಪ್ರಯೋಗಕ್ಕೆ ಒಡ್ಡಿಕೊಳ್ಳುವ ಸಂಪ್ರದಾಯಕ್ಕೆ ಚಾಲನೆ ನೀಡಿದರು. ಚಿತ್ರರಂಗದಲ್ಲಿ ಈಗ ದೊಡ್ಡ ಹೆಸರು ಗಳಿಸಿರುವ ರವೀನಾ ಟಂಡನ್​ರ ಸಿನಿ ಪಯಣ ಹೇಗಿತ್ತು? ಅವರ ಬಾಲ್ಯ ಹೇಗಿತ್ತು? ಟಿವಿ9 ‘ವಾಟ್ ಇಂಡಿಯಾ ಥಿಂಕ್ಸ್ ಟುಡೆ’ ಸಂವಾದದಲ್ಲಿ ರವೀನಾ ಈ ಬಗ್ಗೆ ಮಾತನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 25, 2024 11:24 PM