ಟಿವಿ9 ಫೆಸ್ಟಿವಲ್ ಆಫ್ ಇಂಡಿಯ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ನೀಡಿದ ಬರುನ್ ದಾಸ್

|

Updated on: Oct 09, 2024 | 4:04 PM

ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ ಕಾರ್ಯಕ್ರಮದಲ್ಲಿ 250ಕ್ಕೂ ಹೆಚ್ಚು ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದ್ದು ದೇಶ-ವಿದೇಶಗಳ ಹತ್ತು ಹಲವು ಪ್ರಾಡಕ್ಟ್​ಗಳು ಸಿಗಲಿವೆ. ಪೀಠೋಪಕರಣ, ಸೌಂದರ್ಯ ಸಾಮಗ್ರಿಗಳು, ಗೃಹೋಪಯೋಗಿ ಮತ್ತು ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಇಲ್ಲಿ ಕೊಳ್ಳಬಹುದು.

ದೆಹಲಿ: ಪ್ರತಿವರ್ಷ ದಸರಾ ಹಬ್ಬದ ಸಂದರ್ಭದಲ್ಲಿ ಟಿವಿ9 ನೆಟ್ವರ್ಕ್ ಅದ್ದೂರಿಯಾಗಿ ಆಯೋಜಿಸುವ ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ ಕಾರ್ಯಕ್ರಮವನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬರುನ್ ದಾಸ್ ಇಂದು ಉದ್ಘಾಟಿಸಿದರು. ರಾಷ್ಟ್ರದ ರಾಜಧಾನಿ ಇಂಡಿಯ ಗೇಟ್ ಬಳಿಯ ಮೇಜರ್ ಧ್ಯಾನ್​ಚಂದ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಫೆಸ್ಟಿವಲ್ ಆಫ್ ಇಂಡಿಯಾ ಇಂದಿನಿಂದ 5-ದಿನ ಕಾಲ ಅಂದರೆ ಅಕ್ಟೋಬರ್ 13ರವರೆಗೆ ನಡೆಯಲಿದೆ. ದೃಶ್ಯಗಳಲ್ಲಿ ಬರುನ್ ದಾಸ್ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸುತ್ತಿರುವುದನ್ನು ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: TV9 Festival of India: ಟಿವಿ 9 ಹಬ್ಬಕ್ಕೆ ದಿನಗಣನೆ ಶುರು, ಇದು ಭಾರತೀಯ ಶ್ರೀಮಂತ ಸಂಸ್ಕೃತಿಯ ಅನಾವರಣ