AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು

Video: ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು

ನಯನಾ ರಾಜೀವ್
|

Updated on:Jan 30, 2026 | 12:26 PM

Share

ಉತ್ತರಾಖಂಡದ ತೆಹ್ರಿ ಗರ್ವಾಲ್ ಜಿಲ್ಲೆಯಲ್ಲಿ ಇಬ್ಬರು ಪ್ಯಾರಾಗ್ಲೈಡರ್‌ಗಳು ಗಾಳಿಯಲ್ಲಿ ಡಿಕ್ಕಿ ಹೊಡೆದು ನದಿಗೆ ಬಿದ್ದಿರುವ ಘಟನೆ ನಡೆದಿದೆ. ಯಾವುದೇ ದೊಡ್ಡ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡವು ತಕ್ಷಣ ಸ್ಥಳಕ್ಕೆ ತಲುಪಿ ಪ್ಯಾರಾಗ್ಲೈಡಿಂಗ್ ಪೈಲಟ್‌ಗಳನ್ನು ರಕ್ಷಿಸಿದೆ. ಮೂರು ದಿನಗಳ ಆಕ್ರೋ ಫೆಸ್ಟಿವಲ್ ಮತ್ತು ಎಸ್‌ಐವಿ ಚಾಂಪಿಯನ್‌ಶಿಪ್ ಟೆಹ್ರಿ 2026 ರ ಸಂದರ್ಭದಲ್ಲಿ ಪ್ಯಾರಾಗ್ಲೈಡರ್‌ಗಳು ನಿಯಂತ್ರಣ ಕಳೆದುಕೊಂಡಾಗ ಈ ಘಟನೆ ಸಂಭವಿಸಿದೆ.

ಡೆಹ್ರಾಡೂನ್, ಜನವರಿ 30: ಉತ್ತರಾಖಂಡದ ತೆಹ್ರಿ ಗರ್ವಾಲ್ ಜಿಲ್ಲೆಯಲ್ಲಿ ಇಬ್ಬರು ಪ್ಯಾರಾಗ್ಲೈಡರ್‌ಗಳು ಗಾಳಿಯಲ್ಲಿ ಡಿಕ್ಕಿ ಹೊಡೆದು ನದಿಗೆ ಬಿದ್ದಿರುವ ಘಟನೆ ನಡೆದಿದೆ. ಯಾವುದೇ ದೊಡ್ಡ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡವು ತಕ್ಷಣ ಸ್ಥಳಕ್ಕೆ ತಲುಪಿ ಪ್ಯಾರಾಗ್ಲೈಡಿಂಗ್ ಪೈಲಟ್‌ಗಳನ್ನು ರಕ್ಷಿಸಿದೆ. ಮೂರು ದಿನಗಳ ಆಕ್ರೋ ಫೆಸ್ಟಿವಲ್ ಮತ್ತು ಎಸ್‌ಐವಿ ಚಾಂಪಿಯನ್‌ಶಿಪ್ ಟೆಹ್ರಿ 2026 ರ ಸಂದರ್ಭದಲ್ಲಿ ಪ್ಯಾರಾಗ್ಲೈಡರ್‌ಗಳು ನಿಯಂತ್ರಣ ಕಳೆದುಕೊಂಡಾಗ ಈ ಘಟನೆ ಸಂಭವಿಸಿದೆ.

ಕಳೆದ ವರ್ಷ ಜನವರಿಯಲ್ಲಿ ಇದೇ ರೀತಿಯ ಘಟನೆ ನಡೆದಿತ್ತು, ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಇಳಿಯುವಾಗ ಪ್ಯಾರಾಚೂಟ್‌ಗಳು ಸಿಕ್ಕಿಹಾಕಿಕೊಂಡಿದ್ದರಿಂದ ಇಬ್ಬರು ನೌಕಾ ಪೈಲಟ್‌ಗಳು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದರು. ಪೂರ್ವ ನೌಕಾ ಕಮಾಂಡ್‌ನ ಕಾರ್ಯಾಚರಣೆ ಪ್ರದರ್ಶನ ಪೂರ್ವಾಭ್ಯಾಸದ ಸಮಯದಲ್ಲಿ ರಾಮ ಕೃಷ್ಣ ಬೀಚ್‌ನಲ್ಲಿ ಕಾರ್ಯಾಚರಣೆ ಪ್ರದರ್ಶನದ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಅಧಿಕಾರಿಗಳು ಸಮುದ್ರಕ್ಕೆ ಬಿದ್ದಿದ್ದರು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Jan 30, 2026 12:23 PM