AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನದಲ್ಲೊಂದು ಅಪರೂಪದ ಘಟನೆ: ಎರಡು ಕಾಡಾನೆಗಳ ಜಗಳ ಬಿಡಿಸಿದ ಶ್ವಾನ

ಹಾಸನದಲ್ಲೊಂದು ಅಪರೂಪದ ಘಟನೆ: ಎರಡು ಕಾಡಾನೆಗಳ ಜಗಳ ಬಿಡಿಸಿದ ಶ್ವಾನ

ಮಂಜುನಾಥ ಕೆಬಿ
| Edited By: |

Updated on: Oct 26, 2026 | 6:40 PM

Share

ಹಾಸನ ಜಿಲ್ಲೆಯ ಬೇಲೂರಿನ ಜಗಬೋರನಹಳ್ಳಿ ಗ್ರಾಮದ ಬಳಿ ಎರಡು ದೈತ್ಯ ಮದಗಜಗಳು ಕಾಳಗಕ್ಕಿಳಿದಿವೆ. ಕಾಡಾನೆಯನ್ನು ಶಾಂತಗೊಳಿಸಲು ಇಟಿಎಫ್‌ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಗುಂಪಿನಿಂದ ಹೊರ ಬಂದಿರುವ ಪ್ರಾಯದ ಮದಗಜಗಳು ಭಾರೀ ಕಾಳಗದಲ್ಲಿ ತೊಡಗಿವೆ. ಕಾಡಾನೆಗಳ ಕಾಳಗದಲ್ಲಿ ಶ್ವಾನವೊಂದು ಮಧ್ಯೆ ಪ್ರವೇಶಿಸಿದ್ದು, ಬೊಗಳುತ್ತ ಆನೆಗಳನ್ನು ಸುತ್ತುವರೆದಿದೆ. ಈ ವೇಳೆ ಕಾಡಾನೆಗಳು ಜಗಳ ನಿಲ್ಲಿಸಿ ನಾಯಿ ಮೇಲೆ ದಾಳಿ ಮಾಡಲು ಮುಂದಾಗಿವೆ. ಇನ್ನು ಮದದಲ್ಲಿರುವ ಕಾಡಾನೆಗಳಿಂದ ಸ್ಥಳೀಯರು ಆತಂಕಗೊಂಡಿದ್ದು, ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.

ಹಾಸನ, ಅಕ್ಟೋಬರ್ 26: ಜಿಲ್ಲೆಯ ಬೇಲೂರಿನ ಜಗಬೋರನಹಳ್ಳಿ ಗ್ರಾಮದ ಬಳಿ ಎರಡು ದೈತ್ಯ ಮದಗಜಗಳು ಕಾಳಗಕ್ಕಿಳಿದಿವೆ. ಕಾಡಾನೆಯನ್ನು ಶಾಂತಗೊಳಿಸಲು ಇಟಿಎಫ್‌ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಗುಂಪಿನಿಂದ ಹೊರ ಬಂದಿರುವ ಪ್ರಾಯದ ಮದಗಜಗಳು ಭಾರೀ ಕಾಳಗದಲ್ಲಿ ತೊಡಗಿವೆ. ಕಾಡಾನೆಗಳ ಕಾಳಗದಲ್ಲಿ ಶ್ವಾನವೊಂದು ಮಧ್ಯೆ ಪ್ರವೇಶಿಸಿದ್ದು, ಬೊಗಳುತ್ತ ಆನೆಗಳನ್ನು ಸುತ್ತುವರೆದಿದೆ. ಈ ವೇಳೆ ಕಾಡಾನೆಗಳು ಜಗಳ ನಿಲ್ಲಿಸಿ ನಾಯಿ ಮೇಲೆ ದಾಳಿ ಮಾಡಲು ಮುಂದಾಗಿವೆ. ಇನ್ನು ಮದದಲ್ಲಿರುವ ಕಾಡಾನೆಗಳಿಂದ ಸ್ಥಳೀಯರು ಆತಂಕಗೊಂಡಿದ್ದು, ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.

ಶ್ವಾನ ಎಂಟ್ರಿ ಕೊಟ್ಟ ಬಳಿಕವೇ ಎರಡು ಆನೆಗಳು ಗಲಾಟೆ ನಿಲ್ಲಿಸಿವೆ. ಹೀಗಾಗಿ ಒಂದು ರೀತಿ ಆನೆಗಳ ಜಗಳವನ್ನು ಶ್ವಾನ  ಬಿಡಿಸಿದಂತಿದೆ. ಒಂದು ವೇಳೆ ಶ್ವಾನ ಮಧ್ಯೆ ಪ್ರವೇಶಿಸದಿದ್ದರೆ ಎರಡೂ ಆನೆಗಳ ಕಾದಾಟ ಮುಂದುವರೆದು ಏನಾದ್ರೂ ಅನಾಹುತ ನಡೆಯುವ ಸಾಧ್ಯತೆಗಳಿದ್ದವು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಕೆಬಿ
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More