ಹಾವೇರಿ: ನಾಯಿಗಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ ಯುವಕರು

| Updated By: ವಿವೇಕ ಬಿರಾದಾರ

Updated on: Jul 14, 2024 | 11:56 AM

ಪ್ರಿಯತಮೆಗಾಗಿ ಯುವಕ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದನ್ನು ನೋಡಿದ್ದೇವೆ, ಕೇಳಿದ್ದೇವೆ. ಅಥವಾ ಕಳೆದುಹೋದ ಬೈಕ್​, ಇನ್ನಾವುದೋ ಕಾರಣಕ್ಕಾಗಿ ಯುವಕರು ಪೊಲೀಸ್​ ಠಾಣೆಗೆ ಅಲಿಯುತ್ತಿರುತ್ತಾರೆ. ಆದರೆ ಹಾವೇರಿ ನಗರದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಇಬ್ಬರು ಯುವಕರು ನಾಯಿಗಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

ಹಾವೇರಿ, ಜುಲೈ 14: ಕೆಲ ಜನರಿಗೆ ಪ್ರಾಣಿಗಳೆಂದರೆ ಬಹಳ ಪ್ರೀತಿ. ಅದರಲ್ಲಂತೂ ಸಾಕು ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಶ್ವಾನ, ಬೆಕ್ಕುಗಳನ್ನು ತಮ್ಮ ಮನೆಯ ಸದಸ್ಯರಂತೆ ನೋಡಿಕೊಳ್ಳುತ್ತಾರೆ. ಅವುಗಳಿಗೆ ಯಾವುದೇ ತೊಂದರೆಯಾಗದಂತೆ ಸಾಕುತ್ತಾರೆ. ಕೆಲವು ಮನೆಗಳಲ್ಲಿ ಶ್ವಾನ ಮತ್ತು ಬೆಕ್ಕುಗಳಿಗೆ ರಾಜಾತಿಥ್ಯವಿರುತ್ತದೆ. ಹಾವೇರಿ (Haveri) ನಗರದ ಇಬ್ಬರು ಯುವಕರು ಶ್ವಾನಕ್ಕಾಗಿ (Dog) ಪೊಲೀಸ್​ ಠಾಣೆ (Police Station) ಮೆಟ್ಟಿಲು ಹತ್ತಿದ್ದಾರೆ. ಹಾವೇರಿ ಪಟ್ಟಣದ ರಾಕೇಶ್ ಬಾರಂಗಿ ಎಂಬ ವ್ಯಕ್ತಿ ರಾಣಾ ಮತ್ತು ರಕ್ಷಿತಾ ಎಂಬ ಹೆಸರಿನ ನಾಯಿಗಳನ್ನು ಸಾಕಿದ್ದರು. ರಾಕೇಶ ಬಾರಂಗಿ ಸ್ವಲ್ಪ ದಿನದ ಮಟ್ಟಿಗೆ ಸಾಕಲು ಶ್ವಾನಗಳನ್ನು ಸಾಕಲು ಚಂದ್ರು ಎಂಬುವವರಗೆ ನೀಡಿದ್ದರು. ಎರಡು ಜರ್ಮನ್ ಶೆಪರ್ಡ್ ತಳಿಯ ಶ್ವಾನಗಳನ್ನು ಚಂದ್ರು ಒಂದುವರೆ ತಿಂಗಳು ಪೋಷಣೆ ಮಾಡಿದ್ದರು. ಬಳಿಕ ರಾಕೇಶ್​ ಬಾರಂಗಿ ಶ್ವಾನಗಳನ್ನು ಹಿಂತಿರುಗಿಸುವಂತೆ ಚಂದ್ರುಗೆ ಹೇಳಿದ್ದರು. ಆದರೆ ಚಂದ್ರು ಶ್ವಾನಗಳನ್ನು ಕೊಡಲು ಒಪ್ಪುವುದಿಲ್ಲ.

ಚಂದ್ರು ಶ್ವಾನಗಳನ್ನು ಕೊಡದೆ ಇದ್ದಾಗ ರಾಕೇಶ್ ಬಾರಂಗಿ ಪೊಲೀಸ್ ಠಾಣೆಯಲ್ಲಿ ಶ್ವಾನಗಳು ನಾಪತ್ತೆಯಾಗಿವೆ ಎಂದು ದೂರು ನೀಡಿದ್ದರು. ದೂರು ಸಂಬಂಧ ಇಬ್ಬರನ್ನು ಠಾಣೆಗೆ ಕರೆಸಿದ ಪೊಲೀಸರು ಪಂಚಾಯಿತಿ ಮಾಡಿದ್ದಾರೆ. ಸಾಕಿದ್ದ ವ್ಯಕ್ತಿ ಚಂದ್ರುಗೆ ರಾಕೇಶನಿಂದ ನಿರ್ವಹಣೆ ವೆಚ್ಚ ಕೊಡಿಸಿದ್ದಾರೆ. ಬಳಿಕ ರಾಕೇಶ್​​ಗೆ ಚಂದ್ರು ಶ್ವಾನ ಹಿಂತುರುಗಿಸಿದ್ದಾರೆ.

ಇದನ್ನೂ ಓದಿ: ಶಕ್ತಿ ಯೋಜನೆ ಎಫೆಕ್ಟ್: ಶೈಕ್ಷಣಿಕ ವರ್ಷ ಆರಂಭ ಬೆನ್ನಲ್ಲೇ ಬಸ್​ಗೆ ಬರ, ರಸ್ತೆಗಿಳಿದ ವಿದ್ಯಾರ್ಥಿಗಳು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:12 am, Sun, 14 July 24

Follow us on