ಶಕ್ತಿ ಯೋಜನೆ ಎಫೆಕ್ಟ್: ಶೈಕ್ಷಣಿಕ ವರ್ಷ ಆರಂಭ ಬೆನ್ನಲ್ಲೇ ಬಸ್​ಗೆ ಬರ, ರಸ್ತೆಗಿಳಿದ ವಿದ್ಯಾರ್ಥಿಗಳು

ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭದ ಬೆನ್ನಲ್ಲೇ ವಿದ್ಯಾರ್ಥಿಗಳು ರೋಡಿಗಿಳಿದು ಪ್ರತಿಭಟನೆ ಮಾಡಿದ್ದಾರೆ. ಬೆಳಗಾವಿ, ಗದಗನಲ್ಲಿ ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಸರಿಯಾದ ಸಮಯಕ್ಕೆ ಶಾಲಾ, ಕಾಲೇಜುಗಳಿಗೆ ತಲುಪಲಾಗುತ್ತಿಲ್ಲ. ಹೀಗಾಗಿ ಬಸ್ ಸಂಖ್ಯೆ ಹೆಚ್ಚಳ ಮಾಡುವಂತೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ ಮಾಡಿದೆ.

ಶಕ್ತಿ ಯೋಜನೆ ಎಫೆಕ್ಟ್: ಶೈಕ್ಷಣಿಕ ವರ್ಷ ಆರಂಭ ಬೆನ್ನಲ್ಲೇ ಬಸ್​ಗೆ ಬರ, ರಸ್ತೆಗಿಳಿದ ವಿದ್ಯಾರ್ಥಿಗಳು
ಶಕ್ತಿ ಯೋಜನೆ ಎಫೆಕ್ಟ್: ಶೈಕ್ಷಣಿಕ ವರ್ಷ ಆರಂಭ ಬೆನ್ನಲ್ಲೇ ಬಸ್​ಗೆ ಬರ, ರಸ್ತೆಗಳಿದ ವಿದ್ಯಾರ್ಥಿಗಳು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Jun 26, 2024 | 6:03 PM

ಬೆಳಗಾವಿ, ಜೂನ್ 26: 2024-25 ನೇ ಸಾಲಿನ ವಾರ್ಷಿಕ ಶೈಕ್ಷಣಿಕ ವರ್ಷ ಆರಂಭವಾಗಿದೆ. ಶಾಲಾ, ಕಾಲೇಜುಗಳು ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು (Students) ಶಾಲೆಗಳತ್ತ ಮುಖ ಮಾಡಿದ್ದಾರೆ. ಸಾಕಷ್ಟು ವಿದ್ಯಾರ್ಥಿಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶದಲ್ಲಿ ಶಾಲಾ, ಕಾಲೇಜುಗಳಿಗೆ ತೆರಳಲು ಸರ್ಕಾರಿ ಬಸ್​ಗಳನ್ನು ಅವಲಂಬಿಸಿದ್ದಾರೆ. ಆದರೆ ಸದ್ಯ ಇದೇ ಸಾರಿಗೆ ಬಸ್​ಗಳು ಶಕ್ತಿ ಯೋಜನೆಯಿಂದ (Shakti scheme) ತುಂಬಿ ತುಳುಕುತ್ತಿದ್ದು, ವಿದ್ಯಾರ್ಥಿಗಳಿಗೆ ಜಾಗವಿಲ್ಲದಂತಾಗಿದೆ. ಇನ್ನು ಸರಿಯಾದ ಸಮಯಕ್ಕೆ ಬಸ್​ಗಳು ಬಾರದ ಹಿನ್ನಲೆ ನಿಗದಿತ ಸಮಯಕ್ಕೆ ತಲುಪಲಾಗುತ್ತಿಲ್ಲ. ಹೀಗಾಗಿ ಬಸ್ ಸಂಖ್ಯೆ ಹೆಚ್ಚಳ ಮಾಡುವಂತೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ ಮಾಡಲಾಗಿದೆ.

ಶಕ್ತಿ ಯೋಜನೆಯಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ಶಕ್ತಿ ಯೋಜನೆ ಅನುಗುಣವಾಗಿ ಬಸ್ ಸಂಖ್ಯೆ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ಮಾಡಿ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಕೆಎಸ್​ಆರ್​ಟಿಸಿ ಶುಭ ಸುದ್ದಿ; ಬರಲಿವೆ ಹೆಚ್ಚುವರಿ ಬಸ್

ವಿದ್ಯಾರ್ಥಿಗಳ ಶೈಕ್ಷಣಿಕ ವೇಳಾಪಟ್ಟಿ ಅನುಗುಣವಾಗಿ ಬಸ್ ಪಾಸ್ ವಿತರಣೆ ಮಾಡಬೇಕು. ಸರಿಯಾದ ಸಮಯಕ್ಕೆ ತರಗತಿಗಳಿಗೆ ತೆರಳಲು ಆಗುತ್ತಿಲ್ಲ. ಶಾಲಾ ತರಗತಿಗಳು ಪ್ರಾರಂಭವಾದರೂ ಬಸ್ ಪಾಸ್ ವಿತರಣೆ ಮಾಡಿಲ್ಲ. ನೂರಾರು ರೂ. ಖರ್ಚು ಮಾಡಿ ಶಾಲಾ ಕಾಲೇಜುಗಳಿಗೆ ಬರುತ್ತಿದ್ದಾರೆ. ಹೀಗಾಗಿ ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ತೊಂದರೆ: ಬಸ್​ ಹೆಚ್ಚಳಕ್ಕೆ ಆಗ್ರಹ

ಅದೇ ರೀತಿಯಾಗಿ ಗದಗ ನಗರದ ಹಳೆಯ ಡಿಸಿ ಕಚೇರಿ ಬಳಿ ಮಾನವ ಸರಪಳಿ ನಿರ್ಮಿಸಿ ವಿದ್ಯಾರ್ಥಿಗಳಿಗೆ ಸಾರಿಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಬಾಲಾ ಬಾದಾಮಿ ರಸ್ತೆ ತಡೆದು ಎಬಿವಿಪಿ ವತಿಯಿಂದ ಬೃಹತ್ ಪ್ರತಿಭಟನೆ ಮಾಡಲಾಗಿದೆ. ಪ್ರತಿಭಟನೆಯಿಂದಾಗಿ ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು.

ಇದನ್ನೂ ಓದಿ: KSRTC Sudent Bus Pass: ವಿದ್ಯಾರ್ಥಿ ಬಸ್​ ಪಾಸ್​ ವಿತರಣೆ ಆರಂಭ; ದರ, ಅರ್ಜಿ ಸಲ್ಲಿಕೆ ವಿಧಾನ ಇಲ್ಲಿದೆ

ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಹೆಚ್ಚುವರಿ ಬಸ್ ಕಲ್ಪಿಸಿ ಮಕ್ಕಳಿಗೆ ಅನುಕೂಲವಾಗುವಂತೆ ಎನ್​ಡಬ್ಲ್ಯು ಕೆಎಸ್​ಆರ್​​ಟಿಸಿ ವಿಭಾಗ ನಿಯಂತ್ರಕರಿಗೆ ಮನವಿ ಸಲ್ಲಿಸಲಾಗಿದೆ.

ಶೈಕ್ಷಣಿಕ ವರ್ಷದ ಅನುಗುಣವಾಗಿ ಬಸ್ ಸೌಲಭ್ಯ ಕಲ್ಪಿಸಬೇಕು. ಸುಗಮ ಸಂಚಾರಕ್ಕೆ, ವಿದ್ಯಾರ್ಥಿಗಳ ಅನುಕೂಲಕ್ಕೆ ಬಸ್ ಸಂಖ್ಯೆ ಹೆಚ್ಚಳಕ್ಕೆ ಆಗ್ರಹಿಸಲಾಗಿದೆ. ಬಸ್ ಪಾಸ್ ನೀಡುವಲ್ಲಿ ವಿಳಂಬ ಮಾಡದೇ ಆದಷ್ಟು ಬೇಗ ವಿತರಿಸುವಂತೆ ಮನವಿ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:02 pm, Wed, 26 June 24

ತಾಜಾ ಸುದ್ದಿ
ಯುವಕರ ನೆಚ್ಚಿನ ಸ್ಟೈಲಿಶ್ ಕ್ಯಾಸಿಯೋ G Shock ಸ್ಮಾರ್ಟ್​ವಾಚ್ ಬಿಡುಗಡೆ
ಯುವಕರ ನೆಚ್ಚಿನ ಸ್ಟೈಲಿಶ್ ಕ್ಯಾಸಿಯೋ G Shock ಸ್ಮಾರ್ಟ್​ವಾಚ್ ಬಿಡುಗಡೆ
‘ಎಲ್ಲರಿಗೂ ನೋವಿದೆ’; ದರ್ಶನ್ ಪ್ರಕರಣದಲ್ಲಿ ಸುಮಲತಾ, ರಾಕ್​ಲೈನ್ ಮೌನ ಏಕೆ?
‘ಎಲ್ಲರಿಗೂ ನೋವಿದೆ’; ದರ್ಶನ್ ಪ್ರಕರಣದಲ್ಲಿ ಸುಮಲತಾ, ರಾಕ್​ಲೈನ್ ಮೌನ ಏಕೆ?
ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡಬಾರದು, ಈ ಬಗ್ಗೆ ಆಧ್ಯಾತ್ಮದಲ್ಲೇನಿದೆ?
ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡಬಾರದು, ಈ ಬಗ್ಗೆ ಆಧ್ಯಾತ್ಮದಲ್ಲೇನಿದೆ?
Horoscope:ಈ ರಾಶಿಯವರಿಗೆ ಪ್ರಸಿದ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ಸಿಗುವರು
Horoscope:ಈ ರಾಶಿಯವರಿಗೆ ಪ್ರಸಿದ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ಸಿಗುವರು
‘ನಾನು ದರ್ಶನ್ ಅವರ ಸಂಬಂಧಿ’: ಭೇಟಿ ಮಾಡಲು ಪರಪ್ಪನ ಅಗ್ರಹಾರಕ್ಕೆ ಬಂದ ಯುವತಿ
‘ನಾನು ದರ್ಶನ್ ಅವರ ಸಂಬಂಧಿ’: ಭೇಟಿ ಮಾಡಲು ಪರಪ್ಪನ ಅಗ್ರಹಾರಕ್ಕೆ ಬಂದ ಯುವತಿ
ದರ್ಶನ್​ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು
ದರ್ಶನ್​ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು
ಸಿಎಂ ವಿವಾದ ಸಿದ್ದರಾಮಯ್ಯ ಕಾರ್ಯವೈಖರಿ ಮೇಲೆ ಪ್ರಭಾವ ಬೀರಿದೆ: ಶೆಟ್ಟರ್
ಸಿಎಂ ವಿವಾದ ಸಿದ್ದರಾಮಯ್ಯ ಕಾರ್ಯವೈಖರಿ ಮೇಲೆ ಪ್ರಭಾವ ಬೀರಿದೆ: ಶೆಟ್ಟರ್
ಹೋರಿ ಬೆದರಿಸುವುದನ್ನು ನೋಡಲು ವಿದ್ಯುತ್​ ಟಿಸಿ ಏರಿ ಕೂತರು: ಜನರ ಹುಚ್ಚಾಟ
ಹೋರಿ ಬೆದರಿಸುವುದನ್ನು ನೋಡಲು ವಿದ್ಯುತ್​ ಟಿಸಿ ಏರಿ ಕೂತರು: ಜನರ ಹುಚ್ಚಾಟ
ಸೋತಲ್ಲೇ ಗೆಲುವ ಹುಡುಕುವ ಛಲ ಮಗನಲ್ಲಿ ಹುಟ್ಟಿದೆ: ಲಕ್ಷ್ಮಿ ಹೆಬ್ಬಾಳ್ಕರ್
ಸೋತಲ್ಲೇ ಗೆಲುವ ಹುಡುಕುವ ಛಲ ಮಗನಲ್ಲಿ ಹುಟ್ಟಿದೆ: ಲಕ್ಷ್ಮಿ ಹೆಬ್ಬಾಳ್ಕರ್
ಕಾಂಗ್ರೆಸ್ ನಾಯಕರು ಯಾರನ್ನೇ ಸಿಎಂ ಮಾಡಿದರೂ ನಂಗೆ ಸಂಬಂಧಿಸದ ವಿಷಯ: ರೇವಣ್ಣ
ಕಾಂಗ್ರೆಸ್ ನಾಯಕರು ಯಾರನ್ನೇ ಸಿಎಂ ಮಾಡಿದರೂ ನಂಗೆ ಸಂಬಂಧಿಸದ ವಿಷಯ: ರೇವಣ್ಣ