ಶಕ್ತಿ ಯೋಜನೆಯಿಂದ ನಷ್ಟ, ಬಸ್​ ಟಿಕೆಟ್​ ದರ ಏರಿಸುವ ಸುಳಿವು ನೀಡಿದ ಕಾಂಗ್ರೆಸ್ ಶಾಸಕ

ಶಕ್ತಿ ಯೋಜನೆಯಿಂದ ನಷ್ಟ, ಬಸ್​ ಟಿಕೆಟ್​ ದರ ಏರಿಸುವ ಸುಳಿವು ನೀಡಿದ ಕಾಂಗ್ರೆಸ್ ಶಾಸಕ

ವಿವೇಕ ಬಿರಾದಾರ
|

Updated on: Jul 14, 2024 | 10:34 AM

ರಾಜ್ಯ ಸರ್ಕಾರ ಇತ್ತೀಚಿಗೆ ಪೆಟ್ರೋಲ್​ ಮತ್ತು ಡಿಸೇಲ್​ ಬೆಲೆ ಏರಿಸಿತ್ತು. ಪೆಟ್ರೋಲ್​ ಬೆಲೆ 3 ರೂ. ಮತ್ತು ಡಿಸೇಲ್​ ಬೆಲೆ 3.50 ರೂಪಾಯಿ ಏರಿಕೆ ಮಾಡಿತ್ತು. ಇದು ರಾಜ್ಯದ ಜನರಿಗೆ ಆಘಾತ ಉಂಟು ಮಾಡಿತ್ತು. ಇದೀಗ ರಾಜ್ಯ ಸರ್ಕಾರ ಗಾಯದ ಮೇಲೆ ಬರೆ ಎಳೆಯಲು ಮುಂದಾಗಿದೆ.

ಬೆಳಗಾವಿ, ಜುಲೈ 14: ಕರ್ನಾಟಕ ಸರ್ಕಾರ (Karnataka Government) ಶಕ್ತಿ ಯೋಜನೆ (Shakti Scheme) ಜಾರಿಗೆ ತಂದು ಒಂದು ವರ್ಷ ಕಳೆಯಿತು. ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್​ಗಳಲ್ಲಿ ಸಂಚರಿಸುತ್ತಿದ್ದಾರೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆಗೆ ನಷ್ಟವಾಗಿದೆ. ಹೀಗಾಗಿ ಬಸ್​ ಬಸ್​ ಟಿಕೆಟ್ ದರವನ್ನು ಹೆಚ್ಚಿಸುವ ಚಿಂತನೆಯಲ್ಲಿದ್ದೇವೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ರಾಜು ಕಾಗೆ ಹೇಳಿದರು. ಕಾಗವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಕ್ತಿ ಯೋಜನೆಯಿಂದ ನಿಗಮ ನಷ್ಟದಲ್ಲಿದೆ. ಡೀಸೆಲ್​ ಹಾಗೂ ಬಸ್​​ನ ಬಿಡಿ ಭಾಗಗಳ ದರ ಕೂಡ ಹೆಚ್ಚಾಗಿದೆ. ಕಳೆದ 10 ವರ್ಷಗಳಿಂದ ಬಸ್​​ ಟಿಕೆಟ್ ದರ ಏರಿಕೆ ಮಾಡಿಲ್ಲ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಆಸ್ತಿ ಪರಭಾರೆ ಮಾಡುತ್ತೇವೆ. ಸಂಸ್ಥೆಗೆ ಸೇರಿದ ಹಳೇ ಕಟ್ಟಡಗಳನ್ನು ನವೀಕರಿಸಿ ಬಾಡಿಗೆ ಕೊಡುತ್ತೇವೆ ಎಂದರು.

ರಾಜ್ಯ ಸರ್ಕಾರ ಇತ್ತೀಚಿಗೆ ಪೆಟ್ರೋಲ್​ ಮತ್ತು ಡಿಸೇಲ್​ ಬೆಲೆ ಏರಿಸಿತ್ತು. ಪೆಟ್ರೋಲ್​ ಬೆಲೆ 3 ರೂ. ಮತ್ತು ಡಿಸೇಲ್​ ಬೆಲೆ 3.50 ರೂಪಾಯಿ ಏರಿಕೆ ಮಾಡಿತ್ತು. ಇದು ರಾಜ್ಯದ ಜನರಿಗೆ ಆಘಾತ ಉಂಟು ಮಾಡಿತ್ತು. ಇದೀಗ ರಾಜ್ಯ ಸರ್ಕಾರ ಗಾಯದ ಮೇಲೆ ಬರೆ ಎಳೆಯಲು ಮುಂದಾಗಿದೆ. ಹೌದು ಈಗಾಗಲೆ ಇಂಧನ, ಹಾಲಿನ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಬಸ್​ ಟಿಕೆಟ್​ ದರ ಏರಿಕೆ ಸಂಕಷ್ಟ ತಂದಿದೆ.

ಇದನ್ನೂ ಓದಿ: ಶಕ್ತಿ ಯೋಜನೆ ಎಫೆಕ್ಟ್: ಶೈಕ್ಷಣಿಕ ವರ್ಷ ಆರಂಭ ಬೆನ್ನಲ್ಲೇ ಬಸ್​ಗೆ ಬರ, ರಸ್ತೆಗಿಳಿದ ವಿದ್ಯಾರ್ಥಿಗಳು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ