AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ

ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ

ಪೃಥ್ವಿಶಂಕರ
|

Updated on: Jan 15, 2026 | 6:24 PM

Share

U19 World Cup 2026: ಇಂದಿನ ಅಂಡರ್-19 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ USA ತಂಡದ ಭಾರತೀಯ ಮೂಲದ ಆಲ್‌ರೌಂಡರ್ ರಿತ್ವಿಕ್ ಅಪಿಡಿ, ಭಾರತದ ವೈಭವ್ ಸೂರ್ಯವಂಶಿ ವಿಕೆಟ್ ಪಡೆದರು. ಕೇವಲ 17ರ ಹರೆಯದ ರಿತ್ವಿಕ್, ವಿರಾಟ್ ಕೊಹ್ಲಿ ಅಭಿಮಾನಿಯಾಗಿದ್ದು, ತೆಲಂಗಾಣದಲ್ಲಿ ಸಂಬಂಧಿಕರನ್ನು ಹೊಂದಿದ್ದಾರೆ. 10ನೇ ವಯಸ್ಸಿನಿಂದ ಕ್ರಿಕೆಟ್ ಆಡುತ್ತಾ, ಈಗ ಅಮೆರಿಕಾ U19 ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ಇಂದಿನಿಂದ ಆರಂಭವಾಗಿರುವ ಅಂಡರ್-19 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ ಒಂದಂಕಿಗೆ ವಿಕೆಟ್ ಒಪ್ಪಿಸಿದರು. ಯುಎಸ್ಎ ವಿರುದ್ಧ ಈ ಪಂದ್ಯದಲ್ಲಿ 4 ಎಸೆತಗಳನ್ನು ಎದುರಿಸಿದ ವೈಭವ್ ಸೂರ್ಯವಂಶಿ ಕೇವಲ 2 ರನ್ ಗಳಿಸಿ ಔಟಾದರು. ಸೂರ್ಯವಂಶಿ ಅವರ ವಿಕೆಟ್ ಅನ್ನು ಕೇವಲ 17 ವರ್ಷದ ಆಟಗಾರ ರಿತ್ವಿಕ್ ಅಪಿಡಿ ಪಡೆದರು. ರಿತ್ವಿಕ್ ಅಪಿಡಿ ಅವರ ಎಸೆತದಲ್ಲಿ ಸಿಕ್ಸರ್ ಹೊಡೆಯಲು ಪ್ರಯತ್ನಿಸಿ ಸೂರ್ಯವಂಶಿ ಬೌಲ್ಡ್ ಆದರು.

ಭಾರತೀಯ ಮೂಲಕ ರಿತ್ವಿಕ್, ಅಮೇರಿಕ ತಂಡದಲ್ಲಿ ಆಲ್‌ರೌಂಡರ್ ಆಟಗಾರನಾಗಿದ್ದಾರೆ. ರಿತ್ವಿಕ್ ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿಯಾಗಿದ್ದು, ಪಂದ್ಯ ಪ್ರಾರಂಭವಾಗುವ ಮೊದಲು ಅವರು ಇದನ್ನು ಹೇಳಿದ್ದರು. ರಿತ್ವಿಕ್ ಭಾರತೀಯ ಮೂಲದವರಾಗಿದ್ದು, ಅವರ ಸಂಬಂಧಿಕರು ತೆಲಂಗಾಣದಲ್ಲಿ ವಾಸಿಸುತ್ತಿದ್ದಾರೆ. 10 ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದ ರಿತ್ವಿಕ್, ಇದೀಗ 19 ವರ್ಷದೊಳಗಿನವರ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾರೆ.