‘ಯಾವುದೇ ಕಿತ್ತಾಟ ಇಲ್ಲ’; ‘ಮಾರ್ಟಿನ್’ ಸಿನಿಮಾ ವದಂತಿಗೆ ತೆರೆ ಎಳೆದ ನಿರ್ದೇಶಕ, ನಿರ್ಮಾಪಕ
‘ಮಾರ್ಟಿನ್’ ಸಿನಿಮಾ ಸೆಟ್ಟೇರಿ ಸಾಕಷ್ಟು ಸಮಯ ಕಳೆದಿದೆ. ಸದ್ಯ ಚಿತ್ರದ ಕೆಲಸಗಳು ನಡೆಯುತ್ತಿವೆ. ಈ ಮಧ್ಯೆ ತಂಡ ಫಿಲ್ಮ್ ಚೇಂಬರ್ಗೆ ದೂರು ನೀಡಿತ್ತು. ಈ ವಿಚಾರದಲ್ಲಿ ಸ್ಪಷ್ಟನೆ ನೀಡೋ ಕೆಲಸವನ್ನು ತಂಡ ಮಾಡಿದೆ. ಆ ರೀತಿ ಯಾವುದೇ ಸಮಸ್ಯೆ ಇಲ್ಲ ಎಂದು ತಂಡ ಸ್ಪಷ್ಟನೆ ನೀಡಿದೆ.
‘ಮಾರ್ಟಿನ್’ ಸಿನಿಮಾ (Martin Movie) ಸೆಟ್ಟೇರಿ ಸಾಕಷ್ಟು ಸಮಯ ಕಳೆದಿದೆ. ಸದ್ಯ ಚಿತ್ರದ ಕೆಲಸಗಳು ನಡೆಯುತ್ತಿವೆ. ಈ ಮಧ್ಯೆ ತಂಡ ಫಿಲ್ಮ್ ಚೇಂಬರ್ಗೆ ದೂರು ನೀಡಿತ್ತು. ಈ ವಿಚಾರದಲ್ಲಿ ಸ್ಪಷ್ಟನೆ ನೀಡೋ ಕೆಲಸವನ್ನು ತಂಡ ಮಾಡಿದೆ. ನಿರ್ದೇಶಕ ಎಪಿ ಅರ್ಜುನ್ ಹಾಗೂ ನಿರ್ಮಾಪಕ ಉದಯ್ ಮೆಹ್ತಾ ಒಟ್ಟಿಗೆ ಬಂದು ವಿಡಿಯೋ ಮಾಡಿದ್ದಾರೆ. ‘ನಮ್ಮ ಮಧ್ಯೆ ಯಾವುದೇ ಕಿತ್ತಾಟ ಇಲ್ಲ. ಇದು ವದಂತಿ ಅಷ್ಟೇ’ ಎಂದಿದ್ದಾರೆ ಎಪಿ ಅರ್ಜುನ್. ಉದಯ್ ಮೆಹ್ತಾ ಮಾತನಾಡಿ, ‘ತಪ್ಪು ಮಾಹಿತಿ ಸ್ಪ್ರೆಡ್ ಮಾಡಬೇಡಿ. ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದೇವೆ. ಡಬ್ಬಿಂಗ್ ಮುಗಿದಿದೆ’ ಎಂದು ಹೇಳಿಕೆ ನೀಡಿದ್ದಾರೆ. ಟಿವಿ9 ಕನ್ನಡದ ಜೊತೆ ಮಾತನಾಡಿದ್ದ ಅರ್ಜುನ್, ‘ಸಿಜಿ ಕೆಲಸದ ವಿಚಾರಕ್ಕೆ ಸಂಬಂಧಿಸಿ ನಾವು ಫಿಲ್ಮ್ ಚೇಂಬರ್ಗೆ ದೂರು ನೀಡಿದ್ದೆವು ಅಷ್ಟೇ. ಅಲ್ಲಿ ಸಮಸ್ಯೆ ಆಗಿದ್ದರಿಂದ ನಾವು ದೂರು ಕೊಡಬೇಕಾಯಿತು’ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos