ಉಡುಪಿ: ಭಜನೆ ಹಾಡಿಗೆ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ಗೋವು; ಇಲ್ಲಿದೆ ವಿಡಿಯೋ
ಕಾರ್ಕಳ ದುರ್ಗಾದ ದುರ್ಗಾಪರಮೇಶ್ವರಿ ಭಜನಮಂಡಳಿಯ ಸದಸ್ಯರು ವೇದಿಕೆ ಮೇಲೆ ಒಂದು ಗಂಟೆಗಳ ಕಾಲ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಈ ಗೋವು ಭಜನೆಗೆ ತಲೆದೂಗಿ ಹೆಜ್ಜೆ ಹಾಕಿ ಎಲ್ಲರ ಗಮನಸೆಳೆದಿದೆ.
ಉಡುಪಿ, ಡಿ.1: ಭಜನೆ ಹಾಡಿಗೆ ತಾಳಕ್ಕೆ ತಕ್ಕಂತೆ ಗೋವೊಂದು(Cow) ಹೆಜ್ಜೆ ಹಾಕಿದ ಅಪರೂಪದ ಘಟನೆ ಕಾರ್ಕಳ (Karkala)ದ ಮೀಯಾರಿನಲ್ಲಿ ನಡೆದಿದೆ. ಸಂಕಷ್ಟಿ ಪ್ರಯುಕ್ತ ಕಾರ್ಕಳ ಮಿಯಾರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮ ನಡೆಯುತ್ತಿತ್ತು. ಇದೇ ವೇಳೆ ಪಕ್ಕದಲ್ಲಿ ಕಟ್ಟಿದ್ದ ಗೋವೊಂದು ಒಂದು ಗಂಟೆಗೂ ಅಧಿಕ ಕಾಲ ಭಜನೆ ಹಾಡಿಗೆ ಹೆಜ್ಜೆ ಹಾಕಿದೆ. ಕಾರ್ಕಳ ದುರ್ಗಾದ ದುರ್ಗಾಪರಮೇಶ್ವರಿ ಭಜನಮಂಡಳಿಯ ಸದಸ್ಯರು ವೇದಿಕೆ ಮೇಲೆ ಒಂದು ಗಂಟೆಗಳ ಕಾಲ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. ಈ ಗೋವು ಭಜನೆಗೆ ತಲೆದೂಗಿ ಹೆಜ್ಜೆ ಹಾಕಿ ಎಲ್ಲರ ಗಮನಸೆಳೆದಿದೆ. ಸಂಗೀತಕ್ಕೆ ಪ್ರಾಣಿಗಳು ಕೂಡ ಸ್ಪಂದಿಸುತ್ತವೆ ಎನ್ನುವ ಮಾತು ಈ ಘಟನೆಯಿಂದ ಮತ್ತೊಮ್ಮೆ ಸಾಭೀತಾಗಿದೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ