Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ ಕಾಂಗ್ರೆಸ್​ ಕಾರ್ಯಕರ್ತೆಯರ ಡ್ಯಾನ್ಸ್​​ ವಿಡಿಯೋ ದುರ್ಬಳಕೆ

ಸರ್ಕಾರದ ಶಕ್ತಿ ಯೋಜನೆ ಆರಂಭವಾದ ದಿನ ಫ್ರೀ ಫ್ರೀ ಅಂತ ಡ್ಯಾನ್ಸ್ ಮಾಡಿದ್ದ ಕಾಂಗ್ರೆಸ್ ಕಾರ್ಯಕರ್ತೆಯರ ವಿಡಿಯೋವನ್ನು ದುಷ್ಕರ್ಮಿಗಳು ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.

ಬೆಳಗಾವಿ ಕಾಂಗ್ರೆಸ್​ ಕಾರ್ಯಕರ್ತೆಯರ ಡ್ಯಾನ್ಸ್​​ ವಿಡಿಯೋ ದುರ್ಬಳಕೆ
ಉಪೇಂದ್ರ ಚಿತ್ರದ ಸೀನ್​ (ಎಡಚಿತ್ರ) ಕಾಂಗ್ರೆಸ್​ ಕಾರ್ಯಕರ್ತೆಯರು (ಬಲಚಿತ್ರ)
Follow us
Sahadev Mane
| Updated By: ವಿವೇಕ ಬಿರಾದಾರ

Updated on:Nov 13, 2023 | 11:16 AM

ಬೆಳಗಾವಿ ನ.13: ಸರ್ಕಾರದ ಶಕ್ತಿ ಯೋಜನೆ (Shakti Yojana) ಆರಂಭವಾದ ದಿನ ಫ್ರೀ ಫ್ರೀ ಅಂತ ಡ್ಯಾನ್ಸ್ ಮಾಡಿದ್ದ ಕಾಂಗ್ರೆಸ್ (Congress)​​ ಕಾರ್ಯಕರ್ತೆಯರ ವಿಡಿಯೋವನ್ನು ದುಷ್ಕರ್ಮಿಗಳು ದುರ್ಬಳಕೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಶಕ್ತಿ ಯೋಜನೆ ಜಾರಿಯಾದ ದಿನ ಬೆಳಗಾವಿಯ ಕಾಂಗ್ರೆಸ್​ ಕಾರ್ಯಕರ್ತೆ ಆಯಿಶಾ ಸನದಿ ಸೇರಿ ಹಲವರು ಫ್ರೀ ಫ್ರೀ ಅಂತ ಬಸ್​​ನಲ್ಲಿ ಡ್ಯಾನ್ಸ್ ಮಾಡಿದ್ದರು. ಕಾರ್ಯಕರ್ತೆಯರು ಡ್ಯಾನ್ಸ್​ ಮಾಡಿದ್ದ ವಿಡಿಯೋ ಸಾಕಷ್ಟು ವೈರಲ್​ ಆಗಿತ್ತು. ಕಾರ್ಯಕರ್ತೆಯರ ಈ ವಿಡಿಯೋಗೆ ದುಷ್ಕರ್ಮಿಗಳು “ಉಪೇಂದ್ರ ಚಿತ್ರದ ಎಷ್ಟು ರೇಟ್” ಎಂಬುವ ಸೀನ್​ ಅನ್ನು ಅಳವಡಿಸಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ವಿಡಿಯೋ ವೈರಲ್​ ಆಗುತ್ತಿದ್ದಂತೆ ಆಯಿಶಾ ಸನದಿ ಅವರು ಬೆಳಗಾವಿ ನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಮಾಹಿತಿ ತಂತ್ರಜ್ಞಾನ 67(a) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಪ್ರಕರಣ ದಾಖಲಾಗಿ ಐದು ತಿಂಗಳು ಕಳೆದರೂ ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:56 am, Mon, 13 November 23