ಉಡುಪಿ ಅಂಬಲಪಾಡಿಯಲ್ಲಿನ ಮಹಾಕಾಳಿ, ಚಿಕ್ಕಬಳ್ಳಾಪುರದ ದೇವಸ್ಥಾನದಲ್ಲಿ ಬಂದು ಪ್ರತಿಷ್ಠಾಪನೆಗೊಂಡ ಹಿಂದೆ ದೊಡ್ಡ ಕತೆಯಿದೆ!

ಉಡುಪಿ ಅಂಬಲಪಾಡಿಯಲ್ಲಿನ ಮಹಾಕಾಳಿ, ಚಿಕ್ಕಬಳ್ಳಾಪುರದ ದೇವಸ್ಥಾನದಲ್ಲಿ ಬಂದು ಪ್ರತಿಷ್ಠಾಪನೆಗೊಂಡ ಹಿಂದೆ ದೊಡ್ಡ ಕತೆಯಿದೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 22, 2021 | 4:10 PM

ಪ್ರತಿ ಶುಕ್ರವಾರ ಮತ್ತು ಶುಕ್ರವಾರ ಚಿಕ್ಕಬಳ್ಳಾಪುರದ ಅಂಬಲಪಾಡಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ಮತ್ತು ಹುಣ್ಣಿಮೆ ಹಾಗೂ ಅಮವಾಸ್ಯೆಗಳಂದು ಹೋಮ, ಹವನಗಳು ನಡೆಯುತ್ತವೆ.

ಉಡುಪಿಯ ಅಂಬಲಪಾಡಿ ಮಹಾಕಾಳಿ ದೇವಸ್ಥಾನ ನಮ್ಮ ನಾಡಿನ ಪ್ರಮುಖ ಮತ್ತು ಪ್ರಸಿದ್ಧ ದೇಗುಲಗಳಲ್ಲಿ ಒಂದಾಗಿದೆ. ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡಿ ಕಾಳಿಯ ದರ್ಶನ ಪಡೆದು ಪುನೀತರಾಗುತ್ತಾರೆ. ಅದು ಸರಿ, ಉಡುಪಿಯ ಅಂಬಲಪಾಡಿ ಮಹಾಕಾಳಿ ದೇನಸ್ಥಾನಕ್ಕೂ ಚಿಕ್ಕಬಳ್ಳಾಪುರಕ್ಕೂ ಎತ್ತಣ ಸಂಬಂಧ ಮಾರಾಯ್ರೇ ಅನ್ನೋದು ನಿಮ್ಮ ಗೊಂದಲವಾಗಿರಬಹುದು. ಅದರ ಹಿಂದೆ ಒಂದು ಕತೆಯಿದೆ. ರಮೇಶ ಬಾಬು ಹೆಸರಿನ ಚಿಕ್ಕಬಳ್ಳಾಪುರದ ವ್ಯಕ್ತಿ, ಅಂಬಲಪಾಡಿ ಮಾಹಾಕಾಳಿಯ ಪರಮ ಭಕ್ತರು. ಹಾಗೆ ನೋಡಿದರೆ, ರಮೇಶ ಬಾಬು ಚಿಕ್ಕಬಳ್ಳಾಪುರದಲ್ಲಿ ಮಹಾಕಾಳಿ ದೇವಸ್ಥಾನದ ನಿರ್ಮಾಣ ಕಾರ್ಯ ಆರಂಭಿಸಿದ್ದು 90 ರ ದಶಕದಲ್ಲಿ. ಕಡುಬಡತನದಲ್ಲಿ ಹುಟ್ಟಿದ ರಮೇಶ್ ಬಾಬು ಅವರಿಗೆ, ಗುಡಿಯ ನಿರ್ಮಾಣ ಕಾರ್ಯ ಆರಂಭಿಸಿದ ನಂತರ ದೆಶೆ ಬದಲಾಯಿತಂತೆ.

ಮುಂದಿನ ದಿನಗಳಲ್ಲಿ ಅವರು ಒಂದು ಟ್ರಾವೆಲ್ಸ್ ಕಂಪನಿ ಆರಂಭಿಸಿ, ಹಣ ಗಳಿಸ ತೊಡಗಿದರು. ಅವರ ಆರ್ಥಿಕ ಸ್ಥಿತಿಯಲ್ಲಿ ಅಮೂಲಾಗ್ರ ಬದಲಾವಣೆಯಾಯಿತು. ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ, 11 ವರ್ಷಗಳ ಹಿಂದೆ ಅವರು ಉಡುಪಿ ಅಂಬಲಪಾಡಿಯಿಂದ ಮಹಾಕಾಳಿಯ ಮೂರ್ತಿ ತಂದು ತಾವು ನಿರ್ಮಿಸಿದ ದೇವಾಸ್ಥಾನದಲ್ಲಿ ಪ್ರತಿಷ್ಠಾಪಿಸಿದರು.

ರಮೇಶ್ ಬಾಬು ಈಗೊಬ್ಬ ಸಮಾಜ ಸೇವಕರಾಗಿಯೂ ಗುರುತಿಸಿಕೊಂಡಿದ್ದು, ತಾವು ಗಳಿಸಿದ ಹಣದ ಒಂದಷ್ಟು ಪಾಲನ್ನು ಜನ ಸೇವೆಗಾಗಿ ಉಪಯೋಗಿಸುತ್ತಾರಂತೆ.

ಪ್ರತಿ ಶುಕ್ರವಾರ ಮತ್ತು ಶುಕ್ರವಾರ ಚಿಕ್ಕಬಳ್ಳಾಪುರದ ಅಂಬಲಪಾಡಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ಮತ್ತು ಹುಣ್ಣಿಮೆ ಹಾಗೂ ಅಮವಾಸ್ಯೆಗಳಂದು ಹೋಮ, ಹವನಗಳು ನಡೆಯುತ್ತವೆ.

ನವರಾತ್ರಿಯ ಸಂದರ್ಭದಲ್ಲಿಯೂ ವಿಶೇಷ ಪೂಜೆಗಳು ಇಲ್ಲಿ ನಡೆಯುವುದರ ಜೊತೆಗೆ ಜಾತ್ರಾ ಮಹೋತ್ಸವವನ್ನೂ ಆಯೋಜಿಸಲಾಗುತ್ತದೆ. ಆಷಾಢ ಮಾಸದಲ್ಲಿ ವಿವಿಧ ದೇವ-ದೇವತೆಯರ ಕಲ್ಯಾಣೋತ್ಸವನ್ನು ಸಹ ದೇವಸ್ಥಾನದಲ್ಲಿ ಆಯೋಜಿಸಲಾಗುತ್ತದೆ.

ಇದನ್ನೂ ಓದಿ:  Viral Video: ವಧುವಿಗೆ ರೊಟ್ಟಿ ತಯಾರಿಸಲು ಸಹಾಯ ಮಾಡಿದ ವರ! ಅತಿಥಿಗಳೆಲ್ಲಾ ತಮಾಷೆ ಮಾಡಿ ನಕ್ಕ ವಿಡಿಯೋವಿದು