Leopard Rescue: ಬಾವಿಗೆ ಬಿದ್ದ ಚಿರತೆ ರಕ್ಷಣೆಗೆ ಅರಣ್ಯ ಸಿಬ್ಬಂದಿ ಮಾಡಿದ್ದೇನು ಗೊತ್ತಾ? ಕಾರ್ಯಾಚರಣೆ ವಿಡಿಯೋ ವೈರಲ್

Edited By:

Updated on: Jun 10, 2023 | 2:41 PM

ಬಾವಿಯಲ್ಲಿದ್ದ ಚಿರತೆ ಕಂಡ ಜನ ಗಾಬರಿಯಾಗಿದ್ದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕಾಗಮಿಸಿ ಚಿರತೆ ‌ರಕ್ಷಿಸಲು ಅರಣ್ಯ ಇಲಾಖೆ ಸಿಬ್ಬಂದಿ ಮುಂದಾದ್ರು.

ಉಡುಪಿ: ಆಹಾರಕ್ಕಾಗಿ ಗ್ರಾಮಕ್ಕೆ ಎಂಟ್ರಿ ಕೊಟ್ಟಿದ್ದ ಚಿರತೆ ಬಾವಿಗೆ ಬಿದ್ದಿದ್ದು ಅದನ್ನು ರಕ್ಷಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೆಂಜೂರು ಗ್ರಾಮದ ಮನೆಯೊಂದರ ಬಾವಿಗೆ ಚಿರತೆ ಬಿದ್ದಿದೆ. ಬಾವಿಯಲ್ಲಿದ್ದ ಚಿರತೆ ಕಂಡ ಜನ ಗಾಬರಿಯಾಗಿದ್ದು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕಾಗಮಿಸಿ ಚಿರತೆ ‌ರಕ್ಷಿಸಲು ಅರಣ್ಯ ಇಲಾಖೆ ಸಿಬ್ಬಂದಿ ಮುಂದಾದ್ರು.

ದೊಡ್ಡ ಏಣಿ ಇಟ್ಟು ಚಿರತೆಯನ್ನ ಹೊರತರಲು ಪ್ರಯತ್ನಿಸಿದರೂ ಚಿರತೆ ಭಯದಿಂದ ಮೇಲೆ ಬಾರಲಿಲ್ಲ. ಬಾವಿಯ ಆಚೆ ಅನೇಕ ಮಂದಿ ಇದ್ದ ಕಾರಣ ಚಿರತೆಗೆ ಭಯಕಾಡಿದೆ. ಕೊನೆಗೆ ದೊಡ್ಡ ಕೊಲೊಂದಕ್ಕೆ ಬಟ್ಟೆ ಸುತ್ತಿ ಬೆಂಕಿ ಹಚ್ಚಿ ಅದನ್ನು ಬಾವಿಗೆ ಇಳಿಸಲಾಗಿದ್ದು ಬೆಂಕಿಯನ್ನು ಕಂಡು ಭಯದಿಂದ ಏಣಿ ಏರಿ ಬಾವಿಯಿಂದ ಮೇಲಕ್ಕೆ ಬಂದು ಚಿರತೆ ಓಡಿ ತಪ್ಪಿಸಿಕೊಂಡಿದೆ. ಚಿರತೆಯ ರಕ್ಷಣಾ ಕಾರ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Published on: Jun 10, 2023 01:31 PM