ಹೇಗೆ ನಡೆಯುತ್ತೆ ಗೊತ್ತಾ ಆಳ ಸಮುದ್ರದಲ್ಲಿ ಅಪಾಯಕಾರಿ ಲೈಟ್ ಫಿಶಿಂಗ್? ವಿಡಿಯೋ ನೋಡಿ
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆ ಸಮುದ್ರದಲ್ಲಿ ಲೈಟ್ ಫಿಶಿಂಗ್ ನಡೆಯುತ್ತದೆ. 1000 ವ್ಯಾಟ್‌ನ ಲೈಟ್ ಬಳಸಿ ಆಳಸಮುದ್ರದಲ್ಲಿ ಮೀನುಗಾರಿಕೆ ನಡೆಸುವುದರಿಂದ ಸಮುದ್ರ ಜೀವಗಳಿಗೆ ಉಂಟಾಗುವ ಹಾನಿಯಾಗುತ್ತದೆ. ಈ ಅಪಾಯಕಾರಿ ಪದ್ಧತಿಯಿಂದಾಗಿ ಸಮುದ್ರ ಜೀವಿಗಳ ಸಾವು ಮತ್ತು ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ಚರ್ಚಿಸಲಾಗುವುದು.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆ ಸಮುದ್ರದಲ್ಲಿ ಲೈಟ್ ಫಿಶಿಂಗ್ ಮಾಡಲಾಗಿದೆ. ತಡರಾತ್ರಿ ಮರವಂತೆಯಿಂದ ಕಾರವಾರದವರೆಗೆ ಲೈಟ್ ಫಿಶಿಂಗ್ ನಡೆಯುತ್ತೆ. 1000 ವ್ಯಾಟ್‌ನ ಕೊರಿಯನ್ ಲೈಟ್ ಬಳಸಿ ಮೀನುಗಾರಿ ಮಾಡಲಾಗುತ್ತದೆ. ಮೀನುಗಾರರು ಆಳಸಮುದ್ರಕ್ಕೆ ಲೈಟ್ ಇಳಿಬಿಟ್ಟು ಮೀನುಗಾರಿಕೆ ಮಾಡುತ್ತಾರೆ. ಲೈಟ್‌ನ ಒತ್ತಡಕ್ಕೆ ಜಲರಾಶಿಗಳು ಸಾವಿಗೀಡಾಗುತ್ತವೆ. ಹೀಗೆ ಸತ್ತ ಮೇಲೆ ಬರುವ ಮೀನುಗಳಿಗೆ ಬಲೆ ಹಾಕಲಾಗುತ್ತದೆ. ಸುಮಾರು 3 ಗಂಟೆ ಕಾಲ ಆಳಸಮುದ್ರಲ್ಲಿ ಇಂತಹ ಮೀನುಗಾರಿಕೆ ನಡೆಯುತ್ತದೆ.