ಅಯೋಧ್ಯೆ ಶ್ರೀರಾಮ ಮಂದಿರ ಸೋರಿಕೆ ಬಗ್ಗೆ ಕಾರಣ ನೀಡಿದ ಪೇಜಾವರಶ್ರೀ

| Updated By: ರಮೇಶ್ ಬಿ. ಜವಳಗೇರಾ

Updated on: Jul 04, 2024 | 6:42 PM

ಅಯೋಧ್ಯೆಯ ಶ್ರೀರಾ ಮಂದಿರ ಸೋರುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಮೊದಲ ಮಳೆಗೆ ಶ್ರೀರಾಮ ಮಂದಿರದ ಮೇಲ್ಚಾವಣಿ ಸೋರಿಕೆಯಾಗಿದೆ ಎನ್ನುವ ಬಗ್ಗೆ ಭಾರೀ ಚರ್ಚೆಯಾಗಿದೆ. ಇನ್ನು ಈ ಬಗ್ಗೆ ಸ್ವತಃ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸ್ಪಷ್ಟನೆ ನೀಡಿದ್ದು, ರಾಮಮಂದಿರ ಸೋರಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ವಿಜಯಪುರ, (ಜುಲೈ 04: ಇತ್ತೀಚೆಗೆ ಸುರಿದ ಭಾರೀ ಮಳೆಗೆ ಉತ್ತರ ಪ್ರದೇಶದ ಅಯೋಧ್ಯೆಯ ರಾಮ್​ಪಥ್​ ಬಳಿಕ ಹಲವಾರು ಸ್ಥಳಗಳಲ್ಲಿ ರಸ್ತೆಗಳು ಜಲಾವೃತ್ತಗೊಂಡಿದ್ದವು. ಅಲ್ಲದೇ ಶ್ರೀರಾಮ ಮಂದಿರದ ಮೇಲ್ಚಾವಣಿ ಸಹ ಸೋರಿದೆ ಎಂದು ವರದಿಯಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಯಾಗಿದೆ. ತರಾತುರಿಯಲ್ಲಿ ಕಾಮಗಾರಿ ಮಾಡಿದ್ದರಿಂದ ಒಂದೇ ಮಳೆಗೆ ಶ್ರೀರಾಮ ಮಂದಿರ ಸೋರಿತ್ತಿದೆ ಎನ್ನುವ ಆರೋಪಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ ಮಂದಿರ ಆಡಳಿತ ಮಂಡಳಿ ಈ ಬಗ್ಗೆ ಸ್ಪಷ್ಟನೆ ನೀಡಿತ್ತು. ಇದೀಗ ಈ ಬಗ್ಗೆ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ವಿಜಯಪುರದಲ್ಲಿಂದು ಮಾಧ್ಯಮಗಳಿಗೆ  ಪ್ರತಿಕ್ರಿಯಿಸಿದ್ದು, ಮಳೆ ಬಂದಾದ ರಾಮ ಮಂದಿರ ಮೇಲ್ಚಾವಣಿ ಸೋರಿದೆ. ಮಂದಿರ ನಿರ್ಮಾಣ ಕಾಮಗಾರಿ ಇನ್ನೂ ಮುಕ್ತಾಯವಾಗಿಲ್ಲ.ಇನ್ನೂ ಒಂದು ವರ್ಷದಲ್ಲಿ ಮಂದಿರ ಪೂರ್ಣಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ರಾಮಮಂದಿರ ಮೇಲ್ಚಾವಣಿ ಸೋರಿಕೆ ಬಗ್ಗೆ ಸ್ಪಷ್ಟನೆ ನೀಡಿದರು.

Follow us on