ಶರವೇಗದ ನದಿಯಲ್ಲಿ ದೋಣಿ ನಡೆಸುವ ಧೀರ ಮಹಿಳೆ: ಹೊರ ಜಗತ್ತಿನ ಸಂಪರ್ಕಕ್ಕೆ ಇವರೇ ನಾವಿಕೆ

Updated By: ಗಂಗಾಧರ​ ಬ. ಸಾಬೋಜಿ

Updated on: Jun 18, 2025 | 12:41 PM

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮರವಂತೆಯಲ್ಲಿ, ಸೌಪರ್ಣಿಕಾ ನದಿಗೆ ಸೇತುವೆ ನಿರ್ಮಾಣಕ್ಕಾಗಿ ದಶಕಗಳಿಂದ ಹೋರಾಟ ನಡೆಯುತ್ತಿದೆ. ಸರ್ಕಾರ ನಿರ್ಲಕ್ಷ್ಯ ತೋರಿದ್ದರಿಂದ, ಓರ್ವ ಮಹಿಳೆ ದೋಣಿಯಲ್ಲಿ ಜನರನ್ನು ಮತ್ತು ವಿದ್ಯಾರ್ಥಿಗಳನ್ನು ದಾಟಿಸುವ ಕೆಲಸ ಮಾಡುತ್ತಿದ್ದಾರೆ. ಸೇತುವೆಗಾಗಿ ದಶಕಗಳ ಹೋರಾಟಕ್ಕೆ ಜನಪ್ರತಿನಿಧಿಗಳು ಕಣ್ಣಿದ್ದೂ ಕುರುಡರಾಗಿದ್ದಾರೆ.

ಉಡುಪಿ, ಜೂನ್​ 18: ಜಿಲ್ಲೆಯ ಕುಂದಾಪುರ ತಾಲೂಕಿನ ಮರವಂತೆ (Maravanthe) ಒಂದು ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಹೊರ ಜಗತ್ತಿನ ಸಂಪರ್ಕಕ್ಕೆ ಈ ಮಹಿಳೆಯೇ ನಾವಿಕೆ ಆಗಿದ್ದಾರೆ. ಸೌಪರ್ಣಿಕಾ ನದಿ ಸೇತುವೆಗಾಗಿ ಊರವರಿಂದ ದಶಕಗಳಿಂದ ಹೋರಾಟ ನಡೆಯುತ್ತಿದೆ. ಈ ಸಂಧರ್ಭದಲ್ಲಿ ನದಿ ದಾಟಲು ಓರ್ವ ಮಹಿಳೆ ದೋಣಿ ಮುನ್ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಲು, ಊರವರ ಹೊರಜಗತ್ತಿನ ಸಂಪರ್ಕಕ್ಕೆ ನೆರವಾಗುತ್ತಿದ್ದಾರೆ. ಊರಿನ ಪುರುಷರು ಬೆಳಿಗ್ಗೆ ಕೆಲಸಕ್ಕೆ ಹೋಗುವುದರಿಂದ ಈ ಮಳೆಯೇ ಶರವೇಗದ ನದಿಯಲ್ಲಿ ದೋಣಿ ನಡೆಸುವ ಮೂಲಕ ನೆರವಾಗಿದ್ದಾರೆ. ಸೇತುವೆಗಾಗಿ ದಶಕಗಳ ಹೋರಾಟ ನಡೆದಿದ್ದರೂ ಕೂಡ ಜನಪ್ರತಿನಿಧಿಗಳು ಕಣ್ಣಿದ್ದು ಕುರುಡರಾಗಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ನೋಡಿ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.