AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಮ್ಮಿಂದ ಆದ ಅಗೌರವ ಏನು ಎಂಬುದನ್ನು ರಚಿತಾ ರಾಮ್ ಸ್ಪಷ್ಟಪಡಿಸಬೇಕು’; ನಾಗಶೇಖರ್ ಖಡಕ್ ಮಾತು

‘ನಮ್ಮಿಂದ ಆದ ಅಗೌರವ ಏನು ಎಂಬುದನ್ನು ರಚಿತಾ ರಾಮ್ ಸ್ಪಷ್ಟಪಡಿಸಬೇಕು’; ನಾಗಶೇಖರ್ ಖಡಕ್ ಮಾತು

ರಾಜೇಶ್ ದುಗ್ಗುಮನೆ
|

Updated on:Jun 18, 2025 | 2:23 PM

Share

ರಚಿತಾ ರಾಮ್ ಅವರು ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ಪ್ರಚಾರಕ್ಕೆ ಬರದೇ ಇರೋದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ದೇಶಕ ನಾಗಶೇಖರ್ ಅವರು ಅಸಮಧಾನ ಹೊರಹಾಕಿದ್ದು, ದೂರು ನೀಡಿದ್ದರೆ. ಈಗ ಅವರು ಘಟನೆ ಬಗ್ಗೆ ಮಾತನಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.  

‘ಸಂಜು ವೆಡ್ಸ್ ಗೀತಾ 2’ (Sanju Weds Geetha) ಸಿನಿಮಾಗೆ ಶ್ರೀನಗರ ಕಿಟ್ಟಿ ಹೀರೋ ಹಾಗೂ ರಚಿತಾ ರಾಮ್ ನಾಯಕಿ. ಆದರೆ, ಸಿನಿಮಾ ಪ್ರಚಾರಕ್ಕೆ ರಚಿತಾ ಬಂದಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರದ ನಿರ್ದೇಶಕ ನಾಗಶೇಖರ್ ಫಿಲ್ಮ್​ ಚೇಂಬರ್​ಗೆ ದೂರು ನೀಡಿದ್ದಾರೆ. ಆ ಬಳಿಕ ಮಾತನಾಡಿರುವ ಅವರು,  ‘ನಾನು ಬಹಳ ಗೌರವದಿಂದ ಕಲಾವಿದರನ್ನು ನೋಡಿಕೊಳ್ಳುತ್ತೇವೆ. ರಚಿತಾ ರಾಮ್​ ಮ್ಯಾನೇಜರ್​ಗೆ ನಾನು ಕರೆ ಮಾಡಿ ಈ ಬಗ್ಗೆ ಮಾತನಾಡಿದ್ದೇನೆ. ಎರಡು ದಿನ ಬರದೇ ಇದ್ದಿದ್ದಕ್ಕೆ ಎರಡು ವರ್ಷಗಳ ಸಂಬಂಧ ಹಾಳಾಗೋದು ನನಗೆ ಇಷ್ಟ ಇಲ್ಲ ಎಂದು ಹೇಳಿದ್ದೇನೆ. ಮೆಸೇಜ್ ಕಳುಹಿಸಿದ್ದೇನೆ. ಜನವರಿ 8ರವರೆಗೆ ಅವರು ಸರಿಯಾಗಿ ರೆಸ್ಪಾನ್ಸ್ ಮಾಡಿದರು. ಆ ಬಳಿಕ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಯಾವ ಕಲಾವಿದರೂ ಹೀಗೆ ಮಾಡಬಾರದು. ನಮ್ಮಿಂದ ಆದ ಅಗೌರವ ಏನು ಎಂಬುದನ್ನು ರಚಿತಾ ಸ್ಪಷ್ಟಪಡಿಸಬೇಕು’ ಎಂದು ನಾಗಶೇಖರ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jun 18, 2025 12:24 PM